ಓಟಿಗಾಗಿ ಸಿದ್ದರಾಮಯ್ಯ ಮತ್ತೊಬ್ಬರ ಬೂಟು ನೆಕ್ಕಲು ಹಿಂಜರಿಯುವದಿಲ್ಲ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ

ಚನ್ನಮ್ಮ ಕಿತ್ತೂರಿನಲ್ಲಿ ನಡೆದ ಬಿಜೆಪಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಬ್ರಹತ್ ಸಮಾವೇಶದಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಬಿಜೆಪಿ ನಾಯಕರು.

[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

loading...

 

ಚನ್ನಮ್ಮ ಕಿತ್ತೂರು ಃ ಕಳಸಾ ಮಹದಾಯಿ ಯೋಜನೆ ಸ್ಥಗಿತವಾಗಲು ಕಾಂಗ್ರೆಸ್ ಪಕ್ಷ ಕಾರಣ. ಈ ಎರಡೂ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಗೋವಾ ಮುಖ್ಯಮಂತ್ರಿಗಳ ಮನ ಒಲಿಸಿ ಜಲ ನ್ಯಾಯಮಂಡಳಿಯ ಹೊರಗೆ ಕೆಲವೆ ದಿನಗಳಲ್ಲಿ ಇತ್ಯರ್ಥಪಡಿಸಲಾಗುವದು ಎಂದು ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್,ಯಡಿಯೂರಪ್ಪ ಭರವಸೆ ನೀಡಿದರು.
ಇಲ್ಲಿಯ ಗುರುಸಿದ್ದೇಶ್ವರ ಪ್ರೌಢ ಶಾಲಾ ಮೈದಾನದಲ್ಲಿ ಬಿಜೆಪಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಅಂಗವಾಗಿ ಆಯೋಜಿಸಲಾಗಿದ್ದ ಬ್ರಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ನದಿಗಳಿಗೆ ಚಕ್ ಡ್ಯಾಮಗಳನ್ನು ನಿರ್ಮಿಸುವ ಮೂಲಕ ರೈತರ ಜಮೀನುಗಳಿಗೆ ನೀರು ಒದಗಿಸುವ ಕಾರ್ಯ ಮಾಡಲಾಗುವದು.
ಎಂ.ಪಿ. ಎಂ.ಎಲ್.ಎಗಳ ಪಿ.ಎ.ಗಳಿಗೆ ಸಂಬಳ ನೀಡಲಾಗದ ಸ್ಥಿತಿಯಲ್ಲಿರುವ ಸಿದ್ದರಾಮಯ್ಯನ ಸರಕಾರ ದಿವಾಳಿ ಅಂಚೆಗೆ ಬಂದಿದ್ದು ಬೆಳಗಾವಿ ಅದಿವೇಶನದಲ್ಲಿ ರಾಜ್ಯ ಹಣಕಾಸಿನ ಸ್ಥಿತಿಗತಿ ಕುರಿತು ಶ್ವೇತ ಪತ್ರ ಹೊರಡಿಸಲಿ. ಸಿದ್ದರಾಮಯ್ಯ ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾನೆ ಎನ್ನುತಾನೆ ಆದರೆ ಅವರ ನಾಯಕರೆ ನ್ಯಾಶನಲ್ ಹೆರಾಲ್ಡ ಪತ್ರಿಕೆಯ ಹಗರಣದಲ್ಲಿ ಸೋನಿಯಾ ಗಾಂಧಿ, ರಾಹುಲ ಗಾಂಧಿ ಆರೋಪಿಗಳಾಗಿ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ ಎನ್ನುವದನ್ನು ಅವರ ಅರಿತುಕೊಂಡು ಮಾತನಾಡಬೇಕು.
ನ್ಯಾಯ ಮೂರ್ತಿ ಶಿವರಾಜ್ ನೀಡಿರುವ ವರದಿಯಂತೆ ಸರಿತಾ ಅಯ್ಯರ ಅತ್ಯಾಚಾರ ಪ್ರಕರಣದಲ್ಲಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣು ಗೋಪಾಲನನ್ನು ನೈತಿಕತೆ ಇದ್ದರೆ ಸಿದ್ದರಾಮಯ್ಯ ತಕ್ಷಣವೆ ರಾಜ್ಯದಿಂದ ಹೊರದೂಡಬೇಕು. ಅಲ್ಲದೆ ಕೇಂದ್ರ ಸಚಿವ ಅನಂತ ಕುಮಾರ ಲೋಕಸಭೆಯಲ್ಲಿ ಪ್ರಸ್ತಾಪಿಸಿ ಲೋಕಸಭಾ ಸ್ಥಾನದಿಂದ ಕಿತ್ತೊಗೆಯಬೇಕು. ಮುಂದಿನ ದಿನಗಳಲ್ಲಿ ರೈತರ ಮಹಿಳೆಯರ ಹಾಗೂ ದುರ್ಬಲ ವರ್ಗದವರ ಅಭಿವೃದ್ಧಿಗಾಗಿ ಈ ಪರಿವರ್ತನಾ ಯಾತ್ರೆ ನಡೆದಿದೆ ಎಂದು ಹೇಳಿದರು.

ಸಂಸದೆ ಶೋಭಾ ಕರಂದಾಲೇ ಮಾತನಾಡಿ, ರಾಣಿ ಚನ್ನಮ್ಮಾ, ಸಂಗೊಳ್ಳಿ ರಾಯಣ್ಣ ಸ್ಥಳಗಳನ್ನು ರಾಷ್ಟ್ರೀಯ ಸ್ಮಾರಕ ಮಾಡಲು ಎಲ್ಲ ನಾಯಕರು ಸೇರಿಕೊಂಡು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚಿಸಿ ಅನುಮೋದನೆ ಪಡೆಯಲಾಗುವದು. ಕ್ಷೇತ್ರದ ಶಾಸಕ ಡಿ.ಬಿ.ಇನಾಮದಾರ ನಾಲ್ಕು ವರ್ಷದಿಂದ ಕ್ಷೇತ್ರಕ್ಕೆ ಎನು ಕೊಡುಗೆ ನೀಡಿದ್ದಾರೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಎಷ್ಟು ಅನುದಾನ ತಂದಿದ್ದಾರೆ. ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ದುರಾಡಳಿತ ನಡೆಸಿ ಕಾರ್ಖಾನೆಯನ್ನು ಅಧೋಗತಿಗೆ ತಂದಿರುವವರಿಗೆ ಪಾಠ ಕಲಿಸುವ ನಿಟ್ಟನಲ್ಲಿ ಕ್ಷೇತ್ರದ ಜನತೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಶಾಸಕನನ್ನೆ ಆಯ್ಕೆಮಾಡುವ ಮೂಲಕ ಯಡಿಯೂರಪ್ಪನವರ ಕೈ ಬಲ ಪಡಿಸಬೇಕು ಎಂದು ಹೇಳಿದರು.

ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಮಾತನಾಡಿ, ಕರ್ನಾಟಕ ರಾಜ್ಯ ಇಂದು ದೇಶ ದ್ರೋಹಿಗಳ ಆಡೊಂಬಲವಾಗಿದೆ ಹಾಗೂ ರಾಜ್ಯವು ದೇಶದ್ರೋಹಿಗಳಿಗೆ ಸುರಕ್ಷಿತ ತಾಣವಾಗಿದೆ, 4 ಲಕ್ಷ ಬಾಂಗ್ಲಾ ನುಸಳುಕೋರರು ರಾಜ್ಯದಲ್ಲಿದ್ದಾರೆಂದು ಹಿರಿಯ ಪೋಲಿಸ್ ಅಧಿಕಾರಿಗಳೆ ದೃಡ ಪಡಿಸಿದ್ದಾರೆ ಸದಾ ಅಹಿಂದ ಮಂತ್ರ ಜಪಿಸುವ ಮುಖ್ಯಮಂತ್ರಿಗೆ ಉಳಿದ ವರ್ಗದವರ ಕುರಿತು ಕಿಂಚಿತ್ತೂ ಕಾಳಜಿ ಇಲ್ಲ, ಟಿಪ್ಪು ಜಯಂತಿಯನ್ನು ಪ್ರತಿಷ್ಠೆಯಾಗಿಸಿಕೊಂಡಿರುವ ಮುಖ್ಯಮಂತ್ರಿಗೆ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿರುವ ಮಹನೀಯರೇಕೆ ನೆನಪಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಮುಂದೊಂದು ದಿನ ಉಗ್ರಗಾಮಿಗಳಾದ ಕಸಬ್, ಲಾಡೆನ್, ಹಾಗೂ ಹೈದರಾಲಿ ಸೇರಿದಂತೆ ದೇಶದ್ರೋಹಿಗಳ ಜನ್ಮದಿನವನ್ನು ಆಚರಿಸಿ ಮೇಣ ಬತ್ತಿ ಹಿಡಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಈ ನಿಟ್ಟಿನಲ್ಲಿ ಇದೊಂದು ಧರ್ಮದ್ರೋಹಿ ಸರ್ಕಾರವಾಗಿದ್ದು ಓಟು ಮತ್ತು ಸೀಟಿಗಾಗಿ ಸಿದ್ದರಾಮಯ್ಯ ಮತ್ತೊಬ್ಬರ ಬೂಟು ನೆಕ್ಕಲು ಹಿಂಜರಿಯುವದಿಲ್ಲವೆಂದು ಖಾರವಾಗಿ ನುಡಿದರು.
ಡೋಕ್ಲಾಮ್ ಸಮಸ್ಯಯನ್ನು ಪ್ರದಾನಿ ಮೋದಿಯವರು ಬಗೆಹರಿಸಲು ಮುಂದಾದರೇ ಪಾಕಿಸ್ಥಾನದಲ್ಲಿ ಕಾಂಗ್ರೆಸನವರು ಒಳಹೊಕ್ಕು ಪುಂಗಿ ಊದುತ್ತಾರೆ, ಗಡಿಯಲ್ಲಿ ಕಾರ್ಗಿಲ್ ಯುದ್ಧದ ವಿಜಯಾಚರಣೆಗೆ ಮುಂದಾದರೇ ಶತ್ರು ರಾಷ್ಟ್ರದ ಜೊತೆಗೆ ಕೂಡಿ ತುತ್ತುರಿ ಊದುತ್ತಾರೆ, ಇಂತಹ ದೇಶದ ವಿನಾಷಕ್ಕೆ ಕಂಕಣ ಬದ್ಧರಾಗಿ ನಿಂತಿರುವ ಯಾವದೇ ವ್ಯಕ್ತಿಯಾದರೂ, ಪಕ್ಷವಾದರೂ ಇವರಿಗೆ ತಕ್ಕ ಪಾಠ ಕಲಿಸಲು ದೇಶದ ಜನರು ಮುಂದಾಗಬೇಕೆಂದು ಕರೆ ಕೊಟ್ಟ ಅವರು, ಕಾಂಗ್ರೆಸ ಪಕ್ಷದ ಮುಖಂಡ ರಾಹುಲ್ ಗಾಂಧಿಯನ್ನು “ಪಪ್ಪು” ಎಂದು ಕರೆಯಬಾರದಂತೆ ಹೇಳುತ್ತಾರೆ ಮತ್ತೇನು “ದಂಡಪಿಂಡ” ಅಂತ ಕರೆಯಬೇಕೆ ಎಂದು ಕುಟುಕಿದರು.
125 ಕೋಟಿ ಜನತೆಯ ಶಕ್ತಿ ಹೊಂದಿದ ದೇಶವು ರಾಹುಲಗಾಂಧಿ ಕೈಯಲ್ಲಿ ದೊರೆತಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಸಮುದ್ರವೂ ಸಾಕಾಗುವದಿಲ್ಲ,
ಕೇಂದ್ರ ಸಚಿವ ಅನಂತಕುಮಾರ ಮಾತನಾಡಿ, ಉತ್ತರ ಭಾರತದಲ್ಲಿ ಝಾನ್ಸಿ ರಾಣಿಗೆ ಸಿಕ್ಕಂತಹ ಗೌರವ ದಕ್ಷಿಣ ಭಾರತದಲ್ಲಿ ಚನ್ನಮ್ಮಾಜಿಗೂ ಸಹ ದೊರಕಿಸುವ ನಿಟ್ಟಿನಲ್ಲಿ ಕಿತ್ತೂರನ್ನು ರಾಷ್ಟ್ರೀಯ ಸ್ಮಾರಕ ಮಾಡಲು ಕೇಂದ್ರ ಪ್ರವಾಸೋಧ್ಯಮ ಸಚಿವರೊಂದಿಗೆ ಕರ್ನಾಟಕದ ಎಲ್ಲ ಸಂಸದರು ಕೂಡಿ ಪ್ರಧಾನಿ ಮೋದಿಯವರಿಗೆ ಮನವಿ ಮಾಡುತ್ತೆವೆ. ರಾಜ್ಯ ಸರ್ಕಾರವೂ ವಿಧಾನಸಭೆ ಹಾಗೂ ವಿಧಾನ ಪರಿಷತ್ತನಲ್ಲಿ ಬೆಳಗಾವಿ ವಿಮಾನ ನಿಲ್ಧಾಣಕ್ಕೆ ಚನ್ನಮ್ಮಾಜಿಯ ಹೆಸರಿಡಲು ಒಪ್ಪಿಗೆ ಪಡೆದು ಕೇಂದ್ರಕ್ಕೆ ಕಳುಹಿಸಿದಲ್ಲಿ ಪ್ರಧಾನಿ ಮೋದಿಯವರ ಗಮನಕ್ಕೆ ಈ ವಿಷಯ ತಂದು ನಾಮಕರಣ ಮಾಡಲು ಒತ್ತಾಯಿಸುತ್ತೇವೆ ಎಂದ ಅವರು, ಕೇವಲ ಕುರ್ಚಿ ಬದಲಾಯಿಸಲು ಪರಿವರ್ತನಾ ರ್ಯಾಲಿ ಮಾಡುತ್ತಿಲ್ಲ, ಬಡಜನರ ಹಾಗೂ ರೈತರ ಬದುಕಿನಲ್ಲಿ ಪರಿವರ್ತನೆ ತರಲು ಈ ರ್ಯಾಲಿ ಮಾಡಲಾಗುತ್ತಿದೆ ಎಂದರು. ಅಭಿವೃದ್ಧಿ ದೃಷ್ಟಿಯಿಂದ ನಿಷ್ಕ್ರೀಯರಾಗಿರುವ ಸಿದ್ದರಾಮಯ್ಯ ಕುಂಭಕರ್ಣನಾದರೇ ಡಿ.ಬಿ.ಇನಾಮದಾರ ಅವರ ತಮ್ಮ ಎಂದು ಲೇವಡಿ ಮಾಡಿದರು.

ಸಂಸzರಾದÀ ಪ್ರಲ್ಹಾದ ಜೋಶಿ, ಸುರೇಶ ಅಂಗಡಿ, ಶಾಸಕರಾದ ಉಮೇಶ ಕತ್ತಿ, ವಿಶ್ವನಾಥ ಪಾಟೀಲ, ಪಿ.ರಾಜೀವ, ಮಹಾಂತೇಶ ಕವಟಗಿಮಠ, ಎನ್ ರವಿಕುಮಾರ, ಜಗದೀಶ ಹಿರೇಮನಿ, ಮಾಜಿ ಶಾಸಕ ಸುರೇಶ ಮಾರಿಹಾಳ, ಮಹಾಂತೇಶ ದೊಡಗೌಡರ, ಹನುಮಂತ ಕೊಟಬಾಗಿ, ಸಿ.ಆರ್.ಪಾಟೀಲ, ಬಸನಗೌಡ ಸಿದ್ರಾಮನಿ, ಆನಂದ ಜಕಾತಿ, ಸಿದ್ದಯ್ಯ ಹಿರೇಮಠ, ಭಾರತಿ ಮಗದುಮ್, ಈರಣ್ಣ ಕಡಾಡಿ, ಜಗದೀಶ ಹಾರುಗೊಪ್ಪ. ಶಂಕರಗೌಡ ಪಾಟೀಲ ಸೇರಿದಂತೆ ಇತರ ನಾಯಕರು ಇದ್ದರು. ಸುರೇಶ ಮಾರಿಹಾಳ ಸ್ವಾಗತಿಸಿದರು.
ಇದಕ್ಕೂ ಮೊದಲು ರಾಣಿ ಚನ್ನಮ್ಮಾ ಪ್ರತಿಮೆಗೆ ಬಿ.ಎಸ್. ಯಡಿಯೂರಪ್ಪ ಮಾಲಾರ್ಪಣೆ ಮಾಡಿ ಗೌರವ ಸಲ್ಲಸಿದ ನಂತರ ಬೈಕ ರ್ಯಾಲಿ ಹಾಗೂ ಸಾವಿರಾರು ಜನರ ಹರ್ಷೊದ್ಘಾರದ ನಡುವೆ ಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವೇದಿಕೆಗೆ ತೆರಳಿದರು.

ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮಾಜಿ ಹೆಸರನ್ನು ಸಿದ್ದರಾಮಯ್ಯ ಸರಕಾರ ಅನುಮೋದನೆ ಮಾಡಬೇಕು ಇಲ್ಲದಿದ್ದಲಿ ಅಧಿಕಾರಕ್ಕೆ ಬಂದ ಮೂರು ತಿಂಗಳೊಳಗಾಗಿ ರಾಣಿ ಚನ್ನಮ್ಮಾಜಿ ಹೆಸರನ್ನು ಇಡಲಾಗುವದು. ರಾಣಿ ಚನ್ನಮ್ಮನ ತ್ಯಾಗ ಬಲಿದಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ರಾಣಿ ಚನ್ನಮ್ಮಾನ ಕಿತ್ತೂರು ಸಂಗೊಳ್ಳಿ ರಾಯಣ್ಣ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಸಮಗ್ರ ಯೋಜನೆಯನ್ನು ರೂಪಿಸಲಾಗುವದೆಂದು ಬಿ.ಎಸ್.ವೈ ಹೇಳಿದರು.

loading...