ಕೆರೆಗಳಿಗೆ ನೀರು ಪೂರೈಸುವಂತೆ ಮನವಿ

0
14
loading...

ಮುಂಡಗೋಡ: ಮುಂಡಗೋಡ ತಾಲೂಕಿನ ಕೆರೆಗಳಿಗೆ ಬೇಡ್ತಿ ನದಿಯಿಂದ ನೀರು ಪೂರೈಸುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಅವರು ಸೋಮವಾರ ಸಂಜೆ ಬೆಳಗಾವಿಯಲ್ಲಿ ಮನವಿ ಅರ್ಪಿಸಿದರು.
ಮುಂಡಗೋಡ ತಾಲೂಕಿನ ಕೆರೆಗಳಿಗೆ ಬೇಡ್ತಿ ನದಿಯಿಂದ ನೀರು ಪೂರೈಸುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಹೆಬ್ಬಾರ ಮನವಿ ಮುಂಡಗೋಡ ತಾಲೂಕಿನ ಕೆರೆಗಳಿಗೆ ಬೇಡ್ತಿ ನದಿಯಿಂದ ನೀರು ಪೂರೈಸುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಅವರು ಸೋಮವಾರ ಸಂಜೆ ಬೆಳಗಾವಿಯಲ್ಲಿ ಮನವಿ ಅರ್ಪಿಸಿದರು.

ಮುಂಡಗೋಡ ತಾಲೂಕಿನಲ್ಲಿ ಪ್ರತಿವರ್ಷ ಸಕಾಲಕ್ಕೆ ಮಳೆ ಬಾರದಿರುವುದರಿಂದ ಕೆರೆಗಳಲ್ಲಿ ನೀರು ತುಂಬದೇ ಬರಿದಾಗಿ ಕೃಷಿ ಬೆಳೆಯನ್ನು ಬೆಳೆಯಲು ಹಾಗೂ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗುತ್ತಿದೆ. ಕಳೆದ 3-4 ವರ್ಷಗಳಿಂದ ಸತತ ಬರಗಾಲವಿದ್ದು, ಸರ್ಕಾರ ಕೂಡ ಮುಂಡಗೋಡ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಕೃಷಿಕರ ಸಂಕಷ್ಟವನ್ನು ನಿವಾರಿಸುವ ಸಲುವಾಗಿ ತಾಲೂಕಿನಲ್ಲಿ ಹರಿಯುವ ಬೇಡ್ತಿ ನದಿಯಿಂದ ಮಳೆಗಾಲದಲ್ಲಿ ಮುಂಡಗೋಡದಲ್ಲಿರುವ ಕೆರೆಗಳಿಗೆ ನೀರು ತುಂಬಿಸಿದಲ್ಲಿ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬಹುದಾಗಿದೆ. ಈಗಾಗಲೇ ಸರಕಾರವು ಮುಂಡಗೋಡ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸಿದ್ದಪಡಿಸುತ್ತಿದ್ದು, ಈ ಯೋಜನೆಗೆ ತ್ವರಿತವಾಗಿ ಮಂಜೂರಾತಿ ನೀಡಿ ಮುಂಡಗೋಡ ತಾಲೂಕಿನ ಕೃಷಿಕರಿಗೆ ಹಾಗೂ ನಾಗರಿಕರಿಗೆ ನೀರಾವರಿ ಸೌಕರ್ಯವನ್ನು ಒದಗಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಮುಂಡಗೋಡ ತಾಲೂಕಾ ಬ್ಲಾಕ ಕಾಂಗ್ರೆಸ ಅಧ್ಯಕ್ಷ ರವಿಗೌಡ ಪಾಟೀಲ, ಮುಖಂಡರಾದ ಎಚ್.ಎಂ.ನಾಯ್ಕ, ಕೃಷ್ಣ ಹಿರೇಹಳ್ಳಿ, ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗೀಮಠ, ಉಪಾಧ್ಯಕ್ಷ ಕೃಷ್ಣಮೂರ್ತಿ ನಾಡಿಗ, ಟಿ.ಎ.ಪಿ.ಸಿ.ಎಂ.ಸೊಸೈಟಿ ಅಧ್ಯಕ್ಷ ಪಿ.ಎಸ್.ಸಂಗೂರಮಠ, ಎ.ಪಿ.ಎಂ.ಸಿ. ಅಧ್ಯಕ್ಷ ದೇವು ಪಾಟೀಲ, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಆರ್.ಬಾಳೆಕಾಯಿ, ತಾ.ಪಂ.ಸದಸ್ಯ ಜ್ಞಾನದೇವ ಗುಡಿಯಾಳ, ಗುಂಜಾವತಿ ಗ್ರಾ.ಪಂ.ಅಧ್ಯಕ್ಷ ಬಸಯ್ಯ ನಡುವಿನಮನಿ, ಕೆ.ಡಿ.ಸಿ.ಸಿ.ಬ್ಯಾಂಕ ನಿರ್ದೇಶಕ ಪ್ರಮೋದ ಢವಳೆ ಮುಂತಾದವರಿದ್ದರು.

 

loading...