ಕನಕದಾಸರು ಯಾವ ಜಾತಿಗೂ ಸಮೀತಿವಲ್ಲ: ಸಚಿವ ರಮೇಶ

0
31
loading...

ಕನ್ನಡಮ್ಮ ಸುದ್ದಿ-ಗೋಕಾಕ: ಸಂತ ಶ್ರೇಷ್ಠ ಕನಕದಾಸರು ಯಾವ ಜಾತಿಗೂ ಸಿಮೀತವಲ್ಲ ಕೊಮು ಸಾಮರಸ್ಯದ ಸಂದೇಶವನ್ನು ಇಡಿ ಜಗತ್ತಿಗೆ ಸಾರಿದ್ದಾರೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಸೋಮವಾರ ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಬೆಳಗಾವಿ, ತಾಲೂಕಾಡಳಿತ, ತಾಲೂಕ ಪಂಚಾಯತ ಹಾಗೂ ನಗರಸಭೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಭಕ್ತ ಕನಕದಾಸರ 530ನೇ ಜಯಂತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಾಸ ಶ್ರೇಷ್ಠ ಕನಕದಾಸರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಅವುಗಳ ಆಚರಣೆ ತರುವದರೊಂದಿಗೆ ಸಮಾನತೆಯ ಸಮಾಜವನ್ನು ನಿರ್ಮಿಸಲು ಶ್ರಮಿಸಬೇಕು ಎಂದರು.
ಕುರುಬರ ಸಮಾಜದ ತಾಲೂಕಾಧ್ಯಕ್ಷ ಸಿದ್ಧಲಿಂಗ ದಳವಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಗರದಲ್ಲಿ ಕನಕದಾಸ ಪುತ್ಥಳಿಯನ್ನು ಸ್ಥಾಪಿಸಿ ಸದಾ ಅವರ ಸ್ಮರಣೆಯೊಂದಿಗೆ ಅವರ ಆದರ್ಶಗಳ ಜಾಗೃತಿಯನ್ನು ಮೂಡಿಸುವ ಉದ್ದೇಶಕ್ಕೆ ನಗರಸಭೆ ಹಾಗೂ ಜನತೆ ಸಹಕಾರ ನೀಡುವಂತೆ ಕೊರಿದರು.
ಬೆಳಗಾವಿ ಆರ್‌ಪಿಡಿ ಕಾಲೇಜಿನ ಪ್ರಾಧ್ಯಾಪಕ ಎಚ್‌ ಬಿ ಕೋಲಕಾರ ಕನಕದಾಸರ ಕುರಿತು ಉಪನ್ಯಾಸ ನೀಡಿದರು.
ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ಜಿಪಂ ಸದಸ್ಯರಾದ ಟಿ ಆರ್‌ ಕಾಗಲ್‌, ಮಡ್ಡೆಪ್ಪ ತೋಳಿನವರ, ಗೋವಿಂದ ಕೊಪ್ಪದ, ಸ್ಥಾಯಿ ಸಮಿತಿ ಚೇರಮನ್‌ ಭಗವಂತ ಹುಳ್ಳಿ, ತಾಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ, ಉಪಾಧ್ಯಕ್ಷ ಯಲ್ಲಪ್ಪ ನಾಯಿಕ, ನಗರಸಭೆ ಸದಸ್ಯರಾದ ಎಸ್‌ ಎ. ಕೋತವಾಲ, ಭೀಮಶಿ ಭರಮನ್ನವರ, ಸಿದ್ದಪ್ಪ ಹುಚ್ಚರಾಮಗೋಳ, ಜಯಾನಂದ ಹುಣಶ್ಯಾಳ, ಗಿರೀಶ ಖೋತ, ತಹಶೀಲ್ದಾರ ಜಿ ಎಸ್‌ ಮಳಗಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್‌ ಜಿ. ಚಿನ್ನನವರ, ಪೌರಾಯುಕ್ತ ವಿ ಸಿ. ಚಿನ್ನಪ್ಪಗೌಡರ, ವಿವಿಧ ಇಲಾಖೆಯ ಅಧಿಕಾರಿಗಳು ನಗರಸಭೆ ಸದಸ್ಯರು, ಕುರುಬರ ಸಮಾಜದ ಬಂಧುಗಳು ಇತರರು ಇದ್ದರು.
ಮೆರವಣಿಗೆ: ಕಾರ್ಯಕ್ರಮದ ಮುನ್ನ ಕನಕದಾಸರ ಭಾವಚಿತ್ರ. ಸುಮಂಗಲಿಯರ ಕುಂಬಮೇಳ ಹಾಗೂ ವಿವಿಧ ವಾದ್ಯ ಮೇಳದೊಂದಿಗೆ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಮಾರಂಭದ ಸ್ಥಳವಾದ ಬಿರೇಶ್ವರ ಸಮುದಾಯ ಭವನ ತಲುಪಿತು.

loading...