ಗಚ್ಚಿನಮಠದ ಶ್ರೀಗಳು ಅಂತರಂಗದಲ್ಲಿ ಸಾಧನೆ ಮಾಡಿದ ಸಾಧಕರು: ವೆಂಕಟೇಶ

0
30
loading...

ಕನ್ನಡಮ್ಮ ಸುದ್ದಿ-ಅಥಣಿ: ಗಚ್ಚಿನಮಠದ ಮುರುಘೇಂದ್ರ ಶಿವಯೋಗಿಗಳು ಅಂತರಂಗದಲ್ಲಿ ಸಾಧನೆ ಮಾಡಿದ ಸಾಧಕರು. ವಾಕ್ ಸಿದ್ಧಿ, ಮನಸಿದ್ಧಿ, ಆತ್ಮಸಿದ್ಧಿ ಮಾಡಿಕೊಂಡು, ಷಟಸ್ಥಲ್‍ವನ್ನು ಗೆದ್ದುಕೊಂಡು, ಷಟಸ್ಥಲ ಬ್ರಹ್ಮಿ ಎನಿಸಿಕೊಂಡು, ಲೋಕಕಲ್ಯಾಣಗೈದ ಮಹಾತ್ಮರು ಎಂದು ಕರ್ನಾಟಕ ಸಂಸ್ಕøತಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಮಲ್ಲೇಪುರಂ ವೆಂಕಟೇಶ ಹೇಳಿದರು.
ಶುಕ್ರವಾರ ಡಾ. ಆರ್ ಎಚ್. ಕುಲಕರ್ಣಿ ಭವನದಲಿ,್ಲ ಸಿದ್ಧೇಶ್ವರ ಮೋಫತ್ ವಾಚನಾಲಯ ಮತ್ತು ಸಾಹಿತ್ಯ ಸಾಂಸ್ಕøತಿಕ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಸಲಾದ “ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳವರ” ಅಧ್ಯಾತ್ಮ ದರ್ಶನ ಕುರಿತು, ಉಪನ್ಯಾಸ ನೀಡಿ ಮಾತನಾಡಿದ ಅವರು. ವೇದಾಂತ, ಶೈವಾಗಮ, ಕೈವಲ್ಯ ಪದ್ಧತಿ ಇವೆಲ್ಲವನ್ನೂ ಶಿವಯೋಗಿಗಳು ಓದಿದ್ದರೂ ಕೂಡ, ಅಪ್ಪ ಬಸವಣ್ಣನವರ ವಚನಗಳನ್ನು ಮಾತ್ರ ಯಾವಾಗಲೂ ಹೇಳುತ್ತಿದ್ದರು. ಅವರೊಂದಿಗೆ ಬಾಲಗಂಗಾಧರ ತಿಲಕ, ಮೈಸೂರು ಒಡೆಯರು, ಲಿಂಗರಾಜರು ಮೊದಲಾದವರು ಕೂಡ ಚಿಂತನೆ ಮಾಡಿದ ಹಿರಿಮೆ ಇದೆ. ಅಪೇಕ್ಷೆಗಳನ್ನು ಕಡಿಮೆ ಮಾಡಿಕೊಂಡರೇ ಸಿದ್ಧ ಸಾಧಕರಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಸಮಾರಂಭದಲ್ಲಿ ಪ್ರಕಾಶ ಮಹಾಜನ, ಶಿವಪುತ್ರ ಯಾದವಾಡ, ಶ್ರೀಶೈಲ ಸಂಕ, ಎ ಬಿ. ಪೂಜಾರಿ, ಅಪ್ಪಾಸಾಹೇಬ ಅವಟಿ, ಅಪ್ಪಾಸಾಹೇಬ ಅಲಿಬಾದಿ, ಡಾ. ಜೆ ಪಿ. ದೊಡಮನಿ, ಜಿ ಡಿ. ಗುರವ, ನ್ಯಾಯವಾದಿ ಸಂಜು ಪಾಟೀಲ, ಅರುಣಕುಮಾರ ರಾಜಮಾನೆ, ಪ್ರಕಾಶ ಖೋತ, ನಾರಾಯಣ ಆನಿಖಿಂಡಿ. ಡಾ. ಮಹಾಂತೇಶ ಉಕ್ಕಲಿ, ವಿಜಯ ಕರೋಲಿ, ಆರ್ ಆರ್. ಪಠಾಣ, ಆರ್ ಎ. ಜೋಶಿ, ಬಿ ಎಸ್. ಅಂಬಿ, ಮಲ್ಲಿಕಾರ್ಜುನ ಕರಣಿ, ಚಿದಾನಂದ ಗೋಠೆ ಮೊದಲಾದವರು ಉಪಸ್ಥಿತರಿದ್ದರು. ವಾಮನ ಕುಲಕರ್ಣಿ ನಿರೂಪಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ದತ್ತಿ ಪುಸ್ತಕ ಪ್ರಶಸ್ತಿ ವಿಜೇತ ಪ್ರಭಾ ಬೊರಗಾಂವಕರ, ಪ್ರಿಯಂವದಾ ಅಣೆಪ್ಪನವರ ಸನ್ಮಾನಿಸಿದರು.

loading...