ಜಿಲ್ಲಾ ವೀರಶೈವ ಲಿಂಗಾಯತ ಸ್ವಾಮಿಜೀಗಳ ಒಕ್ಕೂಟ ರಚನೆಗೆ ನಿರ್ಧಾರ

0
22
loading...

ಗದಗ, ನ. 23 : ನಗರದಲ್ಲಿ ಡಿಸೆಂಬರ 24 ರಂದು ವೀರಶೈವ ಲಿಂಗಾಯತ ಧರ್ಮ ಜಾಗೃತಿ ಸಮಾವೇಶವನ್ನು ಅತ್ಯಂತ ಯಶಸ್ವಿಯಾಗಿ ಜರುಗಿಸಲು ಎಲ್ಲ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ. ಅದಕ್ಕೆ ಪೂರಕವಾಗಿ ಜಿಲ್ಲೆಯ ಎಲ್ಲ ವೀರಶೈವ ಲಿಂಗಾಯತ ಸ್ವಾಮಿಜೀಗಳ ಒಕ್ಕೂಟವನ್ನು ರಚನೆ ಮಾಡಿಕೊಂಡು ಸಾಮೂಹಿಕವಾಗಿ ಜನಜಾಗೃತಿ ಮಾಡುತ್ತ ಸಮಾಜದ ಏಕತೆಗೆ ಶ್ರಮಿಸಲು ನಿರ್ಧರಿಸಲಾಯಿತು. ಹಾಲಕೇರಿ ಮಠದಲ್ಲಿ ಕರೆದ ವೀರಶೈವ ಲಿಂಗಾಯತ ಧರ್ಮ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ನೆರೆದಿರುವ ಸ್ವಾಮೀಜಿಗಳ ಹಾಗೂ ಭಕ್ತರ ಉಪಸ್ಥಿತಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಸಮಾಜದ ಏಕತೆಗೆ 11 ದಿನಗಳ ಪಾದಯಾತ್ರೆ ಮಾಡಿ ಲಿಂಗಧಾರಣೆ ಮತ್ತು ಇಚ್ಛಿತರಿಗೆ ದೀಕ್ಷೆಯನ್ನು ಕೊಡುತ್ತ ಸರ್ವರಿಗೂ ವಿಭೂತಿ ಹಚ್ಚಿ ಸಮಾವೇಶಕ್ಕೆ ಆಹ್ವಾನ ಕೊಡಲು ತೀರ್ಮಾನಿಸಲಾಯಿತು. ಪ್ರತಿದಿನ ಸಾಯಂಕಾಲ 5 ರಿಂದ 8 ರವರೆಗೆ ಶ್ರೀ ಸಿದ್ಧಾಂತಶಿಖಾಮಣಿ ಶ್ರೀಶೈಲ ಜಗದ್ಗುರುಗಳಿಂದ ಮತ್ತು ವಚನ ಸಾಹಿತ್ಯ ಪ್ರವಚನವನ್ನು ಹೊಸಳ್ಳಿಯ ಜಗದ್ಗುರುಗಳಿಂದ ಹಾಲಕೇರಿಮಠದ ಆವರಣದ ಮೈದಾನದಲ್ಲಿ ಶಿಸ್ತುಬದ್ಧವಾಗಿ ಏರ್ಪಡಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.   ಹೊಸಳ್ಳಿ ಬೂದೀಶ್ವರ ಸಂಸ್ಥಾನಮಠದ ಜಗದ್ಗುರು ಅಭಿನವ ಬೂದೀಶ್ವರ ಸ್ವಾಮೀಗಳು ನೇತೃತ್ವ ವಹಿಸಿದ್ದರು. ಮುಕ್ತಿಮಂದಿರದ ಷ. ಬ್ರ. ವೀರಮುಕ್ತಿಮು£ ಶಿವಾಚಾರ್ಯ ಸ್ವಾಮಿಗಳು ನರೇಗಲ್ಲ ಹಿರೇಮಠದ ಷ. ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಬ£್ನಕೊಪ್ಪದ ಷ. ಬ್ರ. ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಗಳು, ಹಿರೇವಡ್ಡಟ್ಟಿಯ ಷ.ಬ್ರ. ವೀರೇಶ್ವರ ಶಿವಾಚಾರ್ಯ ಸ್ವಾಮಿಗಳು, ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಹಾಲಸ್ವಾಮಿಗಳು ಡೋಣಿ, ಹಳ್ಳಿಕೇರಿ, ಪೂಜ್ಯ ಫಕ್ಕೀರೇಶ್ವರ ಮಹಾಸ್ವಾಮಿಗಳು ಸೊರಟೂರ ಹಿರೇಮಠ ಮಲ್ಲಸಮುದ್ರಗಿರಿ ಉಪಸ್ಥಿತರಿದ್ದರು.  ದಿಂಗಾಲೇಶ್ವರ ಸ್ವಾಮಿಗಳು ಬಾಲೇಹೊಸೂರ ಇವರು ಸಭೆಯನ್ನು ಉದ್ದೇಶಿಸಿ ಪಾದಯಾತ್ರೆ ಲಿಂಗಧಾರಣೆ ಪ್ರವಚನಗಳ ಮತ್ತು ಸಮಾವೇಶದ ಯಶಸ್ವಿ ಕುರಿತು ಅನೇಕ ಮಾರ್ಗದರ್ಶನದ ಮಾತುಗಳನ್ನಾಡಿದರು. ನೆರೆದಿರುವ ಭಕ್ತರ ಪರವಾಗಿ ಡಾ. ಶೇಖರ ಸಜ್ಜನರ, ಹಿರಿಯರಾದ ಯಳಮಲಿ, ಎಚ್. ವ್ಹಿ. ಶಾನಭೋಗ, ವಿ. ಕೆ. ಗುರುಮಠ, ಮಂಜುನಾಥ ಬೇಲೇರಿ, ವಿಶ್ವನಾಥ ಮಾಳೆಕೊಪ್ಪಮಠ, ಬ್ಯಾಹಟ್ಟಿ, ಶ್ರೀಮತಿ ಸಂಗಮ್ಮ ಹಿರೇಮಠ ತಮ್ಮ ಸಲಹೆಗಳನ್ನು ಕೊಟ್ಟರು.  ಸಭೆಯಲ್ಲಿ ಶಿವಾನಂದಯ್ಯ ಹಿರೇಮಠ, ಪ್ರಕಾಶ ಬೇಲಿ, ವಿಜಯಕುಮಾರ ಹಿರೇಮಠ, ಮಲ್ಲಿಕಾರ್ಜುನ ಶಿಗ್ಲಿ, ಕೆ. ವ್ಹಿ. ಪಾಟೀಲ, ಎಂ. ಎಂ. ಹಿರೇಮಠ, ಸತೀಶ ಮುದಗಲ್ಲ, ರಾಜು ಖಾನಪ್ಪನವರ, ಡಾ. ಎಸ್.ಎಂ.ಹಿರೇಮಠ, ಎಸ್.ಜಿ.ಗೋಧಿ, ಗಡಿಗೇರ ಸರ್, ರೇಣುಕಮಠ, ಕಮತರ ಸರ ಸೇರಿದಂತೆ ಅನೇಕ ಮಹಿಳೆಯರು ಭಾಗವಹಿಸಿದ್ದರು.  ಬಸಣ್ಣ ಮಲ್ಲಾಡದ ಸ್ವಾಗತಿಸಿದರು. ಚಂದ್ರು ಬಾಳಿಹಳ್ಳಿಮಠ ನಿರೂಪಿಸಿದರು. ಅನಿಲ ಅಬ್ಬಿಗೇರಿ ವಂದಿಸಿದರು.

loading...