ಎಲ್ಲರು ಕಾನೂನಿನ ಜ್ಞಾನ ಹೊಂದಿರಬೇಕು: ಕಬ್ಬೂರ

0
23
loading...

ಮುಂಡಗೋಡ: ಸಾಮಾನ್ಯ ಪ್ರಜೆಗಳು ಮಾತ್ರವಲ್ಲದೆ, ಸರಕಾರಿ ನೌಕರರೂ ಕೂಡ ಕಾನೂನಿನ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರುವುದು ಅತ್ಯವಶ್ಯವಾಗಿದೆ ಎಂದು ಮುಂಡಗೋಡ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಈರÀನಗೌಡ ಕಬ್ಬೂರ ಹೇಳಿದರು.
ಅವರು ಇಲ್ಲಿಯ ಮಿನಿ ವಿಧಾನಸೌದ ಸಭಾಂಗಣದಲ್ಲಿ ವಿವಿಧ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ “ರಾಷ್ಟ್ರೀಯ ಕಾನೂನು ಸೇವೆಗಳ ದಿನ” ಅಂಗವಾಗಿ ಆಯೋಜಿಸಲಾದ ಕಾನೂನು ಅರಿವು ಪೂರೈಕೆಯ ದಶ ದಿನಗಳ ಕಾರ್ಯಕ್ರಮ ಉದ್ಘಾಟಿಸಿ ಮÁತನಾಡಿದರು. ಸಾರ್ವಜನಿಕರು ಸರಕಾರಿ ಕಛೇರಿಗಳಿಗೆ ತಮ್ಮ ಅಹವಾಲುಗಳನ್ನು ಅಥವಾ ಅವರಿಗೆ ಬೇಕಾದ ದಾಖಲೆಗಳನ್ನು ಪಡೆಯಲು ಆಗಮಿಸಿದಾಗ ನಿಗಧಿತ ಸಮಯದಲ್ಲಿ ಅವರಿಗೆ ಸೇವೆ ನೀಡುವುದು ಸರಕಾರಿ ನೌಕರನ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ. ಜನಸಾಮಾನ್ಯರ ಅಹವಾಲುಗಳನ್ನು ಸಮಯಕ್ಕೆ ಸರಿಯಾಗಿ ನೀಗಿಸುವುದಕ್ಕಾಗಿಯೇ ಸರಕಾರ ಸಿಬ್ಬಂದಿಗಳನ್ನು ನೇಮಿಸಿರುತ್ತದೆ, ಆದ್ದರಿಂದ ಸಾಮಾನ್ಯ ಜನರಿಗೆ ಸರಕಾರದ ಯಾವ ಸಿಬ್ಬಂದಿಯೂ ಕೂಡ ದಾರಿ ತಪ್ಪಿಸುವ ದುಸ್ಸಾಹಸಕ್ಕೆ ಕೈ ಹಾಕಬಾರದೆಂದು ಕಿವಿ ಮಾತು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಹೆಚ್.ಬಿ ಬೈಲ್‍ಪತ್ತಾರ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಬಿ ಎಲ್ ಬೈರವಾಡಗಿ, ಅಕ್ಷರ ದಾಸೋಹ ಅಧಿಕಾರಿ ಮಂಜುನಾಥ ಸಾಳುಂಕೆ, ಕೆ ಬಿ ಗಾಂವಕರ, ನ್ಯಾಯವಾದಿಗಳಾದ ಜಿ ಆರ್ ಆಲದಕಟ್ಟಿ, ವಿ ಸಿ ಪವಾಡಶೆಟ್ಟರ, ಆರ್ ಎಮ್ ಮಳಗೀಕರ, ಮಮತಾ ಬಿ ಎಮ್ ಹಾಗೂ ತಾಲೂಕಿನ ಎಲ್ಲ ಗ್ರಾಮ ಲೆಕ್ಕಿಗರು, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಜರಾಗಿದ್ದರು. ನ್ಯಾಯವಾದಿ ಆರ್.ಬಿ ಹುಬ್ಬಳ್ಳಿ ಸ್ವಾಗತಿಸಿ, ನಿರೂಪಿಸಿದರು. ನ್ಯಾಯವಾದಿ ಆರ್ ಎಸ್À ಹಂಚಿನಮನಿ ವಂದಿಸಿದರು.

loading...