ತಮಿಳುನಾಡಿನ ಆರ್ ಕೆ ನಗರ ಸೇರಿ 5 ರಾಜ್ಯಗಳ ವಿಧಾನಸಭೆ ಉಪಚುನಾವಣೆ ಡಿಸೆಂಬರ್ 21ಕ್ಕೆ

0
12
loading...

ನವದೆಹಲಿ: ತಮಿಳುನಾಡಿನ ಆರ್.ಕೆ ನಗರ ಸೇರಿದಂತೆ 5 ರಾಜ್ಯಗಳ ವಿಧಾನಸಭೆಗೆ ನಡೆಯಬೇಕಿರುವ ಉಪಚುನಾವಣೆ ಡಿ.21  ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಅರುಣಾಚಲ ಪ್ರದೇಶದ ಪಾಕೆ-ಕಸಾಂಗ್, ಲಿಕಾಬಲಿ, ಉತ್ತರ ಪ್ರದೇಶದ ಸಿಕಂದ್ರಾ, ಪಶ್ಚಿಮ ಬಂಗಾಳದ ಸಬಾಂಗ್ ಹಾಗೂ ತಮಿಳುನಾಡಿನ ಆರ್. ಕೆ ನಗರ ವಿಧಾನಸಭ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಡಿ.4 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಡಿ.5 ರಿಂದ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಡಿ.7 ಕೊನೆಯ ದಿನವಾಗಿದೆ.

loading...