ಎ.ಟಿ.ಎಂ, ಕಳ್ಳರ ಸೆರೆ

0
31
loading...

ಕೊಪ್ಪಳ : ಕೊಪ್ಪಳ ಜಿಲ್ಲೆ ಸೇರಿದಂತೆ ಇತರಡೆಗಳಲ್ಲಿ ಎ.ಟ.ಟಂ.ಹಾಗೂ ಅಂಗಡಿಗಳಲ್ಲಿನ ಹಣ, ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ ಅಂತರ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಕೊಪ್ಪಳ ಪೂಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ ಅಪಾರ ಪ್ರಮಾಣದ ಬೆಲೆ ಬಾಳುವ ವಸ್ತು ಮತ್ತು ನಗದು ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಕಳೆದ ಕೆಲ ತಿಂಗಳುಗಳಿಂದ ಇರಕಲ್‍ಗಡದಲ್ಲಿ ಪಿಕೆಜಿಬಿ ಬ್ಯಾಂಕ್ ಎ.ಟಿ.ಎಂ., ಅಗಳಕೇರಿಯಲ್ಲಿ ಇಂಡಿಯಾ ಎ.ಟಿ.ಎಂ. ಕಳ್ಳತನ ಹಾಗೂ ಹುಲಗಿ, ಗಿಣಗೇರಾ ಗ್ರಾಮದಲ್ಲಿ ಮೊಬೈಲ್, ಮೆಡಿಕಲ್ ಅಂಗಡಿ, ಕುಷ್ಟಗಿ ಪಟ್ಟಣದ ಎಪಿಎಂಸಿ ಯಾರ್ಡನ ಅಂಗಡಿ, ಕನಕಗಿರಿಯಲ್ಲಿ ಕಿರಾಣಿ ಅಂಗಡಿಗಳ ಕಳ್ಳತನ ಸೇರಿದಂತೆ ರಾಜಸ್ಥಾನದಲ್ಲಿಯೂ ಹಲವು ಕಳ್ಳತನ ಪ್ರಕರಣಗಳನ್ನು ಎಸಗಿರುವ ಜಗದೀಶ ರೂಪಸಿಂಗ್, ವಿಕ್ರಮ್ ಕುಮಾರ ಭಗರಾಂಜಿ, ಮನೋಹರದಾಸ ಕೋಮಲ್ ದಾಸ, ಕಮಲೇಶಕುಮಾರ ಪಿತಾರಾಮಜಿ ಮೀಣಾ ಇವರುಗಳನ್ನು ಬಂಧಿಸಿದೆ ಎಂದು ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಶೆಟ್ಟಿ ತಿಳಿಸಿದ್ದಾರೆ.

ಎ.ಟಿ.ಎಂ.ಗಳಲ್ಲಿನ ಹಣ, ಅಂಗಡಿಯಲ್ಲಿನ ಬೆಲೆ ಬಾಳುವ ವಸ್ತು, ಹಣಗಳನ್ನು ದೋಚಿತ್ತಿದ್ದ ಈ ಅಂತರ ರಾಜ್ಯ ಕಳ್ಳರ ಹಾವಳಿ ಪೂಲೀಸ್‍ರಿಗೆ ಇವರನ್ನು ಬಂಧಿಸುವುದು ಸವಾಲ್ ಆಗಿತ್ತು. ಎಸ್ಪಿಯವರ ಮಾರ್ಗದರ್ಶನದಲ್ಲಿ ಆರೋಪಿತರನ್ನು ಪತ್ತೆ ಹಚ್ಚಲು ಒಂದು ತಂಡವನ್ನು ರಚಿಸಲಾಗಿತ್ತು. ಪ್ರಭಾರ ಡಿಎಸ್ಪಿ ಸಂತೋಷ ಬನಹಟ್ಟಿ, ಗ್ರಾಮೀಣ ಸಿ.ಪಿ.ಐ. ಭೀಮಣ್ಣ ಸೋರಿ, ಪಿಎಸ್‍ಐ ಗುರುರಾಜ ಕಟ್ಟಿಮನಿ, ಪ್ರಕಾಶ ಮಾಳಿ ಹಾಗೂ ಸಿಬ್ಬಂದಿಗಳಾದ ಮಹೇಶ, ವೆಂಕಟೇಶ, ದೇವೆಂದ್ರಪ್ಪ, ರವಿ, ಯಲ್ಲಪ್ಪ, ನಿಸ್ಸಾರ್, ಪ್ರಸಾದ, ಬಸವರಾಜ ಒಳಗೊಂಡ ಪೂಲೀಸ್‍ರು ಕಳ್ಳರನ್ನು ಬಂಧಿಸಿರುವರು. ಕಡಿಮೆ ಅವಧಿಯಲ್ಲಿ ಕಳ್ಳರನ್ನು ಬಂಧಿಸಿದ ಪೂಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.

ಕಳ್ಳತನಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ 9 ಹೊಸ ಮೊಬೈಲ್, ಅಪರಾಧಕ್ಕೆ ಬಳಸಿದ ಒಂದು ಮೋಟಾರ್ ಸೈಕಲ್, ಕಳ್ಳತನದ ಹಣದಿಂದ ಖರೀದಿ ಮಾಡಿದ 34 ಗ್ರಾಂ ಬೆಲ್ಲಿಯ ಕಾಲು ಚೈನ್, 1ಜೊತೆ ಬಂಗಾರದ 2 ಗ್ರಾಂನ ತಾಳಿ, 2ಗ್ರಾಂ ಮೂಗಿನ ನತ್ತು ಹಾಗೂ ನಗದು ಹಣ ರೂ. 1 ಲಕ್ಷ 70 ಸಾವಿರ ಸೇರಿ ಒಟ್ಟು 2ಲಕ್ಷ 26ಸಾವಿರಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಹಾಗೂ ನಗದು ಹಣವನ್ನು ಆರೋಪಿತರಿಂದ ಜಪ್ತಿ ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

 

loading...