ಜ್ಞಾನ ಕ್ಷಿತಿಜ ವಿಸ್ತಾರಕ್ಕೆ ವಿಜ್ಞಾನ ವಸ್ತುಪ್ರದರ್ಶನ ಸಹಕಾರಿ

0
20
loading...

ಗದಗ: ವಿಜ್ಞಾನದ ಬಗೆಗಿನ ಜ್ಞಾನ ಕ್ಷಿತಿಜವನ್ನು ವಿಸ್ತಾರಗೊಳಿಸುವುದಕ್ಕೆ ವಿದ್ಯಾರ್ಥಿಗಳು ಸ್ವಂತ ತಯಾರಿಸುವ ವೈಜ್ಞಾ£ಕ ಪ್ರಯೋಗಗಳ  ವಸ್ತು ಪ್ರದರ್ಶನಗಳು ಬಹಳಷ್ಟು ಸಹಕಾರಿ  ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ನುಡಿದರು. ನಗರದ ವಿ.ಡಿ.ಎಸ್. ಬಾಲಕಿಯರ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ  ನಡೆದ “ ಪ್ರೌಢಶಾಲಾ ವಿದ್ಯಾರ್ಥಿಗಳ ಹಾಗೂ ವಿಜ್ಞಾನ ಶಿಕ್ಷಕರ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ “ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ಮತ್ತು ಯೋಗಕ್ಷೇಮ, ಸಂಪನ್ಮೂಲ ನಿರ್ವಹಣೆ, ಆಹಾರ ಭದ್ರತೆ, ತ್ಯಾಜ್ಯ ನಿರ್ವಹಣೆ ಜಲ ಸಂರಕ್ಷಣೆ, ಡಿಜಿಟಲ್  ಮತ್ತು ತಂತ್ರಜ್ಞಾನ ಪರಿಹಾರಗಳು ಕುರಿತು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳ  ಬಹಳಷ್ಟು  ಆಲೋಚನೆಯಿಂದ ತಯಾರಿಸಿದ   ಪ್ರಯೋಗಗಳು  ಎಲ್ಲರಿಗೂ ಅನುಕೂಲವಾಗುವಂತಿರಬೇಕು. ತಂತ್ರಜ್ಞಾನದ ಪ್ರಯೋಗಗಳು ವಾಸ್ತವಿಕವಾಗಿ ಬಡವರ ಮನೆ ಬಾಗಿಲಿಗೂ  ಕೂಡ ಒದಗಿ ಬರುವಂತಾಗಿರಬೇಕು. ಗದಗನಲ್ಲಿ ಉಚಿತ ವೈಫೈ ವ್ಯವಸ್ಥೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿರುವುದು ಜನರಿಗೆ ತಂತ್ರಜ್ಞಾನ, ವಿಜ್ಞಾನ ಮುಟ್ಟಿಸುವುದಕ್ಕೆ ಒಂದು ಉತ್ತಮ ಮಾದರಿಯಾಗಿದೆ ಎಂದರು. ಜನಪ್ರತಿನಿಧಿಗಳು ಅಧಿಕಾರಿಗಳು ಭಾಗವಹಿಸಿದ್ದರು. ವಿದ್ಯಾದಾನ ಸಮಿತಿ ಕಾರ್ಯದರ್ಶಿಗಳಾದ ಶ್ರೀ ಶ್ರೀ£ವಾಸ ಹುಯಿಲಗೋಳ ಸ್ವಾಗತಿಸಿದರು. ದತ್ತ ಪ್ರಸನ್ನ ಪಾಟೀಲ ನಿರೂಪಿಸಿದರು.

loading...