ಉ.ಕ. ಅಭಿವೃದ್ಧಿ ಬಗ್ಗೆ ಅಧಿವೇಶನದಲ್ಲಿ ಚರ್ಚಿಸದ ನಾಯಕರು: ವಾಟಾಳ್

0
25
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಹೈದರಬಾದ್ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ವಿಶೇಷವಾಗಿ ಸದನದಲ್ಲಿ ಚರ್ಚೆಯಾಗದೆ ಅಧಿವೇಶನ ಸಂಪೂರ್ಣ ವಿಫಲವಾಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ ಹೇಳಿದರು.
ಬುಧವಾರ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕುವ ಸಮಯದ ಪೂರ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಹೈದರಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಕುರಿತು ವಿಶೇಷವಾಗಿ ಸ್ವೇತ ಪತ್ರಗಳನ್ನು ಹೊರಡಿಸಿ ಅವುಗಳ ಬಗ್ಗೆನೆ ಚರ್ಚೆ ಮಾಡಬೇಕಿತ್ತು ಅದನ್ನು ಬಿಟ್ಟು ರಾಜ್ಯದ 224 ಶಾಸಕರು, 75 ಎಂಎಲ್‍ಸಿಗಳು ಅಧಿವೇಶನದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳ ರೂಪರೇಶಗಳನ್ನು ಇಟ್ಟುಕೊಳ್ಳದೇ ಕಾಟಾಚಾರಕ್ಕಾಗಿ ಅಧಿವೇಶನ ನಡೆಸುತ್ತಿದ್ದಾರೆ.
ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಲು ಯಾವೊಬ್ಬ ಮಂತ್ರಿ, ಶಾಸಕರಿಗೆ ಯಾವ ಮಾಹಿತಿಯೂ ಗೊತ್ತಿಲ್ಲ ಇಂತವರು ಸುಮಾರು 10 ದಿನಗಳ ಕಾಲ ಅಧಿವೇಶನದಲ್ಲಿ ಭಾಗಿಯಾಗಿ ಕಾಲ ಹರಣ ಮಾಡುತ್ತಾರೆ. ಇಂತ ನಾಯಕರು ನಮ್ಮ ರಾಜ್ಯಕ್ಕೆ ಅವಶ್ಯವಿಲ್ಲ.
ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಾವ ಕ್ರಮಗಳನ್ನು ಅಧಿವೇಶನದಲ್ಲಿ ತೆಗೆದುಕೊಳ್ಳಬೇಕು ಕೇಂದ್ರದ ಸಚಿವರ ಯಾಕೆ ಹಿಂದೆಟು ಹಾಕುತ್ತಿದ್ದಾರೆ ಎಂಬುದರ ಕಲ್ಪನೆ ಇಲ್ಲಿನ ಅಧಿವೇಶನದಲ್ಲಿ ಚರ್ಚಿಸಬೇಕಾಗಿತ್ತು.
ಇನ್ನು ಪತ್ರಕರ್ತ ರವಿ ಬೆಳಗೇರಿ ಅಂತವರನ್ನು ಜೈಲಿಗೆ ಕಳಿಸುತ್ತಿರಿ ನಾಡ ದ್ರೋಹಿ ಸಂಭಾಜಿ ಪಾಟೀಲರಂತವರನ್ನು ಹೆಗಲ ಮೇಲೆ ಕುರಿಸಿಕೊಂಡು ಅಧಿವೇಶನವನ್ನು ನಡೆಸುತ್ತಿರಿ ಇಂತಹ ಕೆಲಸಗಳನ್ನು ನಡೆಸುವುದರಿಂದ ಅಧಿವೇಶನ ಸಂಪೂರ್ಣ ವಿಫಲ ವಿಫಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕನ್ನಡ ಹೋರಾಟಗಾರರು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ವೇಳೆ ಪೊಲೀಸ್‍ರು ಬಂಧಿಸಿ ನಂತರ ಬಿಡಗಡೆಗೊಳಿಸಿದರು.

loading...