ಅಕ್ರಮ ಮದ್ಯ ಮಾರಾಟ, ಜೂಜಾಟ ತಡೆಗೆ ಮನವಿ

0
27
loading...

ಮುಂಡಗೋಡ: ಅಕ್ರಮ ಮದ್ಯ ಮಾರಾಟ ಹಾಗೂ ಜೂಜಾಟ ತಡೆಯುವಂತೆ ಒತ್ತಾಯಿಸಿ ತಾಲೂಕಿನ ಚೌಡಳ್ಳಿ ಗ್ರಾಮದ ಮಹಿಳೆಯರು ಹಾಗೂ ಸಂಘ ಸಂಸ್ಥೆ ಪದಾಧಿಕಾರಿಗಳು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಮತ್ತು ಮುಂಡಗೋಡ ಪೊಲೀಸ ಠಾಣೆಗೆ ಮನವಿ ಸಲ್ಲಿಸಿದರು.
ಚೌಡಳ್ಳಿ ಗ್ರಾಮದ ಅಂಗಡಿಗಳಲ್ಲಿ ಯಾವುದೇ ಇಲಾಖೆಯ ಭಯವೂ ಇಲ್ಲದೇ ನಿರ್ಭಿಡೆಯಿಂದ ಸಾರಾಯಿ ಮಾರಾಟ ಮಾಡುತ್ತಿದ್ದು ಗ್ರಾಮದ ಹಿರಿಯರು, ಯುವಕರು, ಹಾಗೂ ಶಾಲಾ ಮಕ್ಕಳು ಮದ್ಯವ್ಯಸನಿಗಳಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದ್ದಲ್ಲದೇ ಕುಟುಂಬದ ನಿರ್ವಹಣೆಗಾಗಿ ಕೂಲಿ ನಾಲಿ ಮಾಡಿ ಕೂಡಿಟ್ಟ ಹಣವನ್ನು ಜೂಜಾಟಕ್ಕೆ ಹಾಳು ಮಾಡಿ ಕುಟುಂಬವನ್ನು ಸಾಲದ ಶೂಲಕ್ಕೆ ಸಿಲುಕಿಸಿದ್ದಾರೆ. ಸಂಜೆಯಾಗುತ್ತಿದ್ದಂತೆ ಮದ್ಯಪಾನ ಮಾಡಿ ಅವಾಚ್ಯ ಶಬ್ದಗಳನ್ನು ಬಳಸುವುದರಿಂದ ಗ್ರಾಮದಲ್ಲಿ ಸಭ್ಯ ನಾಗರಿಕರು ಹಾಗೂ ಮಹಿಳೆಯರು ಓಡಾಡುವುದು ಕಷ್ಟವಾಗಿದೆ. ಆದ್ದರಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕು.
ಈ ಹಿಂದೆ ತಮಗೆ ಅಂಚೆ ಮೂಲಕ ಅರ್ಜಿ ಸಲ್ಲಿಸಿ ಮನವಿ ಸಲ್ಲಿಸಿದರೂ ಕೂಡ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ. ಒಂದು ವೇಳೆ ಈಗಲೂ ಸಹ ಕ್ರಮ ಕೈಗೊಳ್ಳದಿದ್ದರೆ ಗ್ರಾಮದ ಹಿತ ದೃಷ್ಟಿಯಿಂದ ಉಗ್ರ ಪ್ರತಿಭಟನೆಯ ಹಾದಿ ಹಿಡಿಯಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ರತ್ನವ್ವಾ ವಾಲ್ಮೀಕಿ, ಕಮಲವ್ವ ಭದ್ರಾಪುರ, ನೀಲವ್ವಾ ಭುಜಂಗಿ, ಸುಗಂದವ್ವ ಮಿಶ್ರಿಕೋಟಿ, ಪರಶುರಾಮ ತಹಶೀಲ್ದಾರ, ಮೈಲಾರಿ ಹುನಗುಂದ, ಸಕ್ಕುಬಾಯಿ ಜಗದಳ್ಳಿ, ಲಕ್ಷ್ಮಿ ವಾಲ್ಮೀಕಿ, ದೇವಕ್ಕ ಹುಲಸೋಗಿ, ಗೋಪಾಲ ಕೊಪ್ಪದ, ಮಹಾದೇವ ನವಲಗುಂದ, ಮಹೇಶ ಓಣಿಕೇರಿ, ವೈ.ಪಿ.ಪಾಟೀಲ, ಅಮರೇಶ ವಾಲ್ಮೀಕಿ, ನಿಂಗಜ್ಜ ವಾಲ್ಮೀಕಿ, ನಿಂಗರಾಜ ಬೆಳವತ್ತಿ, ಮಹಾದೇವ, ರಾಘವೇಂದ್ರ ಮುಂತಾದವರಿದ್ದರು.

loading...