ದಿ.11 ರಂದು ಎಬಿವಿಪಿಯಿಂದ ಕೇರಳಚಲೋ: ಬಿದರಿ

0
13
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:4 ಕೆರಳದಲ್ಲಿನ ಆಡಳಿತರೂಢ ಕಮ್ಯುನಿಷ್ಟ ಕಾರ್ಯಕರ್ತರ ಹಿಂಸಾಚಾರ ಖಂಡಿಸಿ ಬರುವ ದಿ. 11 ರಂದು ಚಲೋ ಕೆರಳಗೆ ಕರೆ ನೀಡಲಾಗಿದೆ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ವಿನಯ ಬಿದರಿ ಹೇಳಿದರು.
ಅವರು ಶನಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತಾಡುತ್ತ, ಕೇರಳ ರಾಜ್ಯದ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಿಂದ ಸತತವಾಗಿ ಎಬಿವಿಪಿ ಮತ್ತು ಸಂಘದ ಕಾರ್ಯಕರ್ತರ ಮೇಲಾಗುತ್ತಿರುವ ಹಿಂಸೆಯ ವಿರುದ್ಧವಾಗಿ ಎಬಿವಿಪಿ ದಿ.11 ರಂದು ಕೇರಳದ ತಿರುವನಂತಪುರಂದಲ್ಲಿ 50 ಸಾವಿರ ಕಾರ್ಯಕರ್ತರೊಂದಿಗೆ ಬೃಹತ್ತ ಮಹಾ ರ್ಯಾಲಿ ಹಮ್ಮಿಕೊಳ್ಳಲು ಚಲೋ‌ ಕೇರಳಗೆ ಕರೆ ನೀಡಲಾಗಿದೆ ಎಂದರು.
ಕೇರಳದಲ್ಲಿ ಅಧಿಕಾರ ನಡೆಸುತ್ತಿರುವ ಕಮ್ಯುನಿಷ್ಟ ಹಿಂಸಾಚಾರವು ಅತ್ಯಂತ ಬರ್ಬರತೆಯ ಹಂತವನ್ನು ತಲುಪಿದ್ದು, ಈ ಕೆಂಪು ಭಯೋತ್ಪಾದನೆಯ ವಿರುದ್ಧ ದೇಶಾದ್ಯಂತ ರ್ಯಾಲಿಯನ್ನು‌ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂದೀಪ ನಾಯರ, ಶಿವಾನಂದ ಸೈದಾಪುರ‌ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...