ಕಾನೂನು ಅರಿತರೆ ಶಾಂತಿ ಸುವ್ಯವಸ್ಥೆಯಿಂದ ಬದುಕಬಹುದು

0
36
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ಪ್ರಜಾಪ್ರಭುತ್ವ ಹೊಂದಿದ ಭಾರತ ದೇಶದಲ್ಲಿ ಪ್ರತಿಯೊಬ್ಬರು ಕಾನೂನಿನ ಅರಿವು ಹೊಂದಿದಾಗ ಮಾತ್ರ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯಿಂದ ಜನರು ಬದುಕಬಹುದಾಗಿದೆ ಎಂದು ನ್ಯಾಯಾಧೀಶರಾದ ನೂರುನ್ನಿಸಾ ಹೇಳಿದರು.
ಸಮೀಪದ ವಕ್ಕುಂದ ಗ್ರಾಮದಲ್ಲಿ ಬೈಲಹೊಂಗಲ ಸರ್ಕಾರಿ ಪದವಿ ಪೂರ್ವ ಮಾಹಾವಿದ್ಯಾಲಯದ ಎನ್‍ಎಸ್‍ಎಸ್ ಶಿಬಿರದ ಕಾನೂನು ಸಾಕ್ಷರತಾ ಕಾರ್ಯಕ್ರಮ ಹಾಗೂ ಕಾನೂನು ಸೇವಾ ಸಮಿತಿ ವತಿಯಿಂದ ನಡೆದ ಉಚಿತ ಕಾನೂನು ನೆರವು ಮತ್ತು ಅರಿವು ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡಿದ ಅವರು. ವಿದ್ಯಾರ್ಥಿಗಳು ಕೆವಲ ಜ್ಞಾನ ಸಂಪಾದನೆ ಗಳಿಸಿದರೆ ಸಾಲದು. ಕಾನೂನಿ ಅರಿವು ಮತ್ತು ಅದರ ಪಾಲನೆಯನ್ನು ಪ್ರತಿ ಕ್ಷಣಗಳಲ್ಲಿಯು ಮೈಗೂಡಿಸಿಕೊಳ್ಳಬೇಕೆಂದರು.

ಹಿರಿಯ ದಿವಾಣಿ ನ್ಯಾಯಾಧೀಶ ಶ್ರೀಕಾವೇರಿ ಕಲ್ಮಠ ಕಾರ್ಯಕ್ರಮ ಉದ್ಘಾಟನೆಗೊಳಿಸಿ ಮಾತನಾಡಿ, ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದ ದುರ್ಬಲ ವರ್ಗದವರಿಗೆ ಹೆಣ್ಣು ಮಕ್ಕಳಿಗೆ ಮತ್ತು ಮಕ್ಕಳಿಗೆ ಉಚಿತ ಕಾನೂನಿನ ಸೇವೆ ನೀಡುವ ಕಾರ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದರು. ಹೆಚುವರಿ ದಿವಾಣಿ ನ್ಯಾಯಾಧೀಶರಾದ ವೆಂಕಟೇಶ ನಾಯ್ಕ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ ವಾಯ್. ಸೋಮಣ್ಣವರ ಉಪನ್ಯಾಸಕ ಬಸವರಾಜ ಪುರಾಣಿಕಮಠ, ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಪರ್ವತಗೌಡ ಪಾಟೀಲ, ಕಲಾವಿದ ಸಿ ಕೆ. ಮೆಕ್ಕೆದ, ಹಿರಿಯ ನ್ಯಾಯವಾದಿ ಎ ಆರ್. ಪಾಟೀಲ. ಪ್ರಾಚಾರ್ಯ ಎಸ್ ಎನ್. ಅಸೋದೆ, ಎಂ ಬಿ. ಇಂಗಳಗಿ, ನ್ಯಾಯವಾದಿಗಳು ಪ್ರಾಧ್ಯಾಪಕ ಬಸವರಾಜ ಅಡಕಿ, ಎಂ ಎನ್. ಕಿಲಾರಿ ಗ್ರಾಪಂ ಸದಸ್ಯರು ಸೇರಿದಂತೆ ಇತರರು ಇದ್ದರು.

loading...