ಆಯಷಸ್ ಟೆಸ್ಟ್: ಬ್ರಾಡ್ಮನ್ ದಾಖಲೆ ಸನಿಹ, ಸಚಿನ್ ದಾಖಲೆ ಮುರಿದ ಸ್ಮಿತ್!

0
22
loading...

ಆಯಷಸ್ ಸರಣಿಯ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಶತಕ ಸಿಡಿಸಿದ ನಾಯಕ ಸ್ಮಿತ್ ಇನ್ನಿಂಗ್ಸ್ ಹಿನ್ನಡೆಯ ಭೀತಿಯಿಂದ ತಮ್ಮ ತಂಡವನ್ನು ಪಾರು ಮಾಡಿದ್ದಾರೆ. ಟೆಸ್ಟ್‍ನಲ್ಲಿ ಸಚಿನ್ ತಮ್ಮ 21ನೇ ಶತಕ ಸಿಡಿಸಲು 110 ಇನ್ನಿಂಗ್ಸ್‍ಗಳನ್ನು ಆಡಿದ್ದರು. ಆದರೆ ಸ್ಮಿತ್ ತಮ್ಮ 21ನೇ ಟೆಸ್ಟ್ ಶತಕ ಸಿಡಿಸಲು ತೆಗೆದುಕೊಂಡ ಇನ್ನಿಂಗ್ಸ್‍ಗಳ ಸಂಖ್ಯೆ 105. ಅತೀ ಕಡಿಮೆ ಇನ್ನಿಂಗ್ಸ್‍ನಲ್ಲಿ 21ನೇ ಟೆಸ್ಟ್ ಶತಕ ಸಿಡಿಸಿದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ದಂತಕತೆ ಡಾನ್ ಬ್ರಾಡ್ಮನ್ ಇದ್ದಾರೆ. ಕೇವಲ 56 ಇನ್ನಿಂಗ್ಸ್‍ಗಳಲ್ಲಿ ಬ್ರಾಡ್ಮನ್ 21ನೇ ಟೆಸ್ಟ್ ಸೆಂಚುರಿ ಬಾರಿಸಿದ್ದರು.

ಭಾರತದ ಮತ್ತೋರ್ವ ಬ್ಯಾಟಿಂಗ್ ದಂತಕತೆ ಸುನಿಲ್ ಗವಾಸ್ಕರ್ ಈ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಗವಾಸ್ಕರ್ 98 ಇನ್ನಿಂಗ್ಸ್‍ಗಳಲ್ಲಿ 21ನೇ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದ್ದರು. ಪಾಕಿಸ್ತಾನದ ಮೊಹಮ್ಮದ್ ಯೂಸೂಫ್ (120 ಇನ್ನಿಂಗ್ಸ್) ಈ ಸಾಲಿನಲ್ಲಿ 5 ನೇ ಸ್ಥಾನ ಪಡೆದುಕೊಂಡಿದ್ದಾರೆ.

ಬ್ರಾಡ್ಮನ್ ದಾಖಲೆ ಸನಿಹ:

ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿ ಅತೀ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್ ದಂತಕತೆ ಡಾನ್ ಬ್ರಾಡ್ಮನ್ ಮೊದಲಿಗರಾಗಿದ್ದಾರೆ. ಒಟ್ಟು 38 ಇನ್ನಿಂಗ್ಸ್‍ನಲ್ಲಿ ಆಸೀಸ್ ಪಡೆಯನ್ನು ಮುನ್ನಡೆಸಿರುವ ಬ್ರಾಡ್ಮನ್ 14 ಟೆಸ್ಟ್ ಸೆಂಚುರಿಗಳನ್ನು ಪೂರೈಸಿದ್ದಾರೆ. ಬ್ರಾಡ್ಮನ್ ದಾಖಲೆ ಮುರಿಯಲು ಸ್ಮಿತ್‍ಗೆ ಇನ್ನೆರಡು ಶತಕಗಳ ಅವಶ್ಯಕತೆ ಇದೆ.

loading...