ದೇಸಾಯಿ ಸದಸ್ಯತ್ವ ರದ್ಧತಿಗೆ ನಡಹಳ್ಳಿ ಕೈವಾಡ: ಬಿಜೆಪಿ ಆರೋಪ

0
23
loading...

ಕನ್ನಡಮ್ಮ ಸುದ್ದಿ-ಮುದ್ದೇಬಿಹಾಳ: ಜಿಪಂ ಉಪಾಧ್ಯಕ್ಷರಾಗಿದ್ದ ಪ್ರಭುಗೌಡ ದೇಸಾಯಿ ಅವರ ಜಿಪಂ ಸದಸ್ಯತ್ವ ರದ್ಧತಿಯ ಹಿಂದೆ ದೇವರ ಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಕೈವಾಡವಿದ್ದು ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ದೇಸಾಯಿ ಅವರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಪ್ರಭುಗೌಡ ದೇಸಾಯಿ ಅಭಿಮಾನಿಗಳು ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಬನಶಂಕರಿ ದೇವಸ್ಥಾನದಿಂದ ಪ್ರತಿಭಟನಾ ರ್ಯಾಲಿ ನಡೆಸಿದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶಾಸಕ ನಡಹಳ್ಳಿ ಹಾಗೂ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಬಸವೇಶ್ವರ ವೃತ್ತದಲ್ಲಿ ಶಾಸಕ ನಡಹಳ್ಳಿ ಅವರ ಭಾವಚಿತ್ರವಿದ್ದ ಬ್ಯಾನರ್‍ಗೆ ಚಪ್ಪಲಿ ಹಾರ ಹಾಕಿ ಬಳಿಕ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಿಪಂ ಸದಸ್ಯೆ ಪದ್ಮಾವತಿ ವಾಲೀಕಾರ,ಪ್ರಭು ಕಡಿ,ತಾಲೂಕಾಧ್ಯಕ್ಷ ಎಂ.ಡಿ.ಕುಂಬಾರ,ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ,ವಿಶ್ವನಾಥ ಬಬಲೇಶ್ವರ,ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ,ಅಪ್ಪುಗೌಡ ಐಹೊಳ್ಳಿ, ರಾಜಶೇಖರ ಹೊಳಿ, ಕಾಶೀಬಾಯಿ ರಾಂಪೂರ, ಕಸ್ತೂರಿ ಗುಳಬಾಳ, ಮಹಿಳಾ ಘಟಕದ ಅಧ್ಯಕ್ಷೆ ವಾಣಿ ಗೌಡರ, ರೂಪಾ ದೇಸಾಯಿ, ಸಿದ್ದು ಹೆಬ್ಬಾಳ, ಎಸ್.ಟಿ.ಗೌಡರ, ಎಂ.ಎಸ್.ಕೊಪ್ಪ, ಜಗದೀಶ ಪಂಪಣ್ಣವರ, ಇಕ್ಬಾಲ ಮೂಲಿಮನಿ, ಶೇಖರ ಢವಳಗಿ, ರಾಜು ಬಳ್ಳೊಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.

loading...