ಗೃಹ ಮಂಡಳಿಯ ಅವ್ಯವಹಾರ ಸಿಬಿಐಗೆ ವಹಿಸಿ: ಯತ್ನಾಳ ಒತ್ತಾಯ

0
17
loading...

ಕನ್ನಡಮ್ಮ ಸುದ್ದಿ
ಸುವರ್ಣ ವಿಧಾನ ಸೌಧ, ಬೆಳಗಾವಿ:22 ಕರ್ನಾಟಕ‌ ಗೃಹಮಂಡಳಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅವ್ಯವಹಾರ ನಡೆದಿರುವುದು‌ ಸ್ಪಷ್ಟವಾಗಿದೆ ಇದನ್ನು ಸಿಬಿಐ ತನಿಖೆ ನಡೆಸಬೇಕೆಂದು ಸದಸ್ಯ ಬಸವರಾಜ ಪಾಟೀಲ ಯತ್ನಾಳ ಒತ್ತಾಯಿಸಿದರು.
ವಿಧಾಪರಿಷತ್ ಲ್ಲಿ ಮಾತನಾಡುತ್ತ, ಕರ್ನಾಟಕ ಗೃಹ‌ಮಂಡಳಿಯಲ್ಲಿ ಸಾಕಷ್ಟು ಅವ್ಯವಹಾರವಾಗಿದೆ.ಮಧ್ಯಮ ವರ್ಗ ಹಾಗೂ ಬಡಜನರಿಗೆ ಮನೆಗಳನ್ನು ನಿರ್ಮಿಸಿಕೊಡುವ ಕುರಿತಾಗಿ ಹಣ ತುಂಬಿದರೂ ಅದು ಬೇರೆಯವರ ಖಾತೆಗೆ ಹೋಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ.ಕೂಡಲೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಬೇಕೆಂದು ಆಗ್ರಹಿಸಿದರು.
ವಸತಿ ಸಚಿವ ಎಂ. ಕೃಷ್ಣಪ್ಪ ಮಾತನಾಡಿ, ಈಗಾಗಲೇ ಗೃಹ‌ ಮಂಡಳಿಯ ಅಧಿಕಾರಿಗಳಿಗೆ ಕೇಂದ್ರ ಸರಕಾರದ ಅನುಮತಿ ಇಲ್ಲದೆ ಮಂಜೂರು ಮಾಡಬಾರದೆಂದು ಸೂಚನೆ‌ ನೀಡಲಾಗಿದೆ.ಅಲ್ಲದೆ ಈ ಪ್ರಕರಣದಲ್ಲಿದ್ದ ಮೂವರು ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ ಎಂದು ಸದನಕ್ಕೆ ಉತ್ತರಿಸಿದರು.
loading...