ಕಿತ್ತೂರು ಕ್ಷೇತ್ರ ಬಿಜೆಪಿ ವಶವಾಗಲಿದೆ ಃ ಮಹಾಂತೇಶ ದೊಡಗೌಡರ

ಪರಿವರ್ತನಾ ಯಾತ್ರೆ ಅಂಗವಾಗಿ ಬೈಕ್ ರ್ಯಾಲಿಗೆ ಚಾಲನೆ.

ಪರಿವರ್ತನಾ ಯಾತ್ರೆ ಅಂಗವಾಗಿ ಬೈಕ್ ರ್ಯಾಲಿಗೆ ಚಾಲನೆ.
 ಕನ್ನಡ ಸುದ್ದಿ ಚನ್ನಮ್ಮ ಕಿತ್ತೂರು.
ಬಿಜೆಪಿ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಅಂಗವಾಗಿ ಯಡಾಲ್ ಗ್ರಾಮದ ಹತ್ತಿರ ಬೈಕ್ ರ್ಯಾಲಿಗೆ ಕಿತ್ತೂರು ವಿಧಾನ ಸಭಾ ಚುನಾವಣಾ ಉಸ್ತುವಾರಿ   ಜಗದೀಶ ಹಿರೇಮನಿ ಚಾಲನೆ ನೀಡಿದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ ಮಾತನಾಡಿ, ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ರಾಜ್ಯದ ಜನತೆ ರೋಸಿಹೋಗಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಜನತೆ ಬಿಜೆಪಿ ಅಧಿಕಾರಕ್ಕೆ ತರಲು ಸಿದ್ದರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಿತ್ತೂರು ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶಾಸಕರಾಗಿ ಆಯ್ಕೆಯಾಗಲಿದ್ದಾರೆ. ಕೇಂದ್ರ ಸರಕಾರ ಹಲವಾರು ಜನಪರ ಯೋಜನೆಗಳನ್ನು ತಂದು ದೇಶದ ಅಭಿವೃದ್ಧಿಗೆ ಪ್ರಧಾನಿ ಮೋದಿಯವರು ಪಣ ತೊಟ್ಟಿದ್ದಾರೆ. ಅಭಿವೃದ್ಧಿಯನ್ನು ದೂರ ತಳ್ಳಿರುವ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕ್ಷೇತ್ರ ಮತ್ತು ರಾಜ್ಯದಿಂದ ಕಿತ್ತೆಸೆಯಲು ಜನರು ತಿರ್ಮಾನಿಸಿದ್ದು, ಕ್ಷೇತ್ರದಲ್ಲಿ ಬಾರೀ ಜನಬೆಂಬಲ ಸಿಗುತ್ತಿದೆ.  ಎಂದು ಹೇಳಿದರು.
ಮಾಜಿ ಎಪಿಎಂಸಿ ಅಧ್ಯಕ್ಷ ಸಿ.ಆರ್.ಪಾಟೀಲ ಮಾತನಾಡಿ, ಪರಿವರ್ತನಾ ಯಾತ್ರೆಗೆ ಕ್ಷೇತ್ರದಲ್ಲಿ ಅಪಾರ ಜನಬೆಂಬಲ ವ್ಯಕ್ತವಾಗಿದ್ದು, ಕಿತ್ತೂರು ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಒಟ್ಟು 150ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ರಾಜ್ಯದ ಚುಕ್ಕಾಣಿಯನ್ನು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಪಕ್ಷ ಹಿಡಿಯಲಿದೆ ಎಂದು ಹೇಳಿದರು.
 ಕೇಂದ್ರ ಸರಕಾರದ ಜನಪರ ಯೋಜನೆ, ಮೋದಿಯವರ ಉತ್ತಮ ಆಡಳಿತದ ಮೂಲಕ ದೇಶದಲ್ಲಿ ಮನೆಮಾತಾಗಿದ್ದಾರೆ. ರೈತಪರ ನಾಯ್ಕ ಯಡಿಯೂರಪ್ಪನವರನ್ನು ಮುಂದಿನ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಲಿದ್ದಾರೆ ಎಂದು ಹೇಳಿದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಸನಗೌಡ ಸಿದ್ರಾಮನಿ,  ಮಾಜಿ ಜಿಪಂ ಸದಸ್ಯ ಬಸವರಾಜ ಕೊಳದೂರ, ಮಲ್ಲಿಕಾರ್ಜುನ ಉಳ್ಳಾಗಡ್ಡಿ, ರಮೇಶ ಪರವೀನಾಯ್ಕರ, ಸಿದ್ದಯ್ಯ ಹಿರೇಮಠ, ನ್ಯಾಯವಾದಿ ಆನಂದ ಜಕಾತಿ, ನ್ಯಾಯವಾದಿ ಶ್ರೀಕರ್ ಕುಲಕರ್ಣಿ ಸೇರಿದಂತೆ ಇತರರು ಇದ್ದರು ನೂರರು ಬೈಕ್ ಗಳ ಮೂಲಕ ರ್ಯಾಲಿ ಸಾಗಿತು.
loading...