ಪಾರಿವಾಳ ಸ್ಪರ್ಧೆ: ಪಾರಿವಾಳ ಸಂಕುಲ ಉಳಿಸಿ ಬೆಳೆಸಲು ಕರೆ

0
36
loading...

ಗದಗ: ಪಾರಿವಾಳ ಪಾಲನೆ ಹಾಗೂ ಪೋಷಣೆಯೊಂದಿಗೆ ಅವುಗಳನ್ನು ಮುಂದಿನ ಪಿಳಿಗೆಗೆ ಕೊಡುಗೆಯಾಗಿ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪಾರಿವಾಳ ಪ್ರೇಮವು ನಮ್ಮನ್ನು ಮತ್ತಷ್ಟು ಉನ್ನತಮಟ್ಟಕ್ಕೆ ಏರಿಸುವ ಶಕ್ತಿಯನ್ನು ಹೊಂದಿದೆ ಎಂದು ಬೆಂಗಳೂರ ಮೂಲದ ಪ್ರಕಾಶ ಅಭಿಪ್ರಾಯಪಟ್ಟರು.
ಅವರು ರವಿವಾರ ಗದಗ ನಗರದಲ್ಲಿ ಗದಗ, ಹಾವೇರಿ ಡಾವಣಗೇರಿ ಹಾಗೂ ಬಾಗಲಕೋಟ ಜಿಲ್ಲಾ ಪಾರಿವಾಳ ಪ್ರೇಮಿಗಳ ಸಂಘದಿಂದ ಎರ್ಪಡಿಸಿದ್ದ ಪಾರಿವಾಳ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪಾರಿವಾಳ ಕ್ರೀಡೆಯು ಮೂಲತಹ ಪರ್ಷಿಯನ್‍ನಿಂದ ಬಂದಿದ್ದು, 1950 ನಂತರ ಬೆಳಕಿಗೆ ಬಂದಿತು. ಪ್ರತಿಯೊಬ್ಬರು ಕ್ರೀಡಾ ಮನೋಬಾವನೆ ಬೆಳಸಿಕೊಳ್ಳಬೇಕು. ಪಾರಿವಾಳಗಳನ್ನು ಉಳಸಿ ಬೆಳಸುವಲ್ಲಿ ನಾವೆಲ್ಲ ಮುಂದಾಗಬೇಕೆಂದು ತಿಳಿಸಿ, ಪಾರಿವಾಳ ಕ್ರೀಡೆ ಬೆಳೆದು ಬಂದ ರೀತಿ ಹಾಗೂ ಪಾರಿವಾಳ ಸಾಕುವ ಅನುಕೂಲತೆಗಳನ್ನು ತಿಳಿಸಿದರು.
ಡಾ.ಆನಂದ ಇನಾಮದಾರ ಮಾತನಾಡಿ ಪಾರಿವಾಳ ಪೋಷಣೆಯೊಂದಿಗೆ ಅವುಗಳನ್ನು ಮತ್ತೊಬ್ಬರೊಡನೆ ಹಂಚಿಕೊಂಡಾಗ ಉತ್ತಮ ಪಾರಿವಾಳ ಪ್ರೇಮಿಗಳಾಗಲು ಸಾಧ್ಯ. ಪಾರಿವಾಳ ಪಾಲಕರು ಪಾರಿವಾಳದಂತೆ ಅತಿ ಸೂಕ್ಷ್ಮ ಹಾಗೂ ಒಳ್ಳೇಯ ಮನಸ್ಸು ಹೊಂದಿರುವ ಜೊತೆಗೆ ಉತ್ತಮ ಗುಣಗಳನ್ನು ಹೊಂದಿರುತ್ತಾರೆ. ಪಾರಿವಾಳಗಳೊಂದಿಗೆ ಬೆರತುಕೊಂಡಾಗ ನಾವು ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ ಎಂದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ರಮೇಶ ಅಬ್ಬಿಗೇರಿ, ಶಿವಾಜಿರಾವ್ ಜಾಧವ, ಕೆ.ರಾಮಚಂದ್ರರಾವ್, ಮೈಕಲ್ ರಾಬರ್ಟ್, ಕುಮಾರಸ್ವಾಮಿ, ರಾಜೇಂದ್ರ ಕುಮಾರ, ಉಮೇಶ ಜಿ, ಜಾವೇಧ ಆರೆ, ಮಲೆಬೆನ್ನೂರ ಗೌಡ್ರ, ಸಂಘದ ಕಾರ್ಯದರ್ಶಿ ಹುಸೇನಸಾಬ ತಹಶೀಲ್ದಾರ, ರಫೀಕ ಮೊರಬ್, ಬಿ.ಕೆ. ಮಹೇಶ್ವರಪ್ಪ ಸೇರಿದಂತೆ ಗದಗ ಬೆಟಗೇರಿ, ಹಾವೇರಿ, ಡಾವಣಗೇರಿ, ಬಾಗಲಕೋಟ, ಬೆಂಗಳೂರ, ಹುಬ್ಬಳ್ಳಿ ಹಾಗೂ ರಾಜ್ಯದ ವಿವಿಧ ಭಾಗಗಳ ಪಾರಿವಾಳ ಪ್ರೇಮಿಗಳು ಸಮಾರಂಭದಲ್ಲಿ ಪಾಲ್ಗೋಂಡಿದ್ದರು. ಎಸ್.ಕೇಶಕಕುಮಾರ ಸ್ವಾಗತಿಸಿ, ನಿರೂಪಿಸಿದರು. ಅಭಿಷೇಕ ಇನಾಮದಾರ ವಂದಿಸಿದರು.

loading...