ಪ್ರಾತಿಕ್ಷಿತೆಗಳ ಪ್ರದರ್ಶನವನ್ನು ಪ್ರದರ್ಶಿಸಿದರು

0
26
loading...

ನಿಪ್ಪಾಣಿ: ಯಕ್ಸಂಬಾದ ಶಿವಶಂಕರ ಜೊಲ್ಲೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಸದಲಗಾ ಅಗ್ನಿಶಾಮಕ ದಳದವರಿಂದ ಪ್ರಾತಿಕ್ಷಿತೆಯ ಪ್ರದರ್ಶನ ಪ್ರದರ್ಶಿಸುತ್ತಿರುವ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಪ್ರಾತಿಕ್ಷಿಕೆಯ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಈ ಪ್ರಾತಿಕ್ಷಿತೆಯಲ್ಲಿ ತುರ್ತು ಪರಿಸ್ಥಿತಿಗಳಲ್ಲಿ ಹಾಗೂ ಅಗ್ನಿ ಅವಘಡಗಳು ಸಂಭವಿಸಿದ್ದಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂಬುದನ್ನು ಶಾಲೆಯ ಸಹಶಿಕ್ಷಕರಾದ ಎಮ್ ಎ. ಸನದಿ ಪ್ರಾಸ್ಥಾವಿಕವಾಗಿ ಹೇಳಿದರು.

ಅದರಂತೆ ಅಗ್ನಿ ಶಾಮಕದಳದ ಸಿಬ್ಬಂದಿಗಳು ವಿವಿಧ ರೀತಿಯ ಪ್ರಾತಿಕ್ಷಿತೆಗಳ ಪ್ರದರ್ಶನವನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಅಗ್ನಿ ಶಾಮಕ ಸಿಬ್ಬಂದಿ ವಿಜಯಕುಮಾರ ದೇಯಣ್ಣವರ ಮಾತನಾಡಿ, ಬೆಂಕಿ ಎಂದರೆ ದಹನಕ್ರಿಯೆ ಮಾನವ ಜೀವನಕ್ಕೆ ನಿತ್ಯ ಬಳಸುವಂತಹ ವಸ್ತು. ಅಗ್ನಿ ಶಾಮಕ ಇಲಾಖೆ ಮೊದಲು ಪೋಲಿಸ್ ಇಲಾಖೆಯ ಜೊತೆ ಕಾರ್ಯ ನಿರ್ವಹಿಸುತ್ತಿದ್ದು, ನಂತರದಲ್ಲಿ 1965 ರಲ್ಲಿ ಪ್ರತ್ಯೇಕ ಇಲಾಖೆಯಾಗಿ ಬೇರ್ಪಡೆಯಾಯಿತು. ಬೆಂಕಿಯ ವಿವಿಧ ಪ್ರಕಾರಗಳಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ತೆಗೆದುಕೊಳ್ಳುವ ಸಮಯೋಜಿತ ಉಪಾಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಬೆಂಕಿಯಲ್ಲಿ 4 ಪ್ರಕಾರಗಳಿದ್ದು ಅವುಗಳಲ್ಲಿ ಮೊದಲನೆಯದಾಗಿ ಸುಟ್ಟು ಬೂದಿಯಾಗುವ ವಸ್ತುಗಳಿಂದ ಹೊತ್ತಿ ಉರಿಯುವ ಬೆಂಕಿ. ಎರಡನೆಯದಾಗಿ ಆಯಿಲ್ ಪದಾರ್ಥಗಳಿಂದ ಹೊತ್ತಿ ಉರಿಯುವ ಬೆಂಕಿ, ಮೂರನೆಯದಾಗಿ ಅಡುಗೆ ಅನಿಲ ಸಿಲಿಂಡರಗಳ ಸ್ಫೋಟದಿಂದಾಗಿ ಹೊತ್ತಿ ಉರಿಯುವ ಬೆಂಕಿ ಹಾಗೂ ಕೊನೆಯದಾಗಿ ಎಲೆಕ್ಟ್ರಾನಿಕ್ ಪರಿಕರಗಳಿಂದ ಹೊತ್ತಿ ಉರಿಯುವ ಬೆಂಕಿ.

ಈ ಸಂದರ್ಭದಲ್ಲಿ ಎಣ್ಣೆ ಬೀಜ ಬೆಳೆಗಾರರ ಸಂಘದ ಅಧ್ಯಕ್ಷರಾದ ಅನ್ವರ ದಾಡಿವಾಲೆ, ಉಪಾಧ್ಯಕ್ಷರಾದ ಲಕ್ಷ್ಮಣ ಕಬಾಡೆ, ಜ್ಯೋತಿ ವಿವಿಧ ಉದ್ದೇಶಗಳ ಸಂಘದ ಉಪಾಧ್ಯಕ್ಷರಾದ ದಿನಕರ ಪೆಟಕರ, ವಿವಿಧ ಅಂಗ ಸಂಸ್ಥೆಗಳ ಆಡಳಿತ ಮಂಡಳಿ ನಿರ್ದೇಶಕರಾದ ಲಕ್ಷ್ಮಿ ಮಗದುಮ್ಮ, ಬಾಳಾಬಾಯಿ ನಾಯಿಕ, ಮಂಗಲ ಜೊಲ್ಲೆ, ಶಾಲೆಯ ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ವಿ ಆರ್. ಭಿವಸೆ ಸ್ವಾಗತಿಸಿದರು. ಮುಖ್ಯೋಪಾಧ್ಯಾನಿಯರಾದ ಎಸ್ ಜಿ. ಕಾಮತ ವಂದಿಸಿದರು.

loading...