ಈ ಬಾರಿಯ ಬೆಳಗಾವಿ ಅಧಿವೇಶನಕ್ಕೆ ಪೊಲೀಸರ ನಿರಾತಂಕ – ಊಟೋಪಹಾರಕ್ಕೆ ಕೊರತೆಯಿಲ್ಲ – ಸಿಬ್ಬಂದಿಗಳ ಆರೋಗ್ಯಕರ ಸೇವೆಗೆ ಒತ್ತು

0
36
loading...

ರಾಜಶೇಖರಯ್ಯಾ ಹಿರೇಮಠ
ಬೆಳಗಾವಿ:11 ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ನಡೆಯಲಿರುವ ಈ ಬಾರಿಯ ಅಧಿವೇಶನದ ಸಂದರ್ಭದಲ್ಲಿ ಪೊಲೀಸರು ಯಾವುದೇ ರೀತಿಯ ಹೊಟ್ಟೆ ಮತ್ತು ವಸತಿಯ ಅನುಲಿ ಅನುಭವಿಸುವುದಿಲ್ಲ.
ಈ ಬಾರಿ ಚಳಿಗಾಲ ಅಧಿವೇಶನಕ್ಕೆ ಆಗಮಿಸುವ ಪೊಲೀಸರು ಸ್ಟ್ರಾಂಗ್ ಆಗಿ ಅಧಿವೇಶನದ ಆರೋಗ್ಯಕರ ಅನುಭವ ಅನುಭವಿಸಲಿದ್ದಾರೆ. ಈ ಹಿಂದೆ ನಡೆದ ಬೆಳಗಾವಿಯ ಅಧಿವೇಶನದಲ್ಲಿ ಅನುಭವಿಸಿದ ಹೊಟ್ಟೆಗಳ ಅಜಿರ್ಣವನ್ನು ಈ ಬಾರಿ ಅನುಭವಿಸಲಾರರು. ಅದಕ್ಕೆ ಕಾರಣ ಸರಕಾರ ಅಧಿವೇಶನದ ಕರ್ತವ್ಯಕ್ಕೆ ಬಂದ ಪೊಲೀಸರಿಗೆ ಉತ್ತಮ ಆಹಾರ ನೀಡುವ ನಿರ್ಧಾರ ಕೈಗೊಂಡಿದ್ದು ಪೊಲೀಸರ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮಗಳು ಬೀರದಿರಲ್ಲಿ ಎನ್ನುವ ಉದ್ದೇಶದಿಂದ ಬಿಸಿಯಾದ ಊಟವನ್ನು ಕರ್ತವ್ಯದಲ್ಲಿರುವ ಎಲ್ಲ ಪೊಲೀಸರಿಗೆ ಊಣಬಡೆಸುವ ಮತ್ತು ಕರ್ತವ್ಯದಲ್ಲಿರುವ ವಿವಿಧೆಡೆಗಳಿಂದ ಬಂದ ಪೊಲೀಸರಿಗೆ ಯಾವುದೇ ತೊಂದರೆಯಾದ ರೀತಿಯಲ್ಲಿ ಅವರ ಆರೋಗ್ಯಕ್ಕೆ ಹಾನಿಯಾಗದ ರೀತಿಯಲ್ಲಿ ನಗರ ಪೊಲೀಸ್ ಇಲಾಖೆ ನೋಡಿಕೊಳ್ಳುತ್ತಿದೆ.
ಶಾಸಕರಿಗೆ ಮತ್ತು ಸಚಿವರಿಗೆ ಅಧಿವೇಶನದಲ್ಲಿ ರಾತ್ರಿ ಊಟ ಇಲ್ಲದಿದ್ದರೂ ಸಹಿತ ಪೊಲೀಸರಿಗೆ ಯಾವುದೇ ರೀತಿಯ ಸಮಸ್ಯೆಯಾಗದ ರೀತಿಯಲ್ಲಿ ಅವರ ಆರೋಗ್ಯಕ್ಕೆ ಪೂರಕವಾಗಿ ಆಹಾರ ಮತ್ತು ಕಡ್ಡಾಯವಾಗಿ ಬೀಸಿ ನೀರು ಸೇರಿದಂತೆ ಊಪಹಾರ ಹಾಗೂ ಸುಸಜ್ಜಿತ ಶೌಚಾಲಯಗಳನ್ನು ಕಲ್ಪಿಸಲಾಗಿದೆ.
ಈ ಹಿಂದಿನ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಹೊಟ್ಟೆ ಕೆಡೆಸಿಕೊಂಡು ಪರದಾಡುತ್ತಿದ್ದ ರಾಜ್ಯದ ಕರ್ತವ್ಯ ನಿರತ ಪೊಲೀಸರ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಈ ಬಾರಿಯ ಚಳಿಗಾಲ ಅಧಿವೇಶನದಲ್ಲಿ ಕರ್ತವ್ಯ ನಿರತ ಪೊಲೀಸರ ಹೊಟ್ಟೆಗೆ ತೊಂದರೆಯಾಗದ ಮತ್ತು ಹೊಟ್ಟೆ ಕೆಡದ ರೀತಿಯಲ್ಲಿ ಬಿಸಿಯೂಟದ ಭೋಜನ ಊಣ ಬಡಿಸುತ್ತಿರುವುದು ಶ್ಲಾಘನೀಯ.
ಈ ಬಾರಿ ಬೆಳಗಾವಿ ಅಧಿವೇಶನಕ್ಕೆ ಬರುವ ಕರ್ತವ್ಯದಲ್ಲಿರುವ ಪೊಲೀಸರು ನಿತ್ಯ ಬೀಸಿನೀರಿನ ಜಗಳಕ ಮಾಡಲಿದ್ದಾರೆ. ಅಷ್ಟೆ ಅಲ್ಲ. ರುಚಿ ಶುಚಿಯಾದ ಆಹಾರ ಸೇವನೆಯೊಂದಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಬೆಳಗಾವಿ ಅಧಿವೇಶನದ ಆರೋಗ್ಯವನ್ನು ಕಾಪಾಡಲಿದ್ದಾರೆ.
ಶುದ್ಧ ರುಚಿ, ಶುಚಿಯಾದ ಗೋಧಿಯ ಚಪ್ಪಾತಿ, ಮನೆಯಲ್ಲಿ ಊಟ ಮಾಡುವ ಅನ್ನದ ರುಚಿ, ಬೆಳೆಯ ಸಾರು ಜೊತೆಗೆ ಉಪ್ಪಿನ ಕಾಯಿ ಸೇರಿದಂತೆ ಬೆಳಗಿನ ಲಘು ಊಪಹಾರವಾಗಿ ಉಪ್ಪಿಟ್ಟು, ಸಿಹಿಯಾಗಿ ಸೀರಾ ಮತ್ತೇ ಪೂರಿ ಭಾಜಿ ಇಂಥಾದ ಹೊಸ ರುಚಿಗಳ ಅನುಭವಗಳನ್ನು ಮತ್ತು ನಾಲಗೆಯ ಸವಿರುಚಿಗಳನ್ನು ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲಿರುವ ಪೊಲೀಸರು ಅನುಭವಿಸಲಿದ್ದಾರೆ.
ಈ ಹಿಂದೆ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ಹೊಟ್ಟೆ ಕೆಟ್ಟು ಪಾಕೀಟಿನ ಅನಾರೋಗ್ಯದ ಆಹಾರ ಸೇವಿಸಿ ಕರ್ತವ್ಯ ನಿರ್ವಹಿಸಲಾಗದೆ. ಬೆಳಗಾವಿ ಅಧಿವೇಶನ ನಮಗೇಕಪ್ಪ. ಇಲ್ಲಿನ ಕರ್ತವ್ಯವೇ ಬೇಡ ಎನ್ನುವ ನಿಲುವಿಗೆ ಬಂದ ಕನ್ನಡ ಪೊಲೀಸರಿಗೆ ಈ ಬಾರಿ ಉತ್ತರ ಕರ್ನಾಟಕದ ಸವಿರುಚಿಯ ಮನೆಯ ಊಟ ಸಿಗಲಿದೆ. ಇನ್ನೊದೆಡೆ ಅಧಿವೇಶನಕ್ಕೆ ಬರಲಿರುವ ಶಾಸಕ, ಸಚಿದ್ವಯರಿಗೆ ರಾತ್ರಿ ಊಟ ಬಂದ್. ಆದರೆ ಅಧಿವೇಶನದ ನಿರ್ವಹಣೆಗೆ ಬರಲಿರುವ ಪೊಲೀಸರಿಗೆ ಮತ್ತು ಅಧಿಕಾರಿಗಳಿಗೆ ಯಾವುದೇ ರೀತಿ ಊಪಹಾರ ಮತ್ತು ಊಟದ ಕೊರತೆಯಾಗದ ರೀತಿಯಲ್ಲಿ ಬಿಸಿಯಾಗಿ ಊಣ ಬಡೆಸುವ ಯೋಜನೆಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತ ಕಚೇರಿ ಹಾಕಿಕೊಂಡಿರುವುದು ಶ್ಲಾಘನೀಯ.
ಈ ಹಿಂದೆ ನಡೆದ ಅಧಿವೇಶನಗಳಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ಅಧಿವೇಶನದ ಪೊಲೀಸ್ ಸಿಬ್ಬಂದಿಗೆ ಈ ಬಾರಿ ಸಂಪೂರ್ಣವಾಗಿ ದಿನದ 24 ಗಂಟೆಗಳ ಕಾಲ ಆರೋಗ್ಯ ಚಿಕಿತ್ಸೆ ಒದಗಿಸಲಾಗಿದೆ.
ಒಟ್ಟಾರೆಯಾಗಿ ಈ ಬಾರಿ ಅಧಿವೇಶನಕ್ಕೆ ಬರಲಿರುವ ಪೊಲೀಸರು ಪೊಲೀಗಳಾಗದೆ, ಅನಾರೋಗ್ಯಕ್ಕೆ ಈಡಾಗದೆ ಸಂಪೂರ್ಣವಾಗಿ ತಮ್ಮ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಸರಕಾರ ಈ ಎಲ್ಲ ಪೊಲೀಸರಿಗೆ ಆಹಾರ, ವಿಹಾರ ಮತ್ತು ಆರೋಗ್ಯಯುತವಾದ ಸೇವೆಯನ್ನು ಕೊಡಮಾಡುತ್ತಿದೆ. ಅಷ್ಟೆ ಅಲ್ಲ ಕರ್ತವ್ಯ ನಿರ್ವಹಣೆಯ ಬಳಿಕ ಹಾಕಿಕೊಳ್ಳುವ ಚಪ್ಪಲಿಗೂ ಸರಕಾರ ಸ್ಲೀಪರ್ ದಯಪಾಲಿಸಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಪೊಲೀಸರು ಆರೋಗ್ಯಯುತವಾಗಿ ಅಧಿವೇಶನವನ್ನು ಬೆಳಗಾವಿಮಟ್ಟಿಗೆ ಕೊಡಮಾಡಲಿದ್ದಾರೆ.
ಮಂಡ್ಯ, ಮೈಸೂರು, ಕೊಡುಗು, ಶಿವಮೊಗ್ಗ, ಡಾವಣಗೇರೆ,ಬೆಂಗಳೂರು, ರಾಯಚೂರು, ಹುಬ್ಬಳ್ಳಿ – ಧಾರವಾಡ, ಗದಗ, ಬಾಗಲಕೋಟ ಸೇರಿದಂತೆ ಬೆಳಗಾವಿ ಅಧಿವೇಶನಕ್ಕೆ ಬರಲಿರುವ ಹೊರ ಜಿಲ್ಲೆಯ ಎಲ್ಲ ಪೊಲೀಸರಿಗೆ ಹೊಟ್ಟೆ ನೋವಾಗದಂತೆ ಕರ್ತವ್ಯಕ್ಕೆ ಲೋಪವಾಗದಂತೆ, ಆರೋಗ್ಯಕ್ಕೆ ಹಾನಿಯಾಗದಂತೆ ಊಪಹಾರ ಆಹಾರ ಊಟದ ವ್ಯವಸ್ಥೆ ಕಲ್ಪಿಸುತ್ತಿರುವುದು ಇದೇ ಪ್ರಥಮ ಬಾರಿ.
ಈ ಮೊದಲು ಪೊಲೀಸ್ ವಸತಿ ಗೃಹ ಅಷ್ಟೆ ಅಲ್ಲದೆ ಸಚಿವ, ಶಾಸಕರಿಗೆ ವಸತಿ ಗೃಹ, ಊಟದ ವ್ಯವಸ್ಥೆ ಎಲ್ಲ ಸರಕಾರದ ಹೊಣೆಗಾರಿಕೆಗಳಾಗಿದ್ದರೂ ಇದನ್ನು ಸರಕಾರ ನಿರ್ವಹಿಸುವಲ್ಲಿ ಬೇಜವಾಬ್ದಾರಿಯಲ್ಲಿದೆ. ಸುವರ್ಣ ವಿಧಾನ ಸೌಧ ಬೆಳಗಾವಿಯಲ್ಲಿ ನಿರ್ಮಾಣವಾದರೂ ಶಾಸಕರ ಭವನ ನಿರ್ಮಾಣವಾಗಿಲ್ಲ. ಬೆಳಗಾವಿಯ ಲಾಡ್ಜಗಳೆಲ್ಲ ತುಂಬಿ ಹೋಗುವ ಸಂಭವಗಳೆ ಹೆಚ್ಚಾಗಿದ್ದು, ಇತ್ಯಾದಿ ಕೆಲಸಗಳಿಗೆ ಬರುವ ನಿತ್ಯದ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಜನರಿಗೆ ವಸತಿ ಸಮಸ್ಯೆ ನಿರ್ಮಾಣವಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಈ ಕಾರಣದಿಂದ ಈ ಬಾರಿಯ ಚಳಿಗಾಲ ಅಧಿವೇಶನ ಶಾಸಕರ ಭವನ ನಿರ್ಮಾಣಕ್ಕೆ ಅಡಿಗಲ್ಲು ಶಂಕು ಸ್ಥಾಪನೆ ಮಾಡುವ ಮೂಲಕ ಶಾಸಕರಿಗಾಗಿ ಪ್ರತ್ಯೇಕ ಶಾಸಕರ ಭವನ ನಿರ್ಮಿಸುವ ಮೂಲಕ ತನ್ನ ನಿಲುವಳಿ ಸ್ಪಷ್ಟಪಡಿಸಬೇಕಿದೆ.
ಅಂದಾಗ ಮಾತ್ರ ಉಳಿದ ವಸತಿಗಳಿಗೆ, ಅಧಿವೇಶನದ ಕರ್ತವ್ಯಕ್ಕೆ ಬರುವ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ವಸತಿಯನ್ನು ನಿಖರವಾಗಿ ಕಲ್ಪಿಸುವ ಯೋಗ್ಯತೆ ಸರಕಾರಕ್ಕೆ ಬರುತ್ತದೆ. ಇಲ್ಲದಿದ್ದಲ್ಲಿ ದುಂದು ವೆಚ್ಚದ ಅಧಿವೇಶನ ಬೇಸರ ಎನ್ನಿಸುತ್ತದೆ. ಅಷ್ಟೆ ಅಲ್ಲ ರಾಜ್ಯಕ್ಕೆ ಬೊಕ್ಕಸದ ಹೊರೆಯಾಗಿ ಪರಿಣಮಿಸುತ್ತದೆ.

ಬಾಕ್ಸ್
ಈ ಬಾರಿಯ ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಕರ್ತವ್ಯಕ್ಕೆ ಬರಲಿರುವ ಪೊಲೀಸ್ ಸಿಬ್ಬಂದಿಗಳಿಗೆ ಯಾವುದೇ ರೀತಿಯ ಊಟೋಪಚಾರದ, ವಸತಿಯ, ವಿಹಾರದ, ಆರೋಗ್ಯದ ಸಮಸ್ಯೆಗಳಾದ ರೀತಿಯಲ್ಲಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಕಚೇರಿ ಕ್ರಮ ಕೈಗೊಂಡಿದೆ. ಪೊಲೀಸರ ವಸತಿ ವಿಹಾರಕ್ಕೆ ಮತ್ತು ಕರ್ತವ್ಯಕ್ಕೆ ಯಾವುದೇ ರೀತಿ ಸಮಸ್ಯಯಾಗದ ರೀತಿಯಲ್ಲಿ ಕ್ರಮ ಕೈಗೊಂಡಿದೆ.
ಅಮರನಾಥ ರೆಡ್ಡಿ
ಡಿಸಿಪಿ

 

loading...