ಇಂದು ಬೆಳಗಾವಿ ಜಿಲ್ಲೆಗೆ ಬಿಜೆಪಿಯ ಪರಿವರ್ತನಾ ರ್ಯಾಲಿ ಪ್ರವೇಶ: ಉಜ್ವಲಾ

0
28
loading...

ಖಾನಾಪುರ: ಕಳೆದ ನ.2ರಿಂದ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯಾದ್ಯಂತ ಸಂಚಾರ ಆರಂಭಿಸಿರುವ ಪರಿವರ್ತನಾ ರ್ಯಾಲಿ ಗುರುವಾರ ಉತ್ತರ ಕನ್ನಡ ಜಿಲ್ಲೆಯಿಂದ ಬೆಳಗಾವಿ ಜಿಲ್ಲೆಗೆ ಪ್ರವೇಶಿಸಲಿದ್ದು, ಒಂದು ವಾರದ ಕಾಲ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ ಎಂದು ಬಿಜೆಪಿ ಮುಖಂಡೆ ಉಜ್ವಲಾ ಬಸವಣ್ಣಾಚೆ ಹೇಳಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ವಿಶ್ರಾಂತಿಗೃಹದಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಸಂಚರಿಸುತ್ತಿರುವ ಯಾತ್ರೆಗೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಈಗಾಗಲೇ ದಕ್ಷಿಣ ಕರ್ನಾಟಕದ ಅರ್ಧ ಭಾಗ ಸಂಚರಿಸಿದ ಯಾತ್ರಿ ಮೊದಲ ಬಾರಿಗೆ ಉತ್ತರ ಕರ್ನಾಟಕಕ್ಕೆ ಪಾದಾರ್ಪಣೆ ಮಾಡಲಿದ್ದು, ಯಾತ್ರೆಯ ಸ್ವಾಗತಕ್ಕಾಗಿ ಪೂರ್ವಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದರು.
ಪಕ್ಷದ ಬ್ಲಾಕ್ ಅಧ್ಯಕ್ಷ ವಿಠ್ಠಲ ಪಾಟೀಲ ಮಾತನಾಡಿ, ಯಾತ್ರೆಯನ್ನು ಯಶಸ್ವಿಗೊಳಿಸಲು ಪಕ್ಷದ ಸ್ಥಳೀಯ ಮುಖಂಡರಾದ ಮಾಜಿ ಶಾಸಕ ಪ್ರಹ್ಲಾದ ರೇಮಾಣಿ, ಸಂಜಯ ಕುಬಲ, ಮಂಜುಳಾ ಕಾಪಸೆ, ವಲ್ಲಭ ಗುಣಾಜಿ, ಸುಭಾಸ ಗುಳಶೆಟ್ಟಿ, ಬಾಬಣ್ಣ ಪಾಟೀಲ, ಬಾಬುರಾವ್ ದೇಸಾಯಿ, ಧನಶ್ರೀ ಸರ್‍ದೇಸಾಯಿ, ವಿಠ್ಠಲ ಹಲಗೇಕರ ಮತ್ತಿತರರು ಶ್ರಮಿಸುತ್ತಿದ್ದಾರೆ. ಪಟ್ಟಣದಲ್ಲಿ ಗುರುವಾರ ಸಂಜೆ ಬಹಿರಂಗ ಸಮಾವೇಶ ಸಂಪನ್ನಗೊಂಡ ಬಳಿಕ ಯಾತ್ರೆ ದೇವಲತ್ತಿ, ಪಾರಿಶ್ವಾಡ ಮಾರ್ಗವಾಗಿ ಬೈಲಹೊಂಗಲಕ್ಕೆ ತೆರಳಿ ವಾಸ್ತವ್ಯ ಹೂಡಲಿದೆ ಎಂದು ವಿವರಿಸಿದರು.
ಸಭೆಯಲ್ಲಿ ಸಂಜು ಕಂಚಿ, ವೀರೇಶ ದೇವರಮನಿ, ಅಪ್ಪಯ್ಯ ಕೋಡೊಳಿ, ಅಭಿಜಿತ ಚಾಂದಿಲಕರ, ಅಶೋಕ ನೇಸರೆಕರ, ಶ್ರೀಕಾಂತ ಇಟಗಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಕಾರ್ಯಕಾರಿಣಿ ಸದಸ್ಯರು ಇದ್ದರು.

loading...