ಕಾಂಗ್ರೆಸನ್ನು ಬುಡ ಸಮೇತ ಕಿತ್ತೂಗೆಯಬೇಕು: ಕಾಡದವರ

0
19
loading...

ಘಟಪ್ರಭಾ: ಮತದಾರರು ಈ ಬಾರಿ ಕಾಂಗ್ರೆಸನ್ನು ಬುಡ ಸಮೇತ ಕಿತ್ತೂಗೆಯಲು ನಿರ್ದರಿಸಿದ್ದು ಮುಂಬರುವ ವಿಧಾನ ಸಭಾ ಚುನಾವಣೆಯ ಪಲಿತಾಂಶವು ಐತಿಹಾಸಿಕ ದಾಖಲೆಯಾಗಲಿದೆ ಎಂದು ಬೆಳಗಾವಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸುರೇಶ ಕಾಡದವರ ಹೇಳಿದರು.
ಅವರು ಗುರುವಾರದಂದು ಮಲ್ಲಾಪೂರ ಪಿಜಿ ಪಟ್ಟಣದಲ್ಲಿ ಕರೆಯಲಾದ ಪರಿವರ್ತನಾ ರ್ಯಾಲಿಯ ಬಿಜೆಪಿ ನಿಷ್ಠಾವಂತ ಹಿರಿಯ ನಾಯಕರ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು. ಐದು ವರ್ಷಗಳ ಕಾಂಗ್ರೇಸ ಸರ್ಕಾರದ ದುರಾಡಳಿತ ಹಾಗೂ ಹಗಲು ದರೋಡೆಯನ್ನು ಕರ್ನಾಟಕದ ಜನತೆಗೆ ಮನವರಿಕೆ ಮಾಡಿಕೊಟ್ಟು ಕಾಂಗ್ರೇಸ್ ಮುಕ್ತ ಕರ್ನಾಟಕ ಮಾಡಲು ಪಣತೋಟ್ಟು ನಿಂತಿರುವ ಸನ್ಮಾನ್ಯ ಮಾಜಿ ಮುಖ್ಯ ಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರ ಪರಿವರ್ತನಾ ರ್ಯಾಲಿಯು ದಿ.18 ರಂದು ಗೋಕಾಕ ನಗರಕ್ಕೆ ಆಗಮಿಸಲಿದ್ದು ಅವರ ಸ್ವಾಗತಕ್ಕಾಗಿ ಎಲ್ಲ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಸಂಜೆ 5 ಗಂಟೆಗೆ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಬಿಜೆಪಿ ಹಿರಿಯ ನಾಯಕ ಸುರೇಶ ಪಾಟೀಲ ಮಾತನಾಡಿ ಈ ಬಾರಿ ಗೋಕಾಕ ವಿಧಾನ ಸಭೆಯ ಮತಕ್ಷೇತ್ರದ ಪಲಿತಾಂಶವು ಕರ್ನಾಟಕ ರಾಜ್ಯದ ಮುಂಚೂನೆಯಾಗಲಿದ್ದು ಎಲ್ಲ ಕಾರ್ಯಕರ್ತರು ಕೇಂದ್ರ ಸರಕಾರ ಯೋಜನೆಗಳನ್ನು ಜನರ ಮನೆ ಮನೆಗೆ ಮುಟ್ಟಿಸುವದಾಗಬೇಕು, ಈ ಬಾರಿ ಮಾತ್ರ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸುವದು ಶತಸಿಧ್ದವಾಗಿದೆ ಎಂದರು.
ಸಭೆಯಲ್ಲಿ ಜಿಲ್ಲೆಯ ಹಿರಿಯ ನಾಯಕರುಗಳಾದ ಪ್ರಮೋದ ಜೋಶಿ, ಲಕ್ಷ್ಮಣ ತಪಶಿ, ಆನಂದ ಘೋಟಡಕಿ, ಪ್ರವೀನ ಚುನಮುರಿ, ರಾಜು ಜೋಗದಂಡೆ, ಜಿ.ಎಸ್.ರಜಪೂತ, ಸಂತೋಷ ಮಾವರಕರ ಸೇರಿದಂತೆ ಅನೇಕರು ಇದ್ದರು.

loading...