ನಾವಾಡುವ ಭಾಷೆಯ ಬಗೆಗೆ ಗೌರವವಿರಲಿ: ಶಾಸಕ ಪಾಟೀಲ್‌

0
30
loading...

ಬೀಳಗಿ:- ಹುಟ್ಟಿದ ಊರು, ಜನ್ಮ ಕೊಟ್ಟ ತಾಯಿ-ತಂದೆ, ನಮ್ಮ ಈ ಭೂಮಿ ಮರೆಯಬಾರದು. ನಾವಾಡುವ ಭಾಷೆಯ ಬಗ್ಗೆ ಪ್ರೀತಿ ವಾತ್ಸಲ್ಯ, ಗೌರವ ಹೊಂದಿರಬೇಕು. ಅಕ್ಷರ ಭಾಷೆ ಕಲಿಸಿದ ಗುರುವನ್ನು ನಾವು ಗೌರವಿಸಬೇಕು ಎಂದು ಶಾಸಕ ಜೆ.ಟಿ.ಪಾಟೀಲ್‌ ಅಭಿಪ್ರಾಯಪಟ್ಟರು. ಪಟ್ಟಣದ ತಹಶೀಲ್ದಾರ ಕಛೇರಿ ಆವರಣದಲ್ಲಿ ಬುಧುವಾರ ನಡೆದ 62ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.   ದೇಶ sಅಭಿವೃದ್ಧಿಯಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಆಯೋಜಿಸಿ ಕಾರ್ಯರೂಪಕ್ಕೆ ತಂದಾಗ ಸಫಲವಾಗುವದು ಎಂದರು.  ವಿಧಾನ ಪರಿಷತ್‌ ಸದಸ್ಯ ಎಚ್‌.ಆರ್‌.ನಿರಾಣಿ ಮಾತನಾಡಿ ಕನ್ನಡ ಭಾಷೆಯ ಬೆಳವಣಿಗೆಗೆ ಸಾಹಿತಿಗಳ ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಪ್ರಸಕ್ತ ಸಾಲಿನಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡದೆ ನಾವು ನಮ್ಮ ಮಕ್ಕಳಿಗೆ ಆಂಗ್ಲ ಭಾಷೆ ಶಿಕ್ಷಣ ನೀಡುವ ಮೂಲಕ ನಮ್ಮ ನಾಡ-ನುಡಿಯ ಬಗ್ಗೆ ಕಾಳಜಿ ಕಡಿಮೆಯಾಗುತ್ತಿರುವದು ವಿಷಾಧನೀಯವಾದದ್ದು ಎಂದು ಆತಂಕ ವ್ಯಕ್ತಪಡಿಸಿದರು. ನಮ್ಮ ನಾಡ-ನುಡಿಗೆ ದÀಕ್ಕೆ ಬಂದಲ್ಲಿ ಪ್ರತಿಯೊಬ್ಬ ಕನ್ನಡಿಗ ಒಗ್ಗಟ್ಟಿನ ಮಂತ್ರ ಪಾಲನೆಮಾಡಬೇಕು ಎಂದರು.   ಪ್ರಾದ್ಯಾಪಕ ಡಾ. ವಾಯ್‌.ಎಮ್‌.ಯಕೋಳ್ಳಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ಅನೀಲ್‌ ಗಚ್ಚಿನಮನಿ, ತಾಪಂ ಅಧ್ಯಕ್ಷ ಶ್ರೀಶೈಲ್‌ ಸೂಳಿಕೇರಿ, ತಾಪಂ ಉಪಾಧ್ಯಕ್ಷೆ ರೂಪಾ ಹಿರೇಮಠ, ಜಿಪಂ ಸದಸ್ಯರಾದ ಹಣಮಂತ ಕಾಖಂಡಕಿ, ಕಸ್ತೂರಿ ಲಿಂಗಣ್ಣವರ್‌, ಬಸವರಾಜ್‌ ಖೋತ್‌, ಕಸಾಪ ಅಧ್ಯಕ್ಷ ಕಿರಣ ಬಾಳಾಗೋಳ, ತಹಶೀಲ್ದಾರ್‌ ಉದಯ ಕುಂಬಾರ್‌, ಕ್ಷೇತ್ರಶಿಕ್ಷಣಾಧಿಕಾರಿ ಎಸ್‌.ಎಸ್‌.ಕೆಳದಿಮಠ, ಸಿಪಿಆಯ್‌ ಶ್ರೀಶೈಲ್‌ ಗಾಬಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್‌ ನಾಯಕ್‌, ಜಿಪಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್‌ ಕಕರಡ್ಡಿ, ಗುರುರಾಜ್‌ ಲೂತಿ ಹಾಗೂ ವಿಠ್ಠಲ್‌ ಹಿರೇನಿಂಗಪ್ಪನವರ್‌ ಇದ್ದರು.

loading...