48ನೇ ರಾಷ್ಟ್ರಮಟ್ಟದ ಕೇಂದ್ರೀಯ ವಿದ್ಯಾಲಯ ಕ್ರೀಡಾಕೂಟಕ್ಕೆ ಚಾಲನೆ

0
20
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗಿಯಾಗಿ ಉತ್ತಮ ಆಟವನ್ನು ಪ್ರದರ್ಶಿಸಿ ಗೆಲುವು ನಿಮ್ಮದಾಗಿಸಿ ಎಂದು  ಒಂದನೇ ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲ ಸಿಎಚ್ ವಿಜಯರತ್ನಂ ಹೇಳಿದರು.
ಬುಧವಾರ 48ನೇ ರಾಷ್ಟ್ರಮಟ್ಟದ ಕೇಂದ್ರೀಯ ವಿದ್ಯಾಲಯ ಕ್ರೀಡಾಕೂಟ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು. ವಿದ್ಯಾರ್ಥಿಗಳು ಆಟದ ನಿಯಮವನ್ನು ಪಾಲನೆಮಾಡಿ ಆಟವಾಡಿ ಆಟದಲ್ಲಿ ಸೋಲು ಗೇಲವು ಎರಡು ಇದ್ದುದ್ದೆ ಅದನ್ನು ಸಮಾನವಾಗಿ ಸ್ವೀಕರಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ 18 ಕೇಂದ್ರಿಯ ವಲಯಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಕ್ರೀಡಾ ಪ್ರತಿಜ್ಞೆ ಭೋದಿಸಿದರು.
ಐದು ದಿನಗಳ ನಡೆಯಲಿರುವ ಕ್ರೀಡೆಯಲ್ಲಿ 17, 19 ಕಡಿಮೆ ವಯಸ್ಸಿನ ವಿದ್ಯಾರ್ಥಿನಿಯರು ಭಾಗಿಯಾಗಿದ್ದಾರೆ. ಸ್ಕೇಟಿಂಗ್ ಸ್ಪರ್ಧೆಯ ಶಿವಗಂಗಾ ರೋಲರ್ ಸ್ಕೇಟಿಂಗ್ ಅಕಾಡೆಮಿಯಲ್ಲಿ 102 ವಿದ್ಯಾರ್ಥಿನಿಯರು ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ. ಸೂಟಿಂಗ್ ಸ್ಪರ್ಧೆಯಲ್ಲಿ 59 ವಿದ್ಯಾರ್ಥಿನಿಯರು ಎಂಎಲ್‍ಐಆರ್ಸಿ ಶೂಟಿಂಗ್ ರೇಂಜ್ ನಲ್ಲಿ ಭಾಗಿಯಾಗಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಕ್ರೀಡಾ ಪಟುಗಳು, ಬೋದಕ ಬೋದಕೇತರ ಸಿಬ್ಬಂದಿಗಳು ಇದ್ದರು.

 

loading...