ಸ್ವಾಭಿಮಾನ ಕಳೆದುಕೊಂಡು ಬದುಕು ನಡೆಸಬೇಡಿ: ಶ್ರೀಗಳು

0
29
loading...

ಮುದ್ದೇಬಿಹಾಳ: ಮನುಷ್ಯ ಇಂದು ಸ್ವಾರ್ಥದ ಸ್ವಾಭಿಮಾನ ಬೆಳೆಸಿಕೊಂಡು ಜೀವನ ನಡೆಸುತ್ತಿದ್ದು ಏಳ್ಗೆಗೊಳ್ಳುವವರು ಅರ್ಧಪತನಗೊಳ್ಳುವ ಬದಲು ಕಾಲೆಳೆಯುವರೇ ವಿನಾಶ ಹೊಂದುತ್ತಾರೆ ಎಂದು ಅಂಕಲಿಮಠದ ವೀರಭದ್ರ ಶ್ರೀಗಳು ಹೇಳಿದರು.
ತಾಲೂಕಿನ ಗಂಗೂರ ಗ್ರಾಮದ ಅಡವಿ ಸಿದ್ದೇಶ್ವರ ಜಾತ್ರಾ ಮಹೋತ್ಸವದ ತುಲಾಭಾರ, ಉಚಿತ ಆರೋಗ್ಯ ತಪಾಸಣಾ ಶಿಬಿರ ಸಸಿ ವಿತರಣೆ ಉಡಿ ತುಂಬುವುದು ಹಾಗೂ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಅಸೂಯೆಪಟ್ಟುಕೊಂಡು ಬೆಳೆಯಬೇಕೆಂದವನಿಗೆ ಫಲವಿಲ್ಲ. ನಾವು ಆಡುವ ಮಾತುಗಳು ಮುತ್ತಾಗಬೇಕು ಹೊರತು ಉಪ್ಪಾಗಬಾರದು ಎಂದು ಹೇಳಿದರು.
ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಹಳ್ಳಿಗಳು ರಾಜಕೀಯ ತಾಣಗಳಾಗಿ ಬದಲಾಗುತ್ತಿದ್ದು ವರ್ಷವೀಡಿ ರಾಜಕಾರಣ ಮಾಡದೇ ಸೌಹಾರ್ದ ಬದುಕು ನಡೆಸಬೇಕು.ರಾಜಕೀಯ ಪಕ್ಷಗಳಿಂದ ಇಂದು ಗ್ರಾಮೀಣ ಜನರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಾಲಾಜಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶಗೌಡ ಪಾಟೀಲ, ಅಹಲ್ಯಾಬಾಯಿ ಹೋಳ್ಕರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್‌.ಮದರಿ, ಗೋವಾ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ, ಏಪಿಎಂಸಿ ಅಧ್ಯಕ್ಷ ಗುರು ತಾರನಾಳ, ಕಾಂಗ್ರೆಸ್‌ ಮುಖಂಡ ಸಂತೋಷ ಚವ್ಹಾಣ, ಪಿಎಲ್‌ಡಿ ಬ್ಯಾಂಕ ನಿರ್ದೇಶಕ ಸಾಬಣ್ಣ ವಾಲೀಕಾರ, ಬೀರಪ್ಪ ಯರಝರಿ, ಏಪಿಎಂಸಿ ಮಾಜಿ ಸದಸ್ಯ ನಾಗಪ್ಪ ರೂಢಗಿ, ಗುತ್ತಿಗೆದಾರ ಬಿ.ಎಸ್‌.ಹೊಸೂರ, ಹಾಲುಮತ ಸಮಾಜದ ಮುಖಂಡ ಎಚ್‌.ಟಿ.ಕುರಿ, ಶಿವಾನಂದ ಸ್ವಾಮಿಗಳು ಮತ್ತಿತರರು ಇದ್ದರು.
ನಾಗಪ್ಪ ಲಕ್ಕಣ್ಣವರ ನಿರೂಪಿಸಿದರು. ಶಿಕ್ಷಕ ಎಲ್‌.ಬಿ.ಗುಬಚಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಆಶೀರ್ವಾದ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಎಲುಬು ಕೀಲು ತಪಾಸಣೆ ನಡೆಸಿ ಔಷಧಿ ವಿತರಿಸಲಾಯಿತು. ಆರೋಗ್ಯ ತಪಾಸಣಾ ಶಿಬಿರದಲ್ಲಿ ತಂಗಡಗಿಯ ವೈದ್ಯ ಡಾ.ಸಂಗಮೇಶ ದಶವಂತ,ಎ.ಪಿ.ಶಾಸ್ತ್ರೀ,ಇಸ್ಮಾಯಿಲ್‌ ಮೇತ್ರಿ,ಕೇಸಾಪೂರ,ತಾಳಿಕೋಟಿ,ಸಜ್ಜನ ಮತ್ತಿತರರು ಸಹಕಾರ ನೀಡಿದರು.

loading...