ನಿರಾಣಿಯವರು ಸಾಮಾಜಿಕ ಕೆಲಸ ಶ್ಲಾಘನೀಯ: ಡಾ. ಜೋಷಿ

0
22
loading...

ಕನ್ನಡಮ್ಮ ಸುದ್ದಿ-ಬೀಳಗಿ: ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್‌ ಆಳ್ವರವರ ಸಂಸ್ಥೆಯಲ್ಲಿ ಮೂವತ್ತು ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ಪಡೆಯುವುದರ ಜೊತೆಗೆ ಸುಮಾರು 26000 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದು ಖ್ಯಾತ ನೇತ್ರ ತಜ್ಞ ಡಾ ಎಂ.ಎಂ ಜೋಷಿ ಹೇಳಿದರು.
ಎಂ.ಆರ್‌.ಎನ್‌ (ನಿರಾಣಿ) ಪೌಂಡೇಶನ್‌ ಗ್ರಾಮೀಣಾಭಿವೃದ್ಧಿ ಮತ್ತು ಸ್ವಉದ್ಯೋಗ ತರಬೇತಿ ಸಂಸ್ಥೆ, ಆಳ್ವಾಸ್‌ ನುಡಿಸಿರಿ ವಿರಾಸತ್‌ ಮೂಡಬಿದಿರೆ ಇವರ ಆಶ್ರಯದಲ್ಲಿ ‘‘ಆಳ್ವಾಸ್‌ ಸಾಂಸ್ಕೃತಿಕ ವೈಭವ ಬೀಳಗಿ-2017” ಶನಿವಾರ, ಮಿನಿವಿಧಾನ ಸೌಧ ಪಟ್ಟಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇವರು ಕೊಟ್ಟಿರುವ ಸಂಪತ್ತು ಮತ್ತು ಸಾಮರ್ಥ್ಯಗಳನ್ನು ಬಳಸಿಕೊಂಡು ಕಷ್ಟದಲ್ಲಿದ್ದವರಿಗೆ ನೆರವಾಗುವ ಮನುಷ್ಯ ದೊಡ್ಡವನೆನೆಸಿಕೊಳ್ಳುತ್ತಾನೆ. ನಿರಾಣಿಯವರು ಉದ್ಯಮಿಯಾಗಿ ಗಳಿಸಿದ ಸಂಪತ್ತು ಸಾಮರ್ಥ್ಯಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ, ಉದ್ಯೋಗ ತರಬೇತಿ ನೀಡುವ, ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವ, ಸಾಮಾಜಿಕ ಹಾಗೂ ಸಾಂಸ್ಕೃತಿಕ, ಸಾಹಿತ್ಯಿಕ ರಂಗಗಳಲ್ಲಿ ಈ ನಾಡಿನ ಕನ್ನಡದ ಆಸ್ಮಿತೆಯಂತಿರುವ ಡಾ.ಮೋಹನ್‌ ಆಳ್ವರವರ ನೇತ್ರತ್ವದ ಆಳ್ವಾಸ್‌ ಸಾಂಸ್ಕೃತಿಕ ವೈಭವ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮುಖಾಂತರ ಮಾದರಿ ವ್ಯಕ್ತಿತ್ವವನ್ನು ರೂಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್‌ ಆಳ್ವರವರು ಮಾತನಾಡಿ, ಮನಸ್ಸುಗಳನ್ನು ಒಡೆಯುವ ಕೆಲಸವೇ ಹೆಚ್ಚಾಗಿರುವ ಇಂದಿನ ದಿನಮಾನಗಳಲ್ಲಿ, ಸಾಂಸ್ಕೃತಿಕ ವಿನಿಮಯದ ಮೂಲಕ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಾಗು ದೇಶದ ಎಲ್ಲಾ ರಾಜ್ಯಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಮುಖ್ಯವಾಗಿ ವಿದ್ಯಾರ್ಥಿಗಳ ಮೂಲಕ ಒಂದುಮಾಡುವ ಕೆಲಸವನ್ನು ಆಳ್ವಾಸ್‌ ಸಂಸ್ಥೆಮಾಡುತ್ತಿದೆ ಎಂದರಲ್ಲದೆ ನಿರಾಣಿಯಂತಹ ಸಜ್ಜನ ರಾಜಕಾರಣಿಯ ಅವಶ್ಯಕತೆ ರಾಜ್ಯಕ್ಕಿದೆ ಎಂದರು.
ಈ ವೇಳೆ ಕಲ್ಮಠದ ಗುರುಪಾದ ದೇವರು, ದೊಡ್ಡಿಹಾಳ ಮಠದ ಶಿವಾನಂದ ದೇವರು, ಮಾದವನಾಂದ ಮಹಾಸ್ವಾಮಿಗಳು, ನಿರ್ವಾಣ ಮಹಾಸ್ವಾಮಿಗಳು, ಮಾತೋಶ್ರೀ ಅನುಸುಯಾ ತಾಯಿ, ವಿದಾನ ಪರಿಷತ್‌ ಸದಸ್ಯ ಎಚ್‌ ಆರ್‌ ನಿರಾಣಿ, ಜಿಲ್ಲಾ ಪಂಚಯಾತ್‌ ಸದಸ್ಯ ಹೂವಪ್ಪ ರಾಠೋಡ್‌, ವಿಜಯ ನಿರಾಣಿ, ಡಾ ಶ್ರೀರಾಮ ಇಟ್ಟಣ್ಣವರ್‌, ಮುಳಗಡೆ ಸಂತ್ರಸ್ಥರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ, ಬೆನ್ನಪ್ಪ ಬೀಳಗಿ, ಬಿಜೆಪಿ ತಾಲೂಕ್‌ ಅಧ್ಯಕ್ಷ ಸಂಗಪ್ಪ ಕಟಗೇರಿ, ಯುವ ಘಟಕದ ಅಧ್ಯಕ್ಷ ಆನಂದ ಇಂಗಳಗಾವಿ, ಮೋಹನ್‌ ಜಾಧವ್‌, ರಾಮಣ್ಣ ಕಾಳಪ್ಪಗೋಳ್‌, ಸುನಂದಾ ಪಾಟೀಲ್‌, ಕಾವೇರಿ ರಾಠೋಡ್‌, ಹೊಳಬಸು ಬಳಾಶೆಟ್ಟಿ, ರವಿ ದೇಸಾಯಿ, ದ್ರಾಕ್ಷಾಯಣಿ ಜಂಬಗಿ ಉಪಸ್ಥಿತರಿದ್ದರು.

loading...