ಗ್ರಾಮೀಣ ಕ್ರೀಡೆ ಕಣ್ಮರೆಯಾಗುತ್ತಿದೆ: ಲೋಕೇಶ

0
25
loading...

ಹೊನ್ನಾವರ: ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖಾ ಉ.ಕ. ಶಂಭುಲಿಂಗೇಶ್ವರ ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘ (ರಿ.) ಮೂಡ್ಕಣಿ ತಾಲೂಕು ಯುವ ಒಕ್ಕೂಟ ಹೊನ್ನಾವರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ ಶಂಭುಲಿಂಗೇಶ್ವರ ಕ್ರೀಡಾಂಗಣದಲ್ಲಿ ಗ್ರಾಮೀಣ ಕ್ರೀಡೋತ್ಸವ ಕಾರ್ಯಕ್ರಮ ನಡೆಯಿತ್ತು.
ತಾ.ಪಂ. ಸದಸ್ಯರಾದ ಲೋಕೇಶ ಡಿ. ನಾಯ್ಕ ಉದ್ಘಾಟಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಇಲಾಖೆಯು ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ನಿಟ್ಟಿನಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರೋತ್ಸಾಹ ನೀಡುತ್ತಿರುವುದು ತುಂಬಾ ಶ್ಲಾಘನೀಯ ಎಂದು ಹೇಳಿದರು. ಮುಖ್ಯ ಅತಿಥಿಯಾದ ಗ್ರಾ.ಪಂ. ಸದಸ್ಯರಾದ ಗಜಾನನ ಹೆಗಡೆ ಮಾತನಾಡಿ ಯುವಕ ಯುವತಿಯರು ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿ ಸಕ್ರೀಯರಾಗಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗ್ರಾ.ಪಂ. ಅಧ್ಯಕ್ಷರಾದ ರಾಜೇಶ್ವರಿ ನಾಯ್ಕ ವಹಿಸಿದರು.

ವೇದಿಕೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಸುರೇಶ ನಾಯ್ಕ, ಸುಬ್ಬಿ ಹಳ್ಳೇರ್, ಯುವಕ ಸಂಘದ ಅಧ್ಯಕ್ಷರಾದ ನಾಗೇಶ ನಾಯ್ಕ, ಕನ್ನಡ ಅಭಿಮಾನಿ ಬಳಗದ ಅಧ್ಯಕ್ಷರಾದ ಗಣೇಶ ನಾಯ್ಕ, ನಿರ್ಣಾಯಕರಾದ ದೈಹಿಕ ಶಿಕ್ಷಕರಾದ ಎಸ್.ಎಮ್. ಲೋಪಿಸ್, ಮುಕ್ತಾ ನಾಯ್ಕ ಉಪಸ್ಥಿತರಿದ್ದರು. ತಾರಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು, ರತ್ನಾ ನಾಯ್ಕ ವಂದಿಸಿದರು. ಯುವ ಒಕ್ಕೂಟದ ಅಧ್ಯಕ್ಷರಾದ ವಿನಾಯಕ ನಾಯ್ಕ ಮೂಡ್ಕಣಿ ಕಾರ್ಯಕ್ರಮ ಸಂಘಟಿಸಿದರು. ಸಭಾ ಕಾರ್ಯಕ್ರಮದ ನಂತರ ಯುವಕರಿಗೆ ಗೋಣಿಚೀಲ ಓಟ, ಕಪ್ಪೆ ಓಟ, ಗುಂಡು ಎಸೆತ, ಸಂಗೀತ ಕುರ್ಚಿ, ಹಗ್ಗ ಜಗ್ಗಾಟ ನಡೆಯಿತು. ಯುವತಿಯರಿಗಾಗಿ ಬಾಲ್ ಎಸೆತ, ಲಿಂಬು ಚಮಚ, ಸಂಗೀತ ಕುರ್ಚಿ ಒಂದು ಕಾಲಿನ ಓಟ, ಹಗ್ಗ ಜಗ್ಗಾಟ ನಡೆಯಿತು. ಸ್ಫರ್ಧೆಯಲ್ಲಿ ವಿಜೇತರಾದರಿಗೆ ನಗದು ಬಹುಮಾನ ನೀಡಲಾಯಿತು.

loading...