ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲು ಅನುಮತಿ ನೀಡಬಾರದು: ಆಗ್ರಹ

0
36
loading...

ಟಿಪ್ಪು ಸುಲ್ತಾನ್ ಜಯಂತಿ ಆಚರಿಸದಿರಲು ಶ್ರೀರಾಮ ಸೇನೆ

ಖಾನಾಪುರ: ತಾಲೂಕಿನಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲು ಅನುಮತಿ ನೀಡಬಾರದು. ಶಾಲಾ ಕಾಲೇಜುಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಜಯಂತಿ ಆಚರಣೆಯನ್ನು ಕೈಬಿಡಬೇಕು ಎಂದು ಶ್ರೀರಾಮ ಸೇನೆ ತಾಲೂಕು ಘಟಕದ ಮಂಗಳವಾರ ಪಟ್ಟಣದ ಮಿನಿವಿಧಾನಸೌಧದಲ್ಲಿ ತಹಸೀಲ್ದಾರರನ್ನು ಆಗ್ರಹಿಸಿತು.
ಕೆಲ ಸಂಘಟನೆಗಳು ಟಿಪ್ಪುವನ್ನು ದೇಶಪ್ರೇಮಿ ಎಂದು ಬಿಂಬಿಸುತ್ತಿದ್ದು, ವಾಸ್ತವದಲ್ಲಿ ಟಿಪ್ಪು ರಾಷ್ಟ್ರಮಟ್ಟದ ವ್ಯಕ್ತಿಯಲ್ಲ. ಹೀಗಾಗಿ ಆತನ ಜಯಂತಿ ಆಚರಣೆಗೆ ತಮ್ಮ ವಿರೋಧವಿದೆ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪಂಡಿತ ಓಗಲೆ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಕಾರ್ಯಕರ್ತರು ತಹಸೀಲ್ದಾರರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ

loading...