ಅವ್ಯವಹಾರ ತನಿಖೆ ನಡೆಸಲು ರೈತರು ಮನವಿ

0
33
loading...

ಕಲಾದಗಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಕೆಲ ದಿನಗಳಿಂದ ಸಮಸ್ಯಗಳ ಮೇಲೆÀ ಸಮಸ್ಯೆಗಳು ಉದ್ಬವಿಸುತ್ತಿವೆ, ಕಾರ್ಯದರ್ಶಿ ಎಸ್.ಆರ್.ಪಾಟೀಲ ಎಂಬವರು ರೈತರಿಗೆ ಸರಿಯಾದ ಡಿವಿಡೆಂಡ್ ಹಣವನ್ನು ಹಂಚಿಕೆ ಮಾಡದೆ ಇರುವುದು ರೈತರ ಟ್ಯಾಕ್ಟರ್ ಮಾಲೀಕರಿಗೆ ಗಮನಕ್ಕಿಲ್ಲದೆ ಇನ್ಸೂರೆನ್ಸ್ ಹಣ ಪಾವತಿಸುವುದು ಹೈನುಗಾರಿಕೆ ಯೋಜನೆಯಡಿಯಲ್ಲಿ ಸಾಲ ಪಡೆದಿದ್ದ ರೈತರ ಸಬ್ಸಿಡಿ ಹಣವನ್ನು ತಾನೇ ತೆಗೆದುಕೊಂಡಿರುವುದು ಗಮನಿಸಿ ಕಾರ್ಯದರ್ಶಿ ಕೆಲಸ ಮಾಡಲು ಸೂಕ್ತವಿಲ್ಲ ಎಂದು ಅ.30 ರಂದು ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಕಾರ್ಯದರ್ಶಿಯನ್ನು ಸೇವೆಯಿಂದ ವಜಾಗೊಳಿಸುವ ನಿರ್ಣಯ ತಗೆದುಕೊಂಡಿತ್ತು.
ಈಗ ಸಹಕಾರ ಸಂಘದ ಅಧಿನಿಯಮದ 64 ರ ಕಲಂ ಪ್ರಕಾರ ಸಂಘದ ಹಣ ದುರುಪಯೋಗ ಮಾಡಿಕೊಂಡಿರುವ ಆರೋಪದ ಮೇಲೆ ತನಿಖೆ ನಡೆಸಲು ಆದೇಶವಾಗಿದೆ. ಎಷ್ಟೋ ಬೀಲ್ ಸಾಲಗಾರರ ಹೆಸರಿನಲ್ಲಿ ನಕಲಿ ಸಹಿ ಮಾಡಿ ಸಾಲವನ್ನು ತೆಗೆದುಕೊಂಡಿರುವುದು ಕಂಡುಬಂದಿದೆ. ಈ ಸಂಘದಲ್ಲಿ ಕಾರ್ಯದರ್ಶಿ ಬೇಜವಾಬ್ದಾರಿತನದಿಂದ ಕಳೆದ 17 ವರ್ಷದಿಂದ ಸಾಕಷ್ಟು ಅವ್ಯವಹಾರ ನಡೆದಿದೆ. ಆದ್ದರಿಂದ ತನಿಖೆ ಕೈಗೊಳ್ಳಬೇಕು ಇಲ್ಲಿ 18 ಕೋಟಿ ವ್ಯವಹಾರಿಸುವ ಸಂಘವಾಗಿದ್ದು ಸೂಕ್ತ ರೀತಿಯಲ್ಲಿ ತನಿಖೆ ಕೈಗೊಳ್ಳಬೇಕೆಂದು ರೈತರಾದ ಉಸ್ಮಾನಸಾಬ ರೋಣ, ಡಿ.ಡಿ.ದುರ್ವೆ, ರೈಮಾನಸಾಬ ಬಾರುದವಾಲೆ, ದರಿಯಪ್ಪ ಹೊಸಕೋಟಿ, ಹೊಳಬಸಪ್ಪ ಪಾನಿಶೆಟ್ಟಿ, ಅಶೋಕ ಅಂಗಡಿ, ರಾಜು ಪೂಜಾರಿ, ಬಾಬು ತೇಲಿ, ಶ್ರೀಧರ ವಾಘ, ರಹಿಮಾನಸಾಬ ಮಕಾನದಾರ, ಕೃಷ್ಟಪ್ಪ ಶಿಲ್ಪಿ, ಗುರುಬಸಪ್ಪ ಯಾದವಾಡ, ಇಬ್ರಾಹಿಮ ಸೋಲ್ಜರ, ಇಬ್ರಾಹಿಮ ರೋಣ, ಶ್ರೀಕಾಂತ ದುದನಕರ, ಆಡಳಿತ ಮಂಡಳಿ ಸದಸ್ಯರಾದ. ಶೇಷಣಗೌಡ ಪಾಟೀಲ, ರಮೇಶ ಶಿವನಿಚ್ಚಿ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಒತ್ತಾಯಿಸಿದರು.

loading...