ನ.9 ರಂದು ಚಿಕಿತ್ಸೆ, ಔಷಧ ಸಂಗ್ರಹ ಔಷಧ ಮಳಿಗೆ ಉದ್ಘಾಟನೆ

0
26
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಆರ್ಯ ವೈದ್ಯಶಾಲಾ, ಕೊಟ್ಟಕಲ್, ಕೇರಳ, ತನ್ನ ಪೂರ್ಣಪ್ರಮಾಣದ, ಚಿಕಿತ್ಸೆ ಹಾಗು ಔಷಧ ಸಂಗ್ರಹ ಒಳಗೊಂಡಿರುವ ಸುಸಜ್ಜಿತವಾದ ಔಷಧ ಮಳಿಗೆಯನ್ನ ಪ್ರಾರಂಬಿಸುತ್ತಲಿದೆ. ನ.9 ರಂದು ಭವ್ಯ ಉದ್ಘಾಟನೆಯನ್ನು ಏರ್ಪಡಿಸಲಾಗಿದ್ದು ಕೇರಳ ಕೊಟ್ಟಕಲ್‍ನಿಂದ ಪದಾಧಿಕಾರಿಗಳು ಹಾಗೂ ವೈದ್ಯ ವೃಂದದಿಂದ ಶಾಖೆಯ ಉದ್ಘಾಟನೆ ಕೇರಳ ಪದ್ದತಿಯಂತೆ ಉದ್ಘಾಟನೆಯಾಗಲಿದೆ ಎಂದು ಗುರು ಅಮರೇಂದ್ರ ಜ್ಞಾನಿ ಹೇಳಿದರು.

ಮಂಗಳವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯ ಪ್ರಭಂದಕ ರಾಜೇಂದ್ರನ್ ವಾರಿಯರ್ ಹಾಗು ಕರ್ನಾಟಕ ರಾಜ್ಯದ ಪ್ರಭಂದಕ ಹಾಗು ವೈದ್ಯ ಡಾ.ಸುಜೀತ್ ವಾರಿಯರ್‍ವರು ಆಗಮಿಸುತ್ತಲಿರುವುದು ಉದ್ಘಾಟನೆ ಚೈತನ್ಯ ತರಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಹಿರಯರಾದ ವಿಟಿಯುನ ಮಾಜಿ ಕುಲಪತಿ ಹಾಗು ಕರ್ನಾಟಕ ನವೀನ ಮಂಡಳಿಯ ಕಾರ್ಯಧ್ಯಕ್ಷರಾದ ಶ್ರೀಯುತ ಪ್ರಕಾಶಜಿ ಖೀಂಚಾರವರು ಆಗಮಿಸುತ್ತಲಿದ್ದು ಉದ್ಘಾಟನ ಕಾರ್ಯಕ್ರಮಕ್ಕೆ ಹಿರಿತನದ ಕಳೆ ನೀಡುತ್ತಲಿದೆ. ಮುಖ್ಯ ಭಾಷಣಕಾರರಾಗಿ ಝೆನ್ ಭೊದಕರು ಹಾಗು ಆರ್ಯುವೇದ ತಜ್ಞರೊ ಆದ ಗುರು ಅಮರೇಂದ್ರ ಜ್ಞಾನಿಗಳಾದವರ ಅನುಭವ ಜನ್ಯ ಹಿತವಚನಗಳ ಕಾರ್ಯಕ್ರಮ ವಿಶೇಷ ಸೊಬಗು ನೀಡಲಿದೆ ಎಂದರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ, ಆರು ಜನ ಹಿರಿಯ ಮಾನವತಾವಾದಿ, ಸ್ವಾತಂತ್ರಸೇನಾನಿ, ಸಾಮಾಜಿಕ ಕಾರ್ಯಕರ್ತರು, ಪರಿಸರವಾದಿ, ಇತ್ಯಾದಿ ವ್ಯಕ್ತಿಗಳಾದ ವಸಂತರಾವ್ ವಿ ಗುರ್‍ಗರ್, ಶಿವಾಜಿ ಕಾಗ್ನಿಕರ್, ರಾಘವೇಂದ್ರ ಕಾಗವಾಡ್, ನಾಗರತ್ನ ರಾಮಗೌಡ, ವಿಜಯ ಮೊರೆ, ಡಾ.ಸದಾಶಿವ ಗೊರೆ ಇವರುಗಳನ್ನ ವಿಷೇವಾಗಿ ಆಮಂತ್ರಿಸಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.

ವೃದ್ದರಿಗೆ ವಿಶೇಷವಾಗಿ ಆರೋಗ್ಯ ಶ್ರೀರಕ್ಷೆ ಒದಗಿಸುವ ಸಂಕಲ್ಪದೊಂದಿಗೆ ಪ್ರಾರಂಭವಾಗುತ್ತಿರುವ ಈ ಆರೋಗ್ಯ ಕೇಂದ್ರ ಆರ್ಯುವೇದದ ಅತ್ಯೋತಮ, ಉತ್ಕøಷ್ಠ ದರ್ಜೆಯ ಔಷಧಗಳ ಚಿಕಿತ್ಸೆ ನೀಡುವುದಿದ್ದು ಜರ್ಜರ ಅಸಹಾಯ ಜೀರ್ಣಕಾಯಿಲೆಗಳಿಗೊ ವಿಶೇಷ ಚಿಕಿತ್ಸೆ ದೊರಕಿಸಿಕೊಡಲಿದೆ. ನವಂಬರ್ 9 ರಂದು ಕಾರ್ಯಕ್ರಮಗಳು ಬೆಳಿಗ್ಗೆ 11 ಘಂಟೆಗೆ ಪ್ರಾರಂಭವಾಗಿ 1 ಘಂ ಆರ್ಯುವೇದ ಭೋಜನದೊಂದಿಗೆ ಸುಖಾಂತ್ಯವಾಗಲಿದ್ದು ಕಾರ್ಯಕ್ರಮದಿಂದ ಅನೇಕ ಆರೋಗ್ಯದ ಉಪಾಯಗಳು ತತ್ಕಾಲ ದೊರೆಯಲಿದೆ ಎಂದರು.
ನಾಡಿ ಪರೀಕ್ಷಣ ಪದ್ದತಿಯು ವಿಶೇಷವಾಗಿದ್ದು 14 ನಾಡಿಗಳ ವಿಶೇಷ ಪರೀಕ್ಷಣಿಯ ಬೌದ್ದ ಪದ್ದತಿಯಿಂದ ಮಾಡಲಾಗುತ್ತದೆ. ನಾಡಿ ಪರೀಕ್ಷಣ ಬೆಳಿಗ್ಗೆ 7 ರಿಂದ 11 ಘಂ ವರೆಗೊ ಇದ್ದು ನಿಶುಲ್ಕವಾಗಿರುತ್ತದೆ ಎಂದರು ಹೇಳಿದರು.

ಬೆಳಗಾವಿಯ ನಗರದ ಸೇವಾ ದುರಂದರರಾದ, ಸಮಾಜ ಸುದಾರಕ ರಾಜೇಂದ್ರ ಜೈನ್, ಶಿಕ್ಷಣ ತಜ್ಞ ಸಮಾಜ ಜೀವಿ ರಾಜೀವ ದೊಡ್ಡಣವರ್, ಸಮಾಜನ್ಮೊಖಿ ಸೇವಾಬವಿ ಮುರುಗೇಶ ಡಪಲಾಪುರೆ, ಗಣಿತ ತಜ್ಞ ಹಿರಿಯ ಶ್ರೀ ಬೀಮೇಂದ್ರ ಬೆಳಗಲಿ, ಕೆಎಲ್‍ಇ ವಿಶ್ವವಿದ್ಯಾಲಯದ ವೃತ್ತ ಮಾಧ್ಯಮಗಳ ಸಂಯೋಜಕ ಎನ್ ನಟರಾಜ, ಉದಯೋನ್ಮುಖ ವಕೀಲ ಷಡಾಕ್ಷರೀ ಹಿರೇಮಠ, ಈ ಎಲ್ಲ ಕಾರ್ಯಕ್ರಮಕ್ಕೆ ಜೀವ ತುಂಬಿ ಆರ್ಹನಿಸಿ ಸಕ್ರಿಯವಾಗಿರುವ ಯುವ ರೊವಾರಿ ಧನಂಜಯ ಜಾದವ್ ಇವರುಗಳ ಮಾರ್ಗದರ್ಶನದಲ್ಲಿ ಪೊರ್ಣ ಕಾರ್ಯಕ್ರಮ ರೊಪಗೊಳ್ಳುತ್ತಲಿದೆ ಎಂದರು.
ಡಾ.ವಿನೊದ್,ರಾಜೀವ ದೊಡ್ಡಣ್ಣವರ್, ರಾಜೇಂದ್ರ ಜೈನ್, ಧನಂಝಜಯ ಜಾದವ್, ಎನ್ ನಟರಾಜ, ಷಡಾಕ್ಷರಿ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

loading...