ನೇರಸಾ ಗ್ರಾಮವನ್ನು ಸಂಪೂರ್ಣ ಬಚತ್, ಸುಕನ್ಯಾ ಸಮೃದ್ಧಿ ಗ್ರಾಮವಾಗಿ ಘೋಷಣೆ

0
29
????????????????????????????????????
loading...

ಕನ್ನಡಮ್ಮ ಸುದ್ದಿ-ಖಾನಾಪುರ: ಭಾರತೀಯ ಅಂಚೆ ಇಲಾಖೆಯ ವತಿಯಿಂದ ನೇರಸಾ ಗ್ರಾಮವನ್ನು ಸಂಪೂರ್ಣ ಬಚತ್ ಹಾಗೂ ಸುಕನ್ಯಾ ಸಮೃದ್ಧಿ ಗ್ರಾಮವನ್ನಾಗಿ ಘೋಷಿಸಲಾಗಿದೆ ಎಂದು ಉತ್ತರ ಕರ್ನಾಟಕ ಪೋಸ್ಟ್ ಮಾಸ್ತರ್ ಜನರಲ್ ವೀಣಾ ಶ್ರೀನಿವಾಸ್ ಹೇಳಿದರು.
ತಾಲೂಕಿನ ನೇರಸಾ ಗ್ರಾಮದಲ್ಲಿ ಅಂಚೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಪೂರ್ಣ ಬಚತ್ ಹಾಗೂ ಸುಕನ್ಯಾ ಸಮೃದ್ಧಿ ಗ್ರಾಮ ಫಲಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಗ್ರಾಮದ ಪ್ರತಿಯೊಂದು ಕುಟುಂಬ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರಿಂದ ಮತ್ತು ಗ್ರಾಮದ 14 ವರ್ಷದೊಳಗಿನ ಹೆಣ್ಣು ಮಕ್ಕಳು ಸುಕನ್ಯಾ ಸಮೃದ್ಧಿ ಖಾತೆಯನ್ನು ಹೊಂದಿದ್ದರಿಂದ ಗ್ರಾಮವನ್ನು ಇಲಾಖೆಯಿಂದ ಸಂಪೂರ್ಣ ಬಚತ್ ಹಾಗೂ ಸುಕನ್ಯಾ ಸಮೃದ್ಧಿ ಗ್ರಾಮದ ಮಾನ್ಯತೆ ನೀಡಿ ಗೌರವಿಸಲಾಗಿದೆ ಎಂದರು.

ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ವಿವಾಹದ ವೆಚ್ಚಕ್ಕಾಗಿ ಈಗಿನಿಂದಲೇ ಹಣವನ್ನು ಸಂಗ್ರಹಿಸುವ ಸುಕನ್ಯಾ ಸಮೃದ್ಧಿ ಯೋಜನೆಯ ಸದುಪಯೋಗವನ್ನು ಹೆಣ್ಣು ಮಕ್ಕಳ ಪಾಲಕರು ಪಡೆಯಬೇಕು. ಅಂಚೆ ಇಲಾಖೆಯ ಗ್ರಾಮೀಣ ಜೀವ ವಿಮೆ, ಆರ್.ಡಿ. ಎಸ್.ಬಿ, ಫಿಕ್ಸ್ ಡಿಪಾಸಿಟ್ ಮತ್ತಿತರ ಯೋಜನೆಗಳ ಲಾಭವನ್ನು ಪಡೆಯಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಆರ್.ಜಿ ಬ್ಯಾಟೆಪ್ಪನವರ, ಮಾಜಿ ತಾಪಂ ಸದಸ್ಯ ಅಶೋಕ ದೇಸಾಯಿ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಧನಶ್ರೀ ಸರ್‍ದೇಸಾಯಿ, ಗ್ರಾಪಂ ಸದಸ್ಯರಾದ ಉತ್ತಮ ಬೋಬಾಟೆ, ನಿಂಗಪ್ಪ ಗಸ್ತಿ, ವೈಷ್ಣವಿ ಗಿರಿ, ಜೆ.ಟಿ ಶೇಡಸ್ಯಾಳ, ಉದಯ ದೇಸಾಯಿ, ಸುಜೀತ್ ದೇಸಾಯಿ ಮತ್ತಿತರರು ಇದ್ದರು.

ಸುಕನ್ಯಾ ಸಮೃದ್ಧಿ ಖಾತೆ ಹೊಂದಿದ ಬಾಲಕಿಯರು ಮತ್ತು ಪಾಲಕರಿಗೆ ಅಂಚೆ ಅಧಿಕಾರಿಗಳು ಪಾಸ್ ಪುಸ್ತಕಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ವಿವಿಧ ಶಾಲೆಗಳ ಶಿಕ್ಷಕರು, ಪಾಲಕರು, ಅಂಚೆ ಇಲಾಖೆಯ ಸಿಬ್ಬಂದಿ ಇದ್ದರು. ಅಂಚೆ ನಿರೀಕ್ಷಕ ಸಿ.ಜಿ ಕಾಂಬಳೆ ಇಲಾಖೆಯ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಎಂ,ವಾಯ್ ಗೌರಣ್ಣವರ ಸ್ವಾಗತಿಸಿದರು. ಬಿ,ಆರ್ ಮಹಾದೀಕ್ ವಂದಿಸಿದರು.

loading...