ದಾಂಪತ್ಯಕ್ಕೆ ಕಾಲಿಟ್ಟ ಜಹೀರ್-ಸಾಗರಿಕಾ

0
14
loading...

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಜಹೀರ್ ಖಾನ ಗೃಹಸ್ಥಾಶ್ರಮಕ್ಕೆ ಅಧಿಕೃತವಾಗಿ ಇಂದು ಕಾಲಿರಿಸಿದ್ದಾರೆ. ಮಾಜಿ ವೇಗಿ ಜಹೀರ್ ಖಾನ್ ಗುರುವಾರ ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಜತೆ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದಾರೆ.

ನೋಂದಣಿ ಕಚೇರಿಯಲ್ಲಿ ಸರಳವಾಗಿ ಮದುವೆಯಾಗಿರುವ ಜಹೀರ್ ಖಾನ್ ಮತ್ತು ಸಾರಗಿಕಾ ಘಾಟ್ಗೆ ನ.27 ರಂದು ಆಪ್ತ ಸ್ನೇಹಿತರು, ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರಿಗಾಗಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಜಹೀರ್ ಖಾನ್ ಅವರ ಪ್ರೊಸ್ಪೋಟ್ರ್ಸ್ ಫಿಟ್ನೆಸ್ ಸ್ಟುಡಿಯೋದ ಬುಸಿನೆಸ್ ಮುಖ್ಯಸ್ಥೆ ಅಂಜನಾ ಶರ್ಮಾ  ನವ  ದಂಪತಿಯ ಫೋಟೊವನ್ನು ಶೇರ್ ಮಾಡಿದ್ದಾರೆ. ಶಾರುಖ್ ಖಾನ್ ನಟನೆಯ ‘ಚೆಕ್ ದೆ ಇಂಡಿಯಾ’ ಚಿತ್ರದಲ್ಲಿ ಸಾಗರಿಕಾ ಘಾಟ್ಗೆ ಹಾಕಿ ಆಟಗಾರ್ತಿ ಪಾತ್ರದಲ್ಲಿ ನಟಿಸಿ ಮಿಂಚಿದ್ದರು. ಮದುವೆ ವೇಳೆ ಸಾಗರಿಕಾ  ಸಾಂಪ್ರದಾಯಿಕ  ಸೀರೆ ತೊಟ್ಟಿದ್ದರೆ, ಜಹೀರ್ ಖುರ್ತಾ ಧರಿಸಿದ್ದರು. ಈ ವರ್ಷದ ಎಪ್ರಿಲ್‍ನಲ್ಲಿ ಜಹೀರ್-ಸಾಗರಿಕಾ ಜೋಡಿಯ ನಿಶ್ಚಿತಾರ್ಥ  ನೆರವೇರಿತ್ತು. ಭಾರತದ  ಇನ್ನೋರ್ವ  ವೇಗದ  ಬೌಲರ್ ಆಗಿರುವ  ಭುವನೇಶ್ವರ್ ಕುಮಾರ್  ಅವರ  ಮದುವೆ ಕೂಡಾ ಇಂದೇ ನಡೆಯಲಿದೆ. ಮೀರತ್‍ನಲ್ಲಿ  ನಡೆಯಲಿರುವ  ಮದುವೆ  ಸಮಾರಂಭದಲ್ಲಿ  ತಮ್ಮ ಪ್ರಿಯತಮೆ ನುಪುರ್ ನಗರ್ ಅವರನ್ನು ಭುವಿ ವರಿಸಲಿದ್ದಾರೆ.

loading...