ಪತ್ರಿಕೋದÀ್ಯಮ ವಿದ್ಯಾರ್ಥಿಗಳು ಉತ್ತಮ ಬರವಣಿಗೆಯನ್ನು ರೂಢಿಸಿಕೊಳ್ಳುವುದು ಅವಶ್ಯ

0
17
loading...

ಧಾರವಾಡ- ಟಿವಿ ಮಾಧ್ಯಮ ಅತ್ಯಂತ ಸರಳ ಹಾಗೂ ಸಂಕ್ಷಿಪ್ತ ಮಾಧ್ಯಮವಾಗಿದ್ದು ಬರವಣಿಗೆ ಸ್ಪಷ್ಟವಾಗಿ, ಚುಟುಕಾಗಿ ಹಾಗೂ ವಿಷಯಕ್ಕೆ ನೇರವಾಗಿರಬೇಕು ಎಂದು ಟಿವಿ9 ಸುದ್ದಿವಾಹಿನಿಯ ವರದಿಗಾರÀ ನರಸಿಂಹಮೂರ್ತಿ ಪ್ಯಾಟಿ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಸಂವಹನ ಕೂಟದಲ್ಲಿ ‘ಟಿವಿ ಮಾಧ್ಯಮದಲ್ಲಿ ಪ್ರತಿ ಬರವಣಿಗೆ’ ಕುರಿತು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಟಿವಿ ಮಾಧ್ಯಮ ಕ್ಷೇತ್ರಕ್ಕೆ ಬರುವವರು ನಿರೂಪಕರು, ವರದಿಗಾರರಾಗಬೇಕೆಂದು ಬಯಸುವುದು ಸಹಜ. ಆದರೆ ಡೆಸ್ಕ್ ಬರಹಗಾರರ ಕೊರತೆ ಇಂದಿನ ದಿನಗಳಲ್ಲಿ ಹೆಚ್ಚಾಗಿದೆ. ಹಾಗಾಗಿ ಪತ್ರಿಕೋದÀ್ಯಮ ವಿದ್ಯಾರ್ಥಿಗಳು ಉತ್ತಮ ಬರವಣಿಗೆಯನ್ನು ರೂಢಿಸಿಕೊಳ್ಳಿ ಎಂದ ಅವರು ಉತ್ತಮ ಬರಹಗಾರರಿಗೆ ಇದೀಗ ನ್ಯೂಸ್ ಚಾನಲ್‍ಗಳಲ್ಲಿ ಸಾಕಷ್ಟು ಅವಕಾಶಗಳಿವೆ ಎಂದರು.
ಕೇವ¯ ಐದರಿಂದ ಹತ್ತು ನಿಮಿಷಗಲ್ಲಿ ಒಂದು ಘಟನೆಯ ಕುರಿತು ಉತ್ತಮವಾದ ಬರವಣಿಗೆ ತಯಾರಿಸವುದು ಸವಾಲಿನ ಕೆಲಸವಾಗಿದ್ದು ಅದನ್ನು ನಿಭಾಯಿಸುವ ಮನಸ್ಥಿತಿ ಒಬ್ಬ ವರದಿಗಾರನಲ್ಲಿಬೇಕು ಎಂದರು. ವಿಭಾಗದ ಮುಖ್ಯಸ್ಥೆ ಪ್ರೊ.ವಿಜಯಲಕ್ಷ್ಮೀ ಅಮ್ಮಿನಭಾವಿ ಅಧ್ಯಕ್ಷತೆವಹಿಸಿದ್ದರು. ಸಂವಹನಕೂಟದ ಸಂಚಾಲಕ ಡಾ.ಸಂಜಯಕುಮಾರ ಮಾಲಗತ್ತಿ ಸ್ವಾಗತಿಸಿದರು. ಭೀಮರಾವ್ ದೇಸಾಯಿ ನಿರೂಪಿಸಿದರು, ಸುದರ್ಶನ ಬಾಲನಾಯಕ ವಂದಿಸಿದರು.

loading...