ಪಕ್ಷದ ಏಳ್ಗೆಗಾಗಿ ಕಾರ್ಯಕರ್ತರು ದುಡಿಯುತ್ತಿದ್ದಾರೆ: ಎಐಸಿಸಿ ಕಾರ್ಯದರ್ಶಿ ನಾಯಿಕ

0
25
loading...

ಕನ್ನಡಮ್ಮ ಸುದ್ದಿ-ರಾಯಬಾಗ: ರಾಯಬಾಗ ಮತ್ತು ಕುಡಚಿ ಮತಕ್ಷೇತ್ರಗಲ್ಲಿ ಕಾಂಗ್ರೆಸ್ ಶಾಸಕರು ಇಲ್ಲದಿದ್ದರೂ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಸಂಘಟಿತರಾಗಿ ಪಕ್ಷದ ಏಳ್ಗೆಗಾಗಿ ದುಡಿಯುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗದೆ ಎಂದು ಎಐಸಿಸಿ ಕಾರ್ಯದರ್ಶಿ ಕಾಂತಾ ನಾಯಿಕ ಹೇಳಿದರು.
ಬೆಳಗಾವಿ ಕಾಡಾ ಅಧ್ಯಕ್ಷ ಮತ್ತು ರಾಯಬಾಗ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಈರಗೌಡ ಪಾಟೀಲ ಅವರು ಮಾತನಾಡಿ, ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರುತ್ತವೆ. ಆದರೆ ಅದನ್ನು ಮರೆತು ಪಕ್ಷಕ್ಕಾಗಿ ನಿಸ್ವಾರ್ಥವಾಗಿ ದುಡಿದು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಾಗಿ ಶ್ರಮೀಸೋಣವೆಂದು ಕರೆ ನೀಡಿದರು.
ಕ.ರಾ.ರ.ಅಭಿವೃದ್ದಿ ನಿಗಮದ ಉಪಾಧ್ಯಕ್ಷ ಮಹಾವೀರ ಮೊಹಿತೆ, ಸುಕುಮಾರ ಕಿರಣಗಿ, ವಿಲಾಸ ಹೆರವಾಡೆ, ಅಣ್ಣಾಸಾಬ ಕೊಣೆ, ಮಾರುತಿ ನಾಯಿಕ, ಸಿದ್ರಾಮ ಪೂಜಾರಿ, ತಾ.ಪಂ.ಸದಸ್ಯ ನಾಮದೇವ ಕಾಂಬಳೆ, ಬಸು ಕಿಚಡೆ, ಕುಂತಿನಾಥ ಮಗದುಮ್ಮ, ಶ್ರವಣ ಕಾಂಬಳೆ, ಬಿ.ಎನ್.ಬಂಡಗಾರ, ರಾಜು ಶಿರಗಾಂವೆ, ಅಝರುದ್ದಿನ ಮುಲ್ಲಾ, ಮುರಗೇಶ ಕೊಟಿವಾಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...