ಕಾಂಗ್ರೇಸ ಮಹಿಳಾ ಘಟಕದಿಂದ ಗ್ರಾಮ ವಾಸ್ತವ್ಯ

0
29
loading...

ಕಾಂಗ್ರೇಸ ಮಹಿಳಾ ಘಟಕದಿಂದ ಗ್ರಾಮ ವಾಸ್ತವ್ಯ

ಕನ್ನಡಮ್ಮ ಸುದ್ದಿ

  • ಹುಕ್ಕೇರಿ 30:ಮಾಜಿ ಪ್ರಧಾನಿ ದಿವಂಗತ ಇಂಧಿರಾಗಾಂಧಿ ಜನ್ಮ ಶತಮಾನೋತ್ಸವದ ಅಂಗವಾಗಿ ತಾಲೂಕಿನ ಅರ್ಜುನವಾಡ ಗ್ರಾಮದಲ್ಲಿ ಕಾಂಗ್ರೇಸ ಮಹಿಳಾ ಘಟಕದ ವತಿಯಿಂದ ಗ್ರಾಮ ವಾಸ್ತವ್ಯ ಮತ್ತು ಮನೆ ಮನೆಗೆ ಕಾಂಗ್ರೇಸ ಕಾರ್ಯಕ್ರಮ ನಡೆಸಲಾಯಿತು.
    ಇತ್ತಿಚಿಗೆ ಅರ್ಜುನವಾಡ ಗ್ರಾಮದ ರೈತ ಮಹಿಳೆ ಭಾರತಿ ಅಣಾಸಾಹೇಬ ಪವಾರ ಅವರ ಮನೆಯಲ್ಲಿ ಮಹಿಳಾ ಕಾಂಗ್ರೇಸ ಕಾರ್ಯಕರ್ತರು ವಾಸ್ತವ ಮಾಡಿದರು.ಮಹಿಳೆಯರ ಕುಂದು ಕೋರತೆಯ ಬಗ್ಗೆ ಇಲ್ಲಿ ಅವಲೋಕನೆ ಮಾಡಲಾಯಿತ್ತು. ಈ ಸಂಧರ್ಭದಲ್ಲಿ ಯಮನಕನಮರಡಿ ಮಹಿಳಾ ಬ್ಲಾಕ ಕಾಂಗ್ರೇಸ ಘಟಕದ ಅಧ್ಯಕ್ಷೆ ಶ್ರೀಮತಿ ಶಹನಾಜ ಗಡೆಕಾಯಿ ಮಾತನಾಡಿ ರಾಜ್ಯ ಕಾಂಗ್ರೇಸ ಸರಕಾರ ರಾಜ್ಯದ ರೈತರ ಪರವಾದ ಆಡಳಿತ ನೀಡುತ್ತಿದ್ದು ರೈತರ ಸಂಕಷ್ಟ ಸ್ಪಂದಿಸಿ ರೈತರ ಸಹಕಾರಿ ಬ್ಯಾಂಕ್‍ಗಳ ಸಾಲ ಮನ್ನಾಮಾಡಿ ರೈತ ಪರ ಸರಕಾರ ಎಂದು ಸಾಬೀತು ಪಡಿಸಿದೆ ಎಂದರು.ಶಾಸಕರಾದ ಸತೀಶ ಜಾರಕಿಹೋಳಿ ಅವರು ಯಮಕನಮರಡಿ ಕ್ಷೇತ್ರದಲ್ಲಿ ಹಲವಾರೂ ಅಭಿವೃದ್ದಿ ಕಾರ್ಯಗಳನ್ನ ಮಾಡಿದ್ದಾರೆ ಎಂದರು.
    ಈ ಸಂದರ್ಭದಲಿ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿಗಳಾದ ರುಕ್ಸಾನ ಉಸ್ತಾದ,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರಿ ಮಾಳಗಿ,ಯಮಕನಮರಡಿ ಬ್ಲಾಕ ಅದ್ಯಕ್ಷೆ ಶ್ರೀಮತಿ ಶಹನಾಜ ಗಡೆಕಾಯಿ,ಕಾರ್ಯಕರ್ತಯರಾದ ಚನ್ನಮ್ಮಾ ಮೋಕಾಶಿ,ರಜಿಯಾ,ಕಲ್ಪನಾ ಕುರಾಡೆ,ಮುಂತಾದವರು ಇದ್ದರು.
loading...