ಹವಾಮಾನ ವೈಫಲ್ಯ ಮೊದಲ ವಿಮಾನ ಲ್ಯಾಂಡಿಂಗ್ ಗೆ ವಿಘ್ನ

0
26
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ಚೆನೈದಿಂದ ಬೆಳಗಾವಿಗೆ, ಬೆಳಗಾವಿಯಿಂದ ಚೆನೈಗೆ ನೇರವಾಗಿ ಸ್ಪೈಸ್ ಜೇಟ್ ಏರಲೈನ್ಸ್ ನ ವಿಮಾನಯಾನ ಮಂಗಳವಾರದಿಂದ ಆರಂಭವಾಗಿದೆ. ಮೊದಲ ವಿಮಾನಯಾನಕ್ಕೆ ವಿಘ್ನ ಎದುರಾದ ಘಟನೆ ನಡೆಯಿತು.
ಮಂಗಳವಾರ ಮುಂಜಾನೆ 9 ಗಂಟೆಗೆ ಚೆನೈನಿಂದ ಬೆಳಗಾವಿಗೆ ಆಗಮಿಸಿದ ಸ್ಪೈಸ್ ಜೇಟ್ ಏರಲೈನ್ಸ್ ವಿಮಾನ ಸಾಂಬ್ರಾ ವಿಮಾನ ನಿಲ್ದಾದಲ್ಲಿ ಹವಾಮಾನ ವೈಫಲ್ಯದಿಂದ ಲ್ಯಾಂಡ್ ಆಗದೆ ಮರಳಿ ಬೆಂಗಳೂರಿಗೆ ತೆರಳಿದ ಘಟನೆ ಜರುಗಿದೆ.
ಬೆಂಗಳೂರಿನಿಂದ ಮರಳಿ ಸ್ಪೈಸ್ ಜೇಟ್ ಏರಲೈನ್ಸ್ ವಿಮಾನ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಚಿವ ವಿನಯ ಕುಲಕರ್ಣಿ, ಹಿರಿಯ ಐಎಎಸ್‌ ಅಧಿಕಾರಿ ಶಾಲನಿ ರಜನೀಶ ಅವರು ಸೇರಿದಂತೆ ಅನೇಕ ಪ್ರಯಾಣಿಕರು ಮರಳಿ ಬೆಂಗಳೂರಿಗೆ ತೆರಳಿ ಬೆಳಗಾವಿಗೆ ಆಗಮಿಸಬೇಕಾಯಿತ್ತು.

loading...