ಏಳನೆ ಪ್ರತಿಭಾ ಪುರಸ್ಕಾರ ಗ್ರಾಂಡ್ ಪೇನಾಲೆ ಆರಂಭ :

0
25
loading...

ಕನ್ನಡಮ್ಮ ಸುದ್ದಿ
ಯಮಕನಮರಡಿ ೧೧:ಶಾಸಕ ಸತೀಶ ಜಾರಕಿಹೊಳಿ ಅವರ ಪ್ರಾಯೋಜಕತ್ವದ ಉತ್ತರ ಕರ್ನಾಟಕದ ಅತಿ ದೊಡ್ಡ ಸಾಂಸ್ಕೃತಿಕ ವೇದಿಕೆ ಎಂಬ ಹೆಗ್ಗಳಿಕೆ ಪಡೆದ ಸತೀಶ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಗ್ರಾಮದ ಎನ್ ಎಸ್ ಎಪ್ ಶಾಲಾ ಮೈದಾನದಲ್ಲಿ ಅದ್ದೂರಿಯಾಗಿ ಆರಂಭಗೊಂಡಿದೆ .
ಎಲೆ ಮರೆಕಾಯಿಯಂತಿರುವ ಯುವ ಪ್ರತಿಭೆಗಳನ್ನ ಗುರುತಿಸಿ ಪ್ರೋತ್ಸಾಹ ನೀಡುವ ಈ ಕಾರ್ಯಕ್ರಮಕ್ಕೆ ಶನಿವಾರ ಸಂಜೆ ಚಾಲನೆ ದೋರೆತ್ತಿದ್ದು, ನಾಡ ಗೀತೆಯನ್ನ ಅರ್ಜನವಾಡ ಪ್ರಾಥಮಿಕ ಶಾಲೆಯ ಮಕ್ಕಳು ಹಾಡುವ ಮುಖಾಂತರ ವೇದಿಕೆಗೆ ಮೆರಗು ತಂದರು .ಈ ಕಾರ್ಯಕ್ರಮಕ್ಕೆ ಇಡಿ ತಾಲ್ಲೂಕಿನ ಎಲ್ಲ ಪ್ರಾಥಮಿಕ ,ಪ್ರೌಢ ಮತ್ತು ಕಾಲೇಜು ವಿಭಾಗ ಮಟ್ಟದ ವಿದ್ಯಾರ್ಥಿಗಳು ಸ್ಪರ್ಧೆಯ ನಡೆಯುತ್ತಿದ್ದು.ಇಡಿ ಯಮಕನಮರಡಿ ಗ್ರಾಮ ಈ ಕಾರ್ಯಕ್ರಮಕೆ ಮದುಮನಗಿತ್ತಿಯಂತೆ ಸಿಂಗಾರಗೊಂಡಿದೆ .ಶಾಸಕರ ಈ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಜನ ಸಮೂಹವೆ ಹರಿದು ಬಂದಿದ್ದು .ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಈ ಕಾರ್ಯಕ್ರಮ ನಡೆಯುತ್ತಿದ್ದು ಯುವ ಪ್ರತಿಭೆಗಳ ತಮ್ಮ ಕಲೆಯನ್ನ ಇಲ್ಲಿ ಹೊರ ಹಾಕಲು ಇದು ಉತ್ತಮ ವೇದಿಕೆ ಎಂಬ ಮಾತು ಇಲ್ಲಿ ಆಗಮಿಸಿದ ಜನರ ಮಾತಾಗಿತ್ತು .

loading...