ದೈಹಿಕ ಸಧೃಡತೆಗಾಗಿ ಕ್ರೀಡಾಸಕ್ತಿ ಬೆಳಿಸಿಕೊಳ್ಳಿ : ಶಾಸಕ ಹಿಟ್ನಾಳ

0
16
loading...

ಕೊಪ್ಪಳ : ಪ್ರತಿಯೊಬ್ಬ ಮನುಷ್ಯ ದಿನದ 24 ತಾಸುಗಳಲ್ಲಿ ಕನಿಷ್ಟ ಒಂದು ತಾಸಾದರು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ದೈಹಿಕ-ಮಾನಸಿಕ ಸಧೃಡತೆ ಬೆಳೆಯುತ್ತದೆ. ದೈಹಿಕ ಸಧೃಡತೆಗಾಗಿ ಪ್ರತಿಯೊಬ್ಬರು ಕ್ರೀಡಾಸಕ್ತಿ ಬೆಳಸಿಕೊಳ್ಳಬೇಕು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ನಗರದ ಸಾಹಿತ್ಯ ಬವನದಲ್ಲಿ ರಾಕ್‍ಲೈನ್ ಫಿಟ್ನೆಸ್ ಪಾಯಿಂಟ್ ಕೊಪ್ಪಳ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪ್ರಪ್ರಥಮ ಬಾರಿಗೆ ಏರ್ಪಡಿಸಿದ ಹೈದರಾಬಾದ್-ಕರ್ನಾಟಕ ವಿಭಾಗ ಮಟ್ಟದ ದೇಹಾಧಾಢ್ರ್ಯ ಸ್ಪರ್ಧೆಯ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.
ಯುವಪೀಳಿಗೆ ಸಕ್ರಿಯವಾಗಿ ಮತ್ತು ಕ್ರೀಯಾಶೀಲರಾಗಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಕ್ರೀಡಾ ಚಟುವಟಿಕೆಯಿಂದ ದೈಹಿಕ ಸಧೃಡತೆ ಲಭಿಸುತ್ತದೆ ಪ್ರತಯೊಬ್ಬರು ಕ್ರೀಟಾಸಕ್ತಿ ಬೇಳಸಿಕೊಳ್ಳಬೇಕು ಯುವಕರೇ ದೇಶದ ಶಕ್ತಿಯಾಗಿದ್ದು ಇಲ್ಲಿನ ಯುವಕರು ತಮ್ಮ ಪ್ರತಿಭೆಯನ್ನು ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಂiÀi ಮಟ್ಟದವರೆಗೆ ತಮ್ಮ ಪ್ರತಿಭೆ ಮೂಲಕ ಬೆಳೆಯಬೇಕು ಯುವಕರ ಕ್ರೀಡೆಗೆ ಅನುಕೂಲವಾಗಲು ಕ್ರೀಡಾಂಗಣಕ್ಕೆ ವಿಶೇಷ ಅನುದಾನ ವದಗಿಸಿ ಕೊಡಲಾಗಿದೆ ಪ್ರತಿಭೆಯುಳ್ಳ ಯುವಕರಿಗೆ ಪ್ರತಿಯೊಬ್ಬರ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ನಗರಸಭೆಯ ಹಿರಿಯ ಸದಸ್ಯ ಅಮ್‍ಜದ್ ಪಟೇಲ್ ವಹಿಸಿದ್ದರು. ವಿಶೇಷ ಅಮಂತ್ರಿತರಾಗಿ ನಗರಸಬೆ ಅದ್ಯಕ್ಷ ಮಹೇಂದ್ರ ಚೋಪ್ರಾ, ಬಿಜೆಪಿ ಮುಖಂಡ ಅಮರೇಶ ಕರಡಿ, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮಹೇಬೂಬ್ ಹುಸೇನ್ ನಾಲಬಂದ ಪಾಲ್ಗೊಂಡು ದೇಹಾಧಾಢ್ರ್ಯ ಸ್ಪರ್ಧೆಯ ಕ್ರೀಡಾ ಪಟುಗಳಿಗೆ ಹಾಗೂ ರಾಕ್‍ಲೈನ್ ಫಿಟ್ನೆಸ್ ಪಾಯಿಂಟ್ ಪದಾಧಿಕಾರಿಗಳಿಗೆ ಕಾರ್ಯಕ್ರಮದ ಪರವಾಗಿ ಸನ್ಮಾನಿಸಿ ಸ್ಪರ್ಧೆಗೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ವೈದ್ಯ ಮಹೇಶ ಭೂವನಕೊಪ್ಪ, ನಗರ ಸಭೆ ಉಪಾಧ್ಯಕ್ಷೆ ಮೀನಾಕ್ಷಮ್ಮ ಬನ್ನಕೊಪ್ಪ, ಮಾಜಿ ಸದಸ್ಯರಾದ ಎಂ. ಪಾಷಾ ಕಾಟನ್, ಮಾನ್ವಿ ಪಾಷಾ, ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರೆಡ್ಡಿ, ಪೀರಾಂ ಹುಸೇನ್ ಚಿಕನ್ ಯುವ ನಾಯಕರಾದ ಮಹೇಮೂದ್ ಹುಸೇನಿ ಬಲ್ಲೆ, ಸಲೀಂ ಮಂಡಳಗೇರಿ ಹಿರಿಯ ಪತ್ರಕರ್ತ ಎಂ, ಸಾದಿಕ್ ಅಲಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು ಹಿರಿಯ ಕ್ರೀಟಾಪಟು ಆದಿಲ್ ಪಟೇಲ್‍ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಕೊನೆಗೆ ವಂದಿಸಿದರು.

loading...