ಉತ್ತರ ಕರ್ನಾಟಕದ ಅಭಿವೃದ್ಧಿಯ ಚಳಿಗಾಲ ಅಧಿವೇಶನ ಸ್ಪಷ್ಟವಾಗಿ ನೆಗೆದು ಬಿದ್ದಂತಾಗಿದೆ

0
33
loading...

ಕನ್ನಡಮ್ಮ ಸುದ್ದಿ
ಸುವರ್ಣ ವಿಧಾನ ಸೌಧ, ಬೆಳಗಾವಿ:23 ಉತ್ತರ ಕರ್ನಾಟಕದ ಸಮಸ್ಯೆಯನ್ನು ಮುಂದಿಕೊಟ್ಟು ಸ್ಮಾರ್ಟ್ ಸಿಟಿಯ ಶಕ್ತಿ ಕೇಂದ್ರವಾದ ಸುವರ್ಣ ವಿಧಾನ ಸೌಧದಲ್ಲಿ ಹತ್ತು ದಿನಗಳ ಕಾಲ ನಡೆಯಬೇಕಿದ್ದ ಚಳಿಗಾಲ ಅಧಿವೇಶನ 8ನೇ ದಿನದಕ್ಕೆ ಕಿತ್ತೆದ್ದಂತಾಗಿದೆ.
ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಚರ್ಚೆಯಿಲ್ಲ. ಮಹತ್ವದ ನಿರ್ಣಯಗಳಿಲ್ಲ, ನೀರಾವರಿ ಯೋಜನೆಗಳ ಬಗ್ಗೆ ವಿಸ್ತøತ ಚರ್ಚೆಯಂತೂ ಇಲ್ಲವೆ ಇಲ್ಲ. ದಕ್ಷಿಣ ಕರ್ನಾಟಕದ ಶಾಸಕ ಸಚಿವರಿಗಂತೂ ಬೆಳಗಾವಿ ಬಂದು ಅಧಿವೇಶನ ಮಾಡುವ ಮತ್ತು ಉತ್ತರ ಕರ್ನಾಟಕ ಅಭಿವೃದ್ಧಿಯಾಗಲಿ ಎನ್ನುವ ಮನಸ್ಸಿಲ್ಲ. ಇನ್ನೂ ಉತ್ತರ ಕರ್ನಾಟಕದ ಸಚಿವ, ಶಾಸಕರನ್ನು ತೆಗೆದುಕೊಂಡರು ತಮ್ಮತನದ ಅರಿವಿಲ್ಲ. ಉತ್ತರ ಕರ್ನಾಟಕದ ಧ್ವನಿಯಿಲ್ಲ.
ಯಾರೋ ಕೂಗಾಡಲಿ ಊರೇ ಹೋರಾಡಲಿ ಎನ್ನುವಂತೆ ಕಾಟಾಚಾರದ ಅಧಿವೇಶನ ಮುಗಿದಂತಾಗಿದೆ. 24ಕ್ಕೆ ಮುಗಿಯಬೇಕಾದ ಚಳಿಗಾಲ ಅಧಿವೇಶನ ಯಾವುದೇ ಅಭಿವೃದ್ಧಿ ಇಲ್ಲದೆ. ಉತ್ತರ ಕರ್ನಾಟಕದ ಮೂಗಿಗೆ ತುಪ್ಪ ಸವರಿ ಬೆಂಗಳೂರಿನ ಕಡೆ ಮುಖಮಾಡಿದೆ. ಈ ರೀತಿ ಬೆಳಗಾವಿಯಲ್ಲಿ ಅಧಿವೇಶನ ನಡೆದರೇ ಅಧಿವೇಶನಗಳೇ ಬೇಡ ಎನ್ನುವ ಮಾತುಗಳು ಬೆಳಗಾವಿಯ ಜನತೆಯದ್ದು.
ನಾಲ್ಕುವರೆ ವರ್ಷ ಅಧಿಕಾರ ಅನುಭವಿಸಿದ ಸರಕಾರ ಉತ್ತರ ಕರ್ನಾಟಕವನ್ನು ಕಡೆಗಣಿಸಿ ಕೇವಲ ದಕ್ಷಿಣ ಕರ್ನಾಟಕಕ್ಕೆ ಸಿಮೀತಗೊಂಡು ಆಡಳಿತ ನಡೆಸಿದೆ. ರೈತರ ಮಾತಿಗಂತೂ ಬೆಲೆ ಇಲ್ಲ. ಅವರ ಬೇಕುಗಳ ಹೋರಾಟ ಮಾತ್ರ ಗುರುವಾರ ಕೂಡ ಸೌಧ ಬಿಟ್ಟು ಕದಲಿಲ್ಲ. ಸರಕಾರ ಇವರಿಗೆ ಸ್ಪಂದಿಸಿಲ್ಲ. ಸ್ಪಂದಿಸುವುದಿಲ್ಲ. ಕಬ್ಬು ಬೆಳಗಾರರ ಸಮಸ್ಯೆ ಪರಿಹಾರವಿಲ್ಲ. ಸರಿಯಾದ ಬೆಂಬಲ ಬೆಲೆ ಸಿಗಲಿಲ್ಲ. ಉತ್ತಮ ಚರ್ಚೆಗಳು ನಡೆಯಲಿಲ್ಲ. ಗಮನ ಸೆಳೆಯಲು ಬೆಳಗಾವಿಗೆ ಬಂದ ಪರಿಸ್ಥಿತಿ ಅಧೀವೇಶನದ್ದಾಗಿದೆ.

loading...