ಕಾತ್ರಾಳ ಕೆರೆಗೆ ನೀರು: 55 ಯುವಕರು ಧೀರ್ಘದಂಡ ನಮಸ್ಕಾರ

0
17
loading...

ಕನ್ನಡಮ್ಮ ಸುದ್ದಿ;- ವಿಜಯಪುರ: ಕಾತ್ರಾಳ ಕೆರೆಗೆ ಕೃಷ್ಣಾ ನದಿಯಿಂದ ನೀರು ತುಂಬಿಸಿರುವ ಪ್ರಯುಕ್ತ ಗ್ರಾಮದ 55 ಯುವಕರು ಸಾಮೂಹಿಕವಾಗಿ ಕಾತ್ರಾಳ ಶ್ರೀ ಸಿದ್ದರಾಮೇಶ್ವರ ದೇವಸ್ಥಾನದಿಂದ ವಿಜಯಪುರದ ಶ್ರೀ ಸಿದ್ದರಾಮೇಶ್ವರ ದೇವಸ್ಥಾನದವರೆಗೆ ಧೀರ್ಘದಂಡ ನಮಸ್ಕಾರಗಳನ್ನು ಸಲ್ಲಿಸಿದರು.
ಯುವಕರಾದ ಸಿದ್ದರಾಯ ಪಡಸಲಗಿ, ಗುರುಬಸಪ್ಪ ತೆವರೆಟ್ಟಿ, ಮಂಜುನಾಥ ನರಳಿ, ಅಮ್ಮೋಗಿ ಗಲಗಲಿ, ಗಣಪತಿ ಕೊಕಟನೂರ, ಧರೆಪ್ಪ ಬಿರಾದಾರ, ಕುತುಬುದ್ದೀನ್‌ ಜಮಾದಾರ, ಹಾಜಿಸಾಬ ವಾಲಿಕಾರ, ಮುತ್ತಪ್ಪ ಬಡಿಗೇರ, ವಸಂತ ಗುಗ್ಗರಿ ಸೇರಿದಂತೆ 55 ಯುವಕರು ಶನಿವಾರ ಸಂಜೆ ಕಾತ್ರಾಳದಿಂದ ಹೊರಟು ರವಿವಾರ ಮದ್ಯಾಹ್ನ 2.30ಗಂಟೆಗೆ ವಿಜಯಪುರದ ಶ್ರೀ ಸಿದ್ದರಾಮೇಶ್ವರ ದೇವಸ್ಥಾನ ತಲುಪಿದರು. ದೇವಸ್ಥಾನದ ಆವರಣದಲ್ಲಿ ಸ್ನಾನ, ಪೂಜೆ ಮಾಡಿ ಸಿದ್ದರಾಮೇಶ್ವರನಿಗೆ ಮಹಾಮಂಗಳಾರತಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವರ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಯುವಕರನ್ನು ಸಿದ್ದೇಶ್ವರ ದೇವಸ್ಥಾನದಲ್ಲಿ ಸ್ವಾಗತಿಸಿ ಮಾತನಾಡಿದ ಅವರು, ಆಲಮಟ್ಟಿ ಎಡದಂಡೆ ಕಾಲುವೆ 1995ರಲ್ಲಿ ಆರಂಭಗೊಂಡು, 80ಕಿ.ಮೀ ಉದ್ದದ ಕಾಲುವೆ ಪೂರ್ಣಗೊಳ್ಳಲು 20ವರ್ಷ ಬೇಕಾಯಿತು, ಆದರೆ ಎಂ.ಬಿ.ಪಾಟೀಲರ ಅವಧಿಯಲ್ಲಿ ಮಸೂತಿ ಜಾಕ್ವೆಲ್‌ ಪೂರ್ಣಗೊಂಡು 500 ಕಿ.ಮೀ ಮುಖ್ಯ ಕಾಲುವೆಗಳನ್ನು ಮುಳವಾಡ ಯೋಜನೆಯಲ್ಲಿ ಪೂರ್ಣಗೊಳಿಸಿದ್ದಾರೆ.
ಕಾತ್ರಾಳ ಗ್ರಾಮದ ಪ್ರಾಧ್ಯಾಪಕ ಎಂ.ಡಿ.ಪಡಸಲಗಿ ಮಾತನಾಡಿ, 1980ರಲ್ಲಿ ನಿರ್ಮಾಣಗೊಂಡ ಗ್ರಾಮದ ಕೆರೆ 37 ವರ್ಷಗಳಲ್ಲಿ 4-5 ಸಾರಿ ಮಾತ್ರ ತುಂಬಿದೆ. ಗ್ರಾಮದ ಶೇ.90 ರಷ್ಟು ಭಾಗ ಜಮೀನು ಈ ಕೆರೆಯ ಅಚ್ಚುಕಟ್ಟಿನಲ್ಲಿ ಬರುತ್ತಿದ್ದು, ನಾವು ಕೆರೆಯಲ್ಲಿ ನೀರಿಲ್ಲದ ಕಾರಣ ನಮ್ಮ ಜೀವನ ಪರ್ಯಂತ ಸಂಕಟ ಅನುಭವಿಸಿದ್ದೇವೆ ಎಂದರು.
ಹರಕೆ ಸೇವೆ ಸಲ್ಲಿಸಿದ ಎಲ್ಲರನ್ನು ಯುವ ಮುಖಂಡ ಅಪ್ಪುಗೌಡ ಪಾಟೀಲ ಶೇಗುಣಸಿ, ಮಲ್ಲಪ್ಪ ಕೆಂಪವಾಡ, ಈಶ್ವರ ಬಡ್ರಿ, ರಾಮನಿಂಗ ಕೊಕಟನೂರ, ವಿವೇಕ ಕುಂಬಾರ ಸನ್ಮಾನಿಸಿದರು.

loading...