ಕಷ್ಟ ಎದುರಿಸುವ ಛಲ ಇರಬೇಕು: ಗಂಗಾಧರ

0
38
loading...

ದಾಂಡೇಲಿ: ಜೀವನದಲ್ಲಿ ಕಷ್ಟಗಳನ್ನು ಎದುರಿಸಿ ಜೀವಿಸುವ ಛಲ ಇರಬೇಕು, ಸಂಕಷ್ಟಗಳನ್ನು ನಿವಾರಿಸಿ ಬಾಳಲು ಕಲಿಯುವುದು ಹಾಗೂ ಕತ್ತಲೆಯಿಂದ ಬೆಳಕಿನತ್ತ ಸಾಗುವುದೆ ನವ್ಮ ಬಾಳಿನ ಗುರಿಯಾಗಿರಬೇಕೆಂದು ಕರಾವಳಿ ಮುಂಜಾವು ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಗಂಗಾಧರ ಹಿರೆಗುತ್ತಿ ನುಡಿದರು.
ಅವರು ನಗರದ ಕರ್ನಾಟಕ ಸಂಘದ ಸಭಾ ಭವನದಲ್ಲಿ ರವಿವಾರರಂದು ಸಾಕ್ಷಿ ಪ್ರಕಾಶನದ ಆಶ್ರಯದಲ್ಲಿ ಜರುಗಿದ ಪ್ರವೀಣ ನಾಯಕ, ಹಿಚಕಡ ರವರ ‘ಕತ್ತಲೆಯ ಗೌರವಿಸಿ’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ಉದ್ಘಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಮಾಸ್ಕೇರಿ ನಾಯಕ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸದಾ ಚಟುವಟಿಕೆಯಿಂದ ಕೂಡಿರುವ ಪ್ರವೀಣ ನಾಯಕರ ಬತ್ತಲಿಕೆಯಲ್ಲಿ ಇನ್ನಷ್ಟು ಸಾಹಿತ್ಯದ ವ್ಯವಸಾಯ ಮಾಡುವ ಚಾಕಚಾಕ್ಯತೆಯಿದ್ದು, ಅದನ್ನು ಬಳಸುವುದರ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಮತ್ತಷ್ಟು ಸಾಹಿತ್ಯ ಕೃತಿಯ ಬೆಳೆಯನ್ನು ಕೊಡುವ ಶಕ್ತಿ ಅವರಿಗೆ ಬರಲೆಂದು ಶುಭ ಹಾರೈಸಿದರು. ಸಾಕ್ಷಿ ಪ್ರಕಾಶನದ ಸಂಚಾಲಕ ಹಾಗು ಕೃತಿಕಾರ ಪ್ರವೀಣ.ಜಿ.ನಾಯಕ ಸ್ವ್ವಾಗತಿಸಿದರು. ಸಹಸಂಚಾಲಕಿ ನಾಗರೇಖಾ ಗಾಂವಕರ ಅತಿಥಿಗಳ ಪರಿಚಯಿಸಿ ವಂದಿಸಿದರು ಜ್ಯೋತಿ ನಾಯಕ ನಿರುಪಿಸಿದರು.

loading...