ಕೆ.ಪಿ.ಎಂ.ಇ ಕಾಯಿದೆಯನ್ನು ವಿರೋಧಿಸಿ ಬೆಳಗಾವಿ ಚಲೋ

0
28
loading...

ದಾಂಡೇಲಿ: ಕೆ.ಪಿ.ಎಂ.ಇ ಕಾಯಿದೆಯನ್ನು ವಿರೋಧಿಸಿ ಇಂಡಿಯನ್ ಮೆಡಿಕಲ್ ಅಸೋಶಿಯೇಶನ್ ಕರೆ ನೀಡಿದ್ದ ಬೆಳಗಾವಿ ಚಲೋ ಕಾರ್ಯಕ್ರಮದಲ್ಲಿ ದಾಂಡೇಲಿಯ ಐ.ಎಮ್.ಎ. ನೇತೃತ್ವದಲ್ಲಿ 25 ರಷ್ಟು ಖಾಸಗಿ ವೈದ್ಯರು ಹಾಗೂ ಲ್ಯಾಬ್ ನಿರ್ವಾಹಕರು ತಮ್ಮ ಸೇವೆ ಸ್ಥಗಿತಗೊಳೀಸಿ ಭಾಗವಹಿಸಿದ್ದರು.
ಇಂಡಿಯನ್ ಮೆಡಿಕಲ್ ಅಸೋಶಿಯೇಶನ್ ದಾಂಡೇಲಿ ಘಟಕದ ಅಧ್ಯಕ್ಷ ಡಾ. ಎಸ್.ಎಲ್ ಕರ್ಕಿ ಯವರ ನೇತೃತ್ವದಲ್ಲಿ ಡಾ. ಆರ್.ಕೆ.ಕುಲಕರ್ಣಿ, ಡಾ. ಎನ್.ಜಿ.ಬ್ಯಾಕೋಡ, ಡಾ. ಮೋಹನ ಪಾಟೀಲ, ಡಾ. ಶೇಖರ, ಡಾ. ಎಸ್.ಎನ್.ಧಪೇದಾರ, ಡಾ. ಅನೂಪ್ ಮಾಡ್ದೋಳ್ಕರ್, ಡಾ. ಸಲ್ಮಾನ್, ಡಾ. ಜಾಹಿರಾ ದಪೇದಾರ, ಡಾ. ಪಿ.ಎನ್.ಕದಂ, ಡಾ. ವಾಸಿಕ್ ಅಹ್ಮದ್, ಮುಂತಾದವರು ಹಾಗೂ ಲ್ಯಾಬ್ ತಂತ್ರಜ್ಞ ಗೋವಿಂದ, ಈಶ್ವರ ಮುಂತಾದವರು ಭಾಗವಹಿಸಿದ್ದರು.

loading...