ಜೆಡಿಎಸ್ ಸರಕಾರದಿಂದ ಜನರು ನೆಮ್ಮದಿಯಿಂದ ಬದಕಲು ಸಾಧ್ಯ: ರಂಗನಾಥ

0
21
loading...

ಕೊಪ್ಪಳ : ರಾಜ್ಯದಲ್ಲಿ ಆಡಳಿತ ನೆಡಸುತ್ತಿರುವ ಕಾಂಗ್ರೇಸ್ ಸರಕಾರ ಮತ್ತು ಕೇಂದ್ರದಲ್ಲಿ ಆಡಳಿತ ನೆಡಸುತ್ತಿರು ಬಿಜೆಪಿ ಸರಕಾರದಿಂದ ಜನರು ಬೇಸತ್ತಿದ್ದು, ಆಡಳಿತ ನೆಡಸುತ್ತಿರುವ ಸರಕಾರಗಳು ಜನವಿರೋಧಿ ಸರಕಾರವಾಗಿದ್ದು ಇದರಿಂದ ಮುಕ್ತಿ ಹೊಂದಬೇಕಾದರೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದರೆ ರಾಜ್ಯದಲ್ಲಿ ನೆಮ್ಮಂದಿಯಿಂದ ಬದಕಲು ಸಾಧ್ಯ ಎಂದು ಪಕ್ಷದ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ. ರಂಗನಾಥ ಅವರು ಹೇಳಿದರು.
ಅವರು ನಗರದ ಜೆಡಿಎಸ್ ಕಾರ್ಯಲಯಲ್ಲಿ ಶುಕ್ರವಾರ ಕಾನೂನು ಘಟಕದ ಪಧಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ರಾಜ್ಯದಲ್ಲಿ ಕೋಮುಧಳ್ಳುರಿಯಿಂದ ಮತ್ತು ರಾಜ್ಯ ಸರಕಾರದ ದುರಾಡಿಳಿತದಿಂದ ಜನರು ತತ್ತರಿಸಿದ್ದು ಮುಂದಿನ 2018 ಕ್ಕೆ ಕುಮಾರಣ್ಣ ಸರಕಾರ ಅಸ್ತಿತ್ವಕ್ಕೆ ಬರಲು ಎಲ್ಲಾ ಜೆಡಿಎಸ್ ಕಾರ್ಯಕರ್ತರು ಪಕ್ಷದ ಜನಪರ ಯೋಜನೆಗಳನ್ನು ಮತ್ತು ಈ ಹಿಂದೆ ಮಾಡಿದ್ದ ಅಭಿವೃದ್ದಿ ಕೆಲಸಗಳನ್ನು ಅವರಿಗೆ ನೆನಪು ಮಾಡಿಕೊಳ್ಳುವದರ ಮೂಲಕ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲು ಎಲ್ಲರೂ ಶ್ರಮಿಸಬೇಕು ಎಂದರು.
ಜಿಲ್ಲಾ ಅಧ್ಯಕ್ಷ ಪ್ರದೀಪಗೌಡ ಮಾಲಿಪಾಟೀಲ ಮಾತನಾಡಿ ಪಕ್ಷಕ್ಕೆ ಕಾನೂನು ಘಟಕ ಅವಶ್ಯವಿದ್ದು ಜಿಲ್ಲೆಯ ಎಲ್ಲಾ ಕಾನೂನು ಸಂಘಕ್ಕೆ ಮನವಿ ಮಾಡಿಕೊಳ್ಳುವದರ ಮೂಲಕ ವಕೀಲರು ನಮ್ಮ ಪಕ್ಷಕ್ಕೆ ಬೆಂಬಲಿಸಲು ಮನವಿ ಮಾಡಿಕೊಳ್ಳಲಾಗುವದರ ಮುಖಾಂತರ ಜೆಡಿಎಸ್ ಕಾನೂನು ಘಟಕವನ್ನು ಜಿಲ್ಲೆಯಲ್ಲಿ ಬಲಿಷ್ಠ ಮಾಡಲಾಗುವದು ಎಂದರು.
ಈ ಸಧರ್ಭದಲ್ಲಿ ಕಾನೂನು ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವರಾಜ ಪಾಟೀಲ. ಪ್ರದೀಪಕುಮಾರ, ಸಂತೋಷ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಮ್. ಸೈಯದ್, ಜಿಲ್ಲಾ ಕಾರ್ಯಧ್ಯಕ್ಷ ವಿರೇಶ ಮಾಹಾಂತಯ್ಯನಮಠ, ರಾಜ್ಯ ಜಂಟಿ ಕಾರ್ಯದರ್ಶಿ ವಿರುಪಾಕ್ಷಗೌಡ ಹೇರೂರ. ಯುವ ಜಿಲ್ಲಾಧ್ಯಕ್ಷ ಕೆ.ಎಸ್.ಕೊಡತಗೆರಿ, ಜಿಲ್ಲಾ ವಕ್ತಾರ ಮೌನೇಶ ವಡ್ಡಟ್ಟಿ, ರಾಘವೇಂದ್ರ ಗಂಗಾವತಿ, ವಕೀಲರಾಧ ಇಸ್ಮಾಯಿಲ್ ಗೇಟಿನ್ , ಸಂತೋಷ ಕವಲೂರ. ಶೀವು ಕುರಿ, ಶರಣಗೌಡ ಗಂಗಾವತಿ, ಆರ್.ಪಿ ರೆಡ್ಡಿ. ಮತ್ತು ಪಕ್ಷದ ಮುಖಂಡರಾದ ಎಂ. ಎನ್, ಆಲಮ್, ಶರಣಪ್ಪ ಕರಂಡಿ, ಸೋಮಶೇಖರ ಬಾದರಬಂಡಿ, ಅಯ್ಯೂಬ ಅಡ್ಡೆವಾಲೆ, ಗವಿಶಿದ್ದಪ್ಪ ಹಂಡಿ, ಶ್ರೀಮತಿ ಲತಾ ಅಳವಂಡಿಕರ್, ಶಿದ್ದಪ್ಪ , ಸಮದ್, ನಾಗರಾಜ ಕುಂಬಾರ್. ಕೆ. ಬಾಲಪ್ಪ, ಬಸೀರ್, ಸೇರಿದಂತೆ ಉಪಸ್ಥಿತರಿದ್ದರು.

loading...