ಸ್ವಿಸ್ ದಂಪತಿ ಮೇಲೆ ದಾಳಿ: ವರದಿ ಕೇಳಿದ ಸುಷ್ಮಾ

0
20
loading...

ನವದೆಹಲಿ:- ಉತ್ತರಪ್ರದೇಶದ ಫತೇಪುರ್ ಸಿಕ್ರಿಯಲ್ಲಿ ಯುವಕರ ಗುಂಪೊಂದು ಸ್ವಿಟ್ಜರ್ಲೆಂಡ್ ಯುವ ದಂಪತಿಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಒತ್ತಾಯಿಸಿ ಲೈಂಗಿಕ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾರೆನ್ನಲಾದ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಮಾಹಿತಿ ನೀಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
ನಾನು ಈ ಕುರಿತ ವರದಿಯನ್ನು ನೋಡಿದ್ದೇನೆ. ವರದಿ ನೀಡುವಂತೆ ಉತ್ತರಪ್ರದೇಶ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದೇನೆ. ನನ್ನ ಇಲಾಖೆಯ ಅಧಿಕಾರಿಗಳು ಸ್ವಿಸ್ ದಂಪತಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಲಿದ್ದಾರೆ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

loading...