ಜನಪ್ರತಿನಿಧಿಗಳು ರೈತರ ಸಮಸ್ಯೆ ಕುರಿತು ಸದನದಲ್ಲಿ ಧನಿ ಎತ್ತಲಿ

ರೈತರ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಜನಪ್ರತಿನಿಧಿಗಳು ಧನಿ ಎತ್ತಲಿ ಎಂದು ಭಾರತೀಯ ಕೃಷಿಕ ಸಮಾಜದ ಸದಸ್ಯರು ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಮಾಡಿದರು.
ರೈತರ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಜನಪ್ರತಿನಿಧಿಗಳು ಧನಿ ಎತ್ತಲಿ ಎಂದು ಭಾರತೀಯ ಕೃಷಿಕ ಸಮಾಜದ ಸದಸ್ಯರು ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಮಾಡಿದರು.
loading...

ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು.
ಸಮಾಜಕ್ಕೆ ಅವಶ್ಯಕವಾದ ಆಹಾರ ಮತ್ತು ಆರೋಗ್ಯದ ಭದ್ರತೆ ರೈತರಿಂದ ಮಾತ್ರ ಸಾಧ್ಯವಾಗಿದ್ದು, ಆದರೆ ರೈತರಿಗೆ ಅನ್ಯಾಯವಾದಲ್ಲಿ ಯಾರೊಬ್ಬ ಜನಪ್ರತಿನಿಧಿಗಳು ಅವರ ಸಮಸ್ಯೆ ಬಗೆಹರಿಸಲು ಮನಸ್ಸು ಮಾಡುವುದಿಲ್ಲ ಎಂದು ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಡಾ. ಜಗದೀಶ ಹಾರುಗೊಪ್ಪ ಹೇಳಿದರು.
ಸೋಮವಾರ ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಯುವಕರು ಕೃಷಿಯಿಂದ ದೂರ ಸರಿಯುತ್ತಿದ್ದು, ಮುಂದಿನ ದಿನಗಳಲ್ಲಿ ಮಕ್ಕಳು ಅಕ್ಕಿ ರೇಶನ್‍ನಲ್ಲಿ ಹಾಲು ಪಾಕೇಟ್‍ನಲ್ಲಿ ನೋಡಿ ಕೃಷಿಯನ್ನು ಕೃಷಿ ಕಾಲೇಜುಗಳಲ್ಲಿ ಮಾತ್ರು ಕಲಿಯಬೇಕಾಗಿ ಬಂದರೂ ಅಚ್ಚರಿ ಪಡಬೇಕಿಲ್ಲ. ನಾಡಿನ ಮುಂದಿನ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೃಷಿಗೆ ಪೂರಕ ಯೋಜನೆಗಳನ್ನು ರೂಪಿಸಿ ಕೃಷಿಯಲ್ಲಿ ಜಾತಿ, ಭೇದ ಮಾಡದೆ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಇಲ್ಲವಾದಲ್ಲಿ ದೂರ ದೃಷ್ಟಿಯ ಕೊರತೆಯಿಂದಾಗಿ ಕೇಂದ್ರ ಸರಕಾರ ನೀಡುವ ಸಬ್ಸಿಡಿ ಅಕ್ಕಿ ಮತ್ತು ಗೋದಿಯನ್ನು ನೆಚ್ಚಬೇಕಾಗುತ್ತದೆ ಎಂದರು.
ನೀರಾ ಇಳಿಸಲು ತಾಂತ್ರಿಕತೆಯನ್ನು ಅಭಿವೃದ್ಧಿ ಪಡಿಸಿ ಸಂಗ್ರಹಣೆಗೆ ಟೆಟ್ರಾಪ್ಯಾಕ್ ನಂತರ ತಾಂತ್ರಿಕತೆಯನ್ನು ಮತ್ತು ಸಹಾಯಧನವನ್ನು ನೀಡಿ ನೀರಾವನ್ನು ರೈತರು ಯಾವುದೇ ಅನುಮತಿಯಿಲ್ಲದೇ ತಯಾರಿಸುವ ಹಕ್ಕನ್ನು ನೀಡಬೇಕು. ಕೃಷಿ ಇಲಾಖೆಯನ್ನು ರೈತರ ತಾಂತ್ರಿಕತೆಯ ಸಲಹಾ ಕೇಂದ್ರಗಳಾಗಿ ಮಾಡಿ, ವ್ಯಾಪಾರ ಕೇಂದ್ರಗಳಾಗಿ ಅಲ್ಲ. ಕೃಷಿ ಇಲಾಖೆಯಿಂದ ಕೃಷಿ ಮಾಹಿಥಿ ರೈತರ ಮೊಬೈಲ್‍ಗಳಿಗೆ ನಿರಂತರ ತಲುಪುವಂತಾಗಲಿ. ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸಾವಯವ ಕೃಷಿ ತೋಟ ವೀಕ್ಷಣೆ ಪ್ರವಾಸ ಏರ್ಪಡಿಸಿ, ರಾಜ್ಯಕ್ಕೊಂದು ಭೂ ಬಳಕೆ ನೀತಿಯನ್ನು ರೂಪಿಸಿ ಫಲವತ್ತಾದ ಜಮೀನನ್ನು ರಕ್ಷಿಸಿ, ಕೈಗಾರಿಕತೆಗೆ ಒತ್ತು ನೀಡುವ ಬದಲು ರೈತರ ಜಮೀನು ಪರಿವರ್ತನೆಗೆ ಮತ್ತು ರಸ್ತೆ ನಿರ್ಮಾಣಕ್ಕೆ ಶಾಸನ ಮತ್ತು ಯೋಜನೆ ರೂಪಿಸಿ ಎಂದು ಒತ್ತಾಯಿಸಿದರು.
ಸರಕಾರಗಳು ಬರುತ್ತವೆ ಹೋಗುತ್ತವೆ. ಆದರೆ ಇಡೀ ಸಮುದಾಯ ಆ ಮೂಲಕ ಸಮಗ್ರ ನಾಡಿಗೆ ಒಳ್ಳೆಯದಾಗಿ ಸುಸ್ಥಿರ ಬೆಳವಣಿಗೆಯ ಮೂಲಕ ಸಮೃದ್ಧ ರಾಜ್ಯ ನಿರ್ಮಿಸುವ ಸಮಗ್ರಕೃಷಿ ನೀತಿ ಮತ್ತು ಕೃಷಿ ಪೂರಕ ಬಜೇಟ್ ಮಂಡಿಸಿ ಜನಮಾನಸಲ್ಲಿ ಶಾಶ್ವತ ನೆಲೆಯೂರಲು ಸಮಗ್ರ ಕೃಷಿ ಭಾಗ್ಯ ನೀಡಬೇಕು ಎಂದು ಹಕ್ಕೊತ್ತಾಯ ನಡೆಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಾಂತೇಶ ಕಮತ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಈರಪ್ಪ ಹುಬ್ಬಳ್ಳಿ, ಮಲ್ಲಿಕಾರ್ಜುನ ನಿರಡಿ, ರವಿ ಹಾಲನ್ನವರ, ಡಿ.ಆರ್. ಪಾಟೀಲ, ವಿಕ್ರಂ ಹಲಗಿಮರಡಿ ಇತರರು ಇದ್ದರು.

 

loading...