ತಂತ್ರಜ್ಞಾನ ಸರ್ವ ರಂಗಗಳಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ: ಶಾಸಕ ಪಟ್ಟಣ

0
22
loading...

ರಾಮದುರ್ಗ: ಕರ್ನಾಟಕ ಒಂದು ಕಲೆ, ಸಾಹಿತ್ಯ, ತಂತ್ರಜ್ಞಾನ ಸರ್ವ ರಂಗಗಳಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಪ್ರತಿವರ್ಷ ಇದೇ ರೀತಿ ಅದ್ದೂರಿಯಾಗಿ ಭುವನೇಶ್ವರಿ ಜಾತ್ರೆ ನಡೆಯಲಿ. ಆದ್ದರಿಂದ ಕನ್ನಡ ನಾಡು ನುಡಿ ರಕ್ಷಣೆಗಾಗಿ ಎಲ್ಲರೂ ಶ್ರಮಿಸಬೇಕೆಂದು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ರಾಜ್ಯಾಧ್ಯಕ್ಷ ರಾಜು ಟೋಪನ್ನವರ ಅವರ ಕರ್ನಾಟಕ ನವ ನಿರ್ಮಾಣ ಪಡೆ ನಗರದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಕನ್ನಡದ ಕಹಳೆ ಮೊಳಗಿಸಿದರು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ಸರ್ವ ಸಮನ್ವಯದ ಬೀಡು, ಶಾಂತಿಯ ನಲೆ ಬೀಡು ನಗರದಲ್ಲಿ ಅತ್ಯಂತ ವಿಜ್ರಂಭಣೆಯಿಂದ ಸಾವಿರಾರು ಕನ್ನಡ ಪರ ಸಂಘಟನೆ 62 ನೇಯ ರಾಜ್ಯೋತ್ಸೋವ ಆಚರಿಸುತ್ತಿರುವುದು ತುಂಬಾ ಸಂತೋಷ ಕನ್ನಡ ನೆಲ ಜಲ ರಕ್ಷಣೆಗಾಗಿ ಎಲ್ಲರೂ ಒಂದಾಗಿ ಕೆಲಸ ಮಾಡೋಣ ಎಂದು ಹೇಳಿದರು
ಡಾಲ್ಬಿ ಸೌಂಡ: ನಗರದಲ್ಲಿ ಪ್ರಥಮ ಬಾರಿಗೆ ಡಾಲ್ಬಿ ಸೌಂಡನ್ನು ಕ್ರೇನ್‌ ಮುಖಾಂತರ ಅಳವಡಿಸಲಾಗಿತ್ತು ಇದಕ್ಕೆ ಸುಮಾರು 1.50 ಲಕ್ಷ ದಲ್ಲಿ ಸೌಂಡಗೆ ನೀಡಲಾಗಿತ್ತು ಇದರಿಂದ ರಾಮದುರ್ಗ ನಗರದಲ್ಲಿ ಕನ್ನಡದ ಕಹಳೆ ಕೆಳಲು ಮೈ ಜುಮ್ಮೆನಿಸುತ್ತಿತ್ತು.
ಕುಣಿದು ಕುಪ್ಪಳಿಸಿದ ಹುಡಗರು: ಸೌಂಡ ಎಲ್ಲಿರುತ್ತದೆ ಅಲ್ಲಿ ಹುಡುಗರ ಕುಣಿತ ಇದ್ದೆ ಇರುತ್ತದೆ ಎಂಬುದಕ್ಕೆ ನಗರದಲ್ಲಿ ಕನ್ನಡ ರಾಜ್ಯೋತ್ಸವದಂದು ಕನ್ನಡ ನಾಡಿನ ಹಾಡಿಗೆ ಕುಣಿದು ಕುಪ್ಪಳಿಸಿದರು ದೃಶ್ಯ ಕನ್ಮಣ ಸೆಳೆಯುವಂತೆ ಮಾಡಿತು
ಬಾಬು ಹುದ್ದಾರ, ದಾವಲಬಾಯಿ ಪೈಲವಾನ, ರಮೇಶ ಬಂಡಿವಡ್ಡರ, ಪ್ರಕಾಶ ಬಜಂತ್ರಿ, ಕೃಣ್ಣಾ ರಾಠೋಡ, ಸಮೀರ ಅಪ್ಟೆ, ಸಾಬಿರ ಅತ್ತಾರ, ರಾಜಶೇಖರ ರಾಯಬಾಗ, ಅಭಿ ಮುನವಳ್ಳಿ ಸುರೇಶ ಗಿಂಜಾಳೆ, ಮಂಜು ಲಮಾಣಿ, ಮಹಮ್ಮದ ಬೇಗ, ತಾಜು ಹುದ್ದಾರ, ಸ್ಭೆರಿದಂತೆ ಕರ್ನಾಟಕ ನವ ನಿರ್ಮಾಣ ಪಡೆಯ ಸಾವಿರಾರು ಕನ್ನಡಾಭಿಮಾನಿಗಳು ಮುಂತಾದವರು ಭಾಗವಹಿಸಿದ್ದರು.

loading...