ಉತ್ತರ ಕೊರಿಯಾ ಆತಂಕ 4 ಶತಕೋಟಿ ಡಾಲರ್ ಕೋರಿದ ಟ್ರಂಪ್

0
38
loading...

ವಾಷಿಂಗ್ಟನ್, ನ.7-ಉತ್ತರ ಕೊರಿಯಾ ಒಡ್ಡಿರುವ ಗಂಭೀರ ಬೆದರಿಕೆ ಹಿನ್ನೆಲೆಯಲ್ಲಿ ದೇಶದ ಕ್ಷಿಪಣಿ ರಕ್ಷಣಾ ಸುಧಾರಣೆಗಳಿಗಾಗಿ ತ್ವರಿತವಾಗಿ 4 ಶತಕೋಟಿ ಡಾಲರ್ ಹೆಚ್ಚುವರಿ ಹಣದ ಅಗತ್ಯವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹಣಕಾಸು ಮಂಜೂರಾತಿ ಅಧಿಕಾರ ಹೊಂದಿರುವ ಕಾಂಗ್ರೆಸ್‍ಗೆ ಈ ಕುರಿತು ಮನವಿ ಸಲ್ಲಿಸಿರುವ ಟ್ರಂಪ್, ದಕ್ಷಿಣ ಏಷ್ಯಾ ರಕ್ಷಣೆಗಾಗಿ ತಾವು ರೂಪಿಸಿರುವ ಹೊಸ ಕಾರ್ಯತಂತ್ರಕ್ಕೂ ನೆರವು ನೀಡುವಂತೆ ಕೋರಿದ್ದಾರೆ. ಇದಕ್ಕಾಗಿ ಆಫ್ಘಾನಿಸ್ತಾನಕ್ಕಾಗಿ ಹೆಚ್ಚುವರಿಯಾಗಿ 3,500 ಯೋಧರನ್ನು ರವಾನಿಸಲು 1.2 ಶತಕೋಟಿ ಡಾಲರ್ಗಳ ಹಣದ ಅಗತ್ಯವಿದೆ ಎಂದೂ ತಿಳಿಸಿದ್ದಾರೆ. ಇದಲ್ಲದೆ ಅಮೆರಿಕ ನೌಕಾ ಪಡೆಯ ಯುದ್ಧ ನೌಕೆಗಳ ದುರಸ್ತಿಗಾಗಿ 0.7 ಶತಕೋಟಿ ಡಾಲರ್ ಬಿಡುಗಡೆ ಮಾಡುವಂತೆಯೂ ಮನವಿ ಮಾಡಿದ್ದಾರೆ. ಪ್ರಸ್ತುತ ಏಷ್ಯಾ ಪ್ರವಾಸದಲ್ಲಿರುವ ಟ್ರಂಪ್ ಈ ಸಂಬಂಧ ಸಲ್ಲಿಸಿರುವ ಮನವಿಯಲ್ಲಿ ಈ ಬೇಡಿಕೆಗಳನ್ನು ತ್ವರಿತವಾಗಿ ಪೂರೈಸುವಂತೆ ಕೋರಿದ್ದಾರೆ.

loading...