ಕ್ಯಾದಿಗುಂಪ್ಪ ಗ್ರಾಮದಲ್ಲಿ ಯಶಸ್ವಿಯಾದ ಜನಪದ ಕಾರ್ಯಕ್ರಮ

0
32
loading...

ಕುಷ್ಟಗಿ: ತಾಲೂಕಿನ ಕ್ಯಾದಿಗುಂಪ್ಪ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕೊಪ್ಪಳ ಹಾಗೂ ಶ್ರೀ ದುರ್ಗಾ ಶಕ್ತಿ ಗ್ರಾಮೀಣಾಭಿವೃದ್ಧಿ ಸಂಸ್ಕøತಿಕ ಸೇವಾ ಸಂಸ್ಥೆ (ರಿ) ಕುಷ್ಟಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜನಪದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕ್ಯಾದಿಗುಂಪ್ಪ ಇವರ ಆಶ್ರಯದಲ್ಲಿ ನಡೆದ ಜನಪದ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧಯ್ಯರಾದ ಕಸ್ತೂರಿಬಾಯಿ ಹಿರೇಮಠ ಮಾತನಾಡಿ ಜನಪದ ಎಂದರೆ ಜನರಿಂದ ಜನರಿಗಾಗಿ ಮೂಡಿಬರುವಂತ ಪದವೇ ಜನಪದವಾಗಿದ್ದು ಜನಪದ ಕಾರ್ಯಕ್ರಮವು ಅತ್ಯಂತ ಸಂಸ್ಕøತವಾದ ಕಾರ್ಯಕ್ರಮವಾಗಿದ್ದು ಇತ್ತಿಚಿಗೆ ಜನಪದ ಕಾರ್ಯಕ್ರಮವು ಯಾರ ಬಾಯಿಯಲ್ಲೂ ಸಹ ಇಲ್ಲ, ಬರೀ ಸಿನಿಮಾ ರಂಗದ ಹಾಡುಗಳನ್ನು ಹಾಡುತ್ತಾರೆ. ಆದರೆ ಯುವಕರು ಅದರ ಬದಲು ನಮ್ಮ ನಾಡಿನ ಜನಪದ ಸಂಸ್ಕøತಿಯ ಕಲೆಯಾದ ಜನಪದ ಕಲೆಯ ಉಳಿಗಾಗಿ ಜನಪದ ಮತ್ತು ತತ್ವ ಪದ, ಸಗೀತ ಪದ, ಲಾವಣಿ ಪದ ಇವುಗಳನ್ನು ಉಳಿಸುವಲ್ಲಿ ಸಾರ್ವಜನಿಕರು ಸಹಕರಿಸಬೇಕಾಗಿದೆ ಎಂದು ಹೇಳಿದರು. ಜನಪದ ಕಾರ್ಯಕ್ರಮವನ್ನು ದೊಡ್ಡನಗೌಡ ಎಸ್.ಪಾಟೀಲ ಪ್ರಾಯೋಜಿತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ವೇ.ಯೂ.ಗಳಾದ ಶಂಕ್ರಯ್ಯ ಹಿರೇಮಠ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದರು, ಎ.ಪಿ.ಎಂ.ಸಿ ಸದಸ್ಯ ಮಲ್ಲಿಕಾರ್ಜುನ ಚಳಗೇರಿ, ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಮ್ಮ ಬುದಿಹಾಳ, ಎಸ್.ಡಿ.ಎಂ.ಸಿ ಅಧ್ಯಕ್ಷ ಬಸವರಾಜ ರುಳ್ಳಿ, ರೇಣುಕಾ ಶಿವನಗುತ್ತಿ, ಕಲಾವಿದರಾದ ಸಿದ್ದಪ್ಪ ಕಲಕಬಂಡಿ, ದೇವೇಂದ್ರಪ್ಪ ಕಮ್ಮಾರ, ಕೃಷ್ಣಾ ಬೇನ್ನೂರ, ಸಂಗೀತ ಶಿಕ್ಷಕರಾದ ಮಲ್ಲಯ್ಯ ಗುಡಿ, ಗವಾಯಿಗಳಾದ ಮಂಜುನಾಥ ಇಲ್ಲಕಲ್, ಸುಖಮುನಿ ಕಡಿಗಿ ಸೇರಿದಂತೆ ಉಪಸ್ಥಿತರಿದ್ದರು.

loading...