ಕಳಸಾ, ಮಹದಾಯಿ ಡಿಸೆಂಬರ ಅಂತ್ಯದೊಳಗೆ ಇತ್ಯಾರ್ಥ: ಮಾಜಿ ಸಿಎಂ ಯಡಿಯೂರಪ್ಪ

0
26
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಉತ್ತರ ಕರ್ನಾಟಕ ಜನರ ಬಹುದಿನದ ಬೇಡಿಕೆಯಾಗಿರುವ ಮಲಪ್ರಭಾ ನದಿಗೆ ಕಳಸಾ ಬಂಡೂರಿ ಮತ್ತು ಮಹದಾಯಿ ನದಿ ಜೋಡಣೆ ವಿವಾದವನ್ನು ಡಿಸೆಂಬರ ಅಂತ್ಯದೊಳಗೆ ಇತ್ಯರ್ಥ ಪಡಿಸಲಾಗುವದು ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯ ಘಟಕ ಆಧ್ಯಕ್ಷ ಬಿ ಎಸ್. ಯಡಿಯೂರಪ್ಪ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಉಪಮುಖ್ಯಮಂತ್ರಿಯಾಗಿದ್ದಾಗ ಮಹದಾಯಿ ಯೋಜನೆಗೆ 100 ಕೋಟಿ ರೂ.ಅನುದಾನ ನೀಡಿ ಕಾಮಗಾರಿಗೆ ಚಾಲನೆ ನೀಡಿದ್ದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮಹದಾಯಿ ನದಿಯ ಒಂದು ಹನಿ ನೀರನ್ನು ಕರ್ನಾಟಕಕ್ಕೆ ಬಿಡುವದಿಲ್ಲ ಎಂದು ಹೇಳಿ ವಿವಾದ ಸೃಷ್ಠಿಸಿದ್ದರಿಂದ ಈ ವಿಷಯ ನ್ಯಾಯಾಧೀಕರಣ ಮೆಟ್ಟಿಲೇರಿತು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೋವಾ ಸರ್ಕಾರದ ವಿರೋಧ ಪಕ್ಷದ ನಾಯಕರನ್ನು ಮನ ಒಲಿಸಬೇಕು. ಈಗಾಗಲೇ ನಾನು ಕೂಡ ಗೋವಾ ಮುಖ್ಯಮಂತ್ರಿ ಮನೋಹರ ಪರಿಕರ, ಕೇಂದ್ರ ನಾಯಕರ ಮನವಲಿಸಿ 7.5 ಟಿಎಂಸಿ ಕುಡಿಯುವ ನೀರನ್ನು ಮಲಪ್ರಭಾ ನದಿಗೆ ಬಿಡುಗಡೆ ಮಾಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿರುವದಾಗಿ ತಿಳಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ಕಾರಿ ಆಸ್ಪತ್ರೆಗಳನ್ನು ಉನ್ನತ್ತೀಕರಣಗೊಳಿಸಿದೆ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೆ ಏಕಾಏಕಿಯಾಗಿ ಖಾಸಗಿ ವೈದ್ಯರ ವಿರುದ್ಧ ವಿಧೇಯಕ ಮಂಡಿಸಲು ಹೊರಟಿರುವದು ಸರಿಯಾದ ಕ್ರಮವಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಉನ್ನತ್ತೀಕರಣಗೊಳಿಸಿದರೆ ರೋಗಿಗಳು ಖಾಸಗಿ ಆಸ್ಪತ್ರೆಗೆ ಏಕೆ ಹೋಗುತ್ತಾರೆ ಎಂದು ಪ್ರಶ್ನಿಸಿದರು. ಮುಷ್ಕರ ನಿರತ ವೈದ್ಯರನ್ನು ಮನವಲಿಸಿ ಪರಿಹಾರ ಕಂಡುಕೊಳ್ಳದೆ ವಿನಾಕಾರಣ ಮುಖ್ಯಮಂತ್ರಿಗಳು ಕಾಲಹರಣ ಮಾಡುತ್ತಿರುವದು ಸಾರ್ವಜನಿಕರು ಪರದಾಡುವಂತಾಗಿದೆ ಎಂದರು. ಡಿವೈಎಪಿ ಗಣಪತಿ ಸಾವಿನ ಪ್ರಕರಣದ ಸಿಬಿಐ ತನಿಖೆಯಲ್ಲಿ ಲಾಡ್ಜನಲ್ಲಿ ಮತ್ತೊಂದು ಬುಲೆಟ್ ಸಿಕ್ಕಿದೆ. ಕಂಪ್ಯೂಟರನಲ್ಲಿದ್ದ ಮಾಹಿತಿ ಡಿಲಿಟ್ ಆದ ಬಗ್ಗೆ ತನಿಖಾ ವಿಧಿವಿಧಾನ ವರದಿ ಮಾಡಿದೆ. ಇದರಿಂದ ಡಿವೈಎಸ್ಪಿ ಗಣಪತಿ ಹಗರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದರೂ ಎಫ್‍ಐಆರ್ ನಲ್ಲಿ ಮೊದಲ ಆರೋಪಿಯಾಗಿರುವ ಸಚಿವ ಜಾರ್ಜ್ ರಾಜೀನಾಮೆ ಪಡೆಯದೆ ಮುಖ್ಯಮಂತ್ರಿಗಳು ಹಠಮಾರಿ ತನ ಧೋರಣೆ ತಾಳುತ್ತಿದ್ದಾರೆ ಎಂದರು.
ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಡಾ.ವಿಶ್ವನಾಥ ಪಾಟೀಲ, ಈರಣ್ಣಾ ಕಡಾಡಿ ಇದ್ದರು.
ಇದೇ 20ರಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿಯಲ್ಲಿ ಪರಿವರ್ತನಾ ಯಾತ್ರೆಯಲ್ಲಿ ಛತ್ತಿಸಗಡ ಮುಖ್ಯಮಂತ್ರಿ ಡಾ.ರಮಣಸಿಂಗ್ ಭಾಗವಹಿಸಲ್ಲಿದ್ದಾರೆ. ಹುಬ್ಬಳ್ಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬರಲು ಒಪ್ಪಿಕೊಂಡಿದ್ದಾರೆ.

loading...