ಐಟಿ ಪಾರ್ಕ್ ಅಭಿವೃದ್ಧಿಗೆ ಸರ್ಕಾರ ನಿರಾಸಕ್ತಿ: ಯೂಸಫ್

0
19
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಹೋರವಲಯದಲ್ಲಿರುವ ದೇಸೂರದಲ್ಲಿ ಐಟಿ ಪಾರ್ಕ್‍ಕ್ಕೆ ನಿರ್ಮಾಣ ಮಾಡಲು 2008 ರಲ್ಲಿ ಸ್ಥಳ ನಿಗದಿಪಡಿಸಿದ್ದರು. ಇವರೆಗೆ ಯಾವುದೇ ಕಾಮಗಾರಿ ಮಾಡದೇ 9 ವರ್ಷಗಳಿಂದ ಸುಳ್ಳು ನೆಪದೊಂದಿಗೆ ಐಟಿ ಪಾರ್ಕ್ ಅಭಿವೃದ್ಧಿ ಪಡಿಸುತ್ತಿಲ್ಲ ಎಂದು ಜಿಲ್ಲಾ ಜೆಡಿಎಸ್ ಯುವ ಮುಖಂಡ ಯೂಸಫ್ ಅಥಣಿ ಹೇಳಿದರು.
ಮಂಗಳವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡಿದ ಹಾಗೇ ನಗರದಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡುವಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಏಕೆ ಹಿಂದೆಟ್ಟು ಹಾಕುತ್ತಿದ್ದಾರೆ. ಐಟಿ ಪಾರ್ಕ್ ನಿರ್ಮಾಣ ಮಾಡಬೇಕಾದ ಸ್ಥಳದಲ್ಲಿ ದನಕರುಗಳ ತಾಣವಾಗಿ ಮಾರ್ಪಾಟ್ಟಿದೆ ಎಂದರು.
ಸರ್ಕಾರ ಐಟಿ ಪಾರ್ಕ್ ಸ್ಥಳಕ್ಕೆ ಇಂಟರ್‍ನೆಟ್, ವಿದ್ಯುತ್ ಸಂಪರ್ಕ ಮತ್ತು ಉತ್ತಮ ರಸ್ತೆ ಸೇರಿದಂತೆ ಐಟಿ ಕ್ಷೇತ್ರ ವಾತಾವರಣ ತಾಣ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳು ಸಹ ಉದಾಸೀನತೆ ತೋರುತ್ತಿದ್ದಾರೆ ಎಂದರು.
ಶಾಸಕರು ಮತ್ತು ಸಂಸದರು ಐಟಿ ಪಾರ್ಕ್ ಕಡೆಗೆ ಲಕ್ಷ್ಯ ವಹಿಸುತ್ತೀಲ್ಲ. ಹುಬ್ಬಳ್ಳಿಯಲ್ಲಿ ಐಟಿ ಪಾರ್ಕ್‍ಗೆ ಬೇಕಾಗುವ ಸೌಲಭ್ಯವನ್ನು ಒದಗಿಸುವುದರಿಂದ ಬೆಳವಣಿಗೆ ಕಂಡಿದೆ. ಐಟಿ ಪಾರ್ಕ್ ನಿರ್ಮಾಣ ಮಾಡುವ ದೃಷ್ಟಿಯಿಂದ ಸ್ಥಳ ಗುರುತಿಸುವ ಸಂದರ್ಭದಲ್ಲಿ ಉದ್ಯಮಿಗಳ ಸಂಪರ್ಕ ಪಡೆಯದೇ ಸ್ಥಳವನ್ನು ನಿಗದಿಪಡಿಸಿದ್ದಾರೆ. ಐಟಿ ಪಾರ್ಕ್ ಮಾಡುವಲ್ಲಿ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಗಳು ಸಂಪೂರ್ಣ ವಿಫಲವಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಮುಖಂಡರಾದ ಪೈಜುಲ್ಲಾ ಮಾಡಿವಾಲೆ, ಸಂತೋಷ ಉಪಾಧ್ಯಾಯ, ಹುಮಾಯೂನ್ ಹುಣಸಿಕಟ್ಟಿ, ಮಲಿಕ್ ಇರಾಬಿ, ಸಂತೋಷ ಕುಕಡೊಳ್ಳಿ ಮತ್ತಿತರರು ಉಪಸ್ಥಿತರಿದ್ದರು.

loading...